‘ಘೋಸ್ಟ್’ ಬಹಳ ವಿಶೇಷ’ ಎಂದ ಶಿವಣ್ಣ, ಶಕ್ತಿಧಾಮಕ್ಕೂ ಇದೆ ಲಿಂಕ್

Ghost: ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಅಕ್ಟೋಬರ್ 19ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಕ್ಕೂ ಶಕ್ತಿಧಾಮಕ್ಕೂ ಇರುವ ನಂಟಿನ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.

'ಘೋಸ್ಟ್' ಬಹಳ ವಿಶೇಷ' ಎಂದ ಶಿವಣ್ಣ, ಶಕ್ತಿಧಾಮಕ್ಕೂ ಇದೆ ಲಿಂಕ್
'ಘೋಸ್ಟ್'
Follow us
ಮಂಜುನಾಥ ಸಿ.
|

Updated on: Oct 18, 2023 | 8:14 PM

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್‘ (Ghost) ಸಿನಿಮಾ ನಾಳೆ (ಅಕ್ಟೋಬರ್ 19) ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಶಿವರಾಜ್ ಕುಮಾರ್ ಸಖತ್ ರಗಡ್ ಲುಕ್​ನಲ್ಲಿ, ಭಿನ್ನ-ಭಿನ್ನ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಜೈಲರ್’ ಸಿನಿಮಾ ಕ್ಯಾಮಿಯೋದಿಂದ ಈಗಾಗಲೇ ಭಾರತದೆಲ್ಲೆಡೆ ಕ್ರೇಜ್ ಸೃಷ್ಟಿಸಿರುವ ಶಿವಣ್ಣನ ಈ ‘ಗ್ಯಾಂಗ್​ಸ್ಟರ್’ ಸಿನಿಮಾ ನೋಡಲು ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ. ಬಿಡುಗಡೆಯ ಹಿಂದಿನ ದಿನದವರೆಗೂ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಶಿವಣ್ಣ, ‘ಘೋಸ್ಟ್’ಗೂ ಶಕ್ತಿಧಾಮಕ್ಕೂ ಇರುವ ಲಿಂಕ್​ ಬಗ್ಗೆ ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

”ನಮ್ಮ ತಾಯಿಯವರ ಮೆಚ್ಚಿನ ಸ್ಥಳ ಶಕ್ತಿಧಾಮದಲ್ಲಿ ಈ ಸಿನಿಮಾದ ಕತೆ ಹೇಳಿದರು. ಅಲ್ಲಿ ಬಂದು ಕತೆ ಹೇಳಿದಾಗ ನನಗೆ ಬಹಳ ಇಷ್ಟವಾಯಿತು. ಸಿನಿಮಾದ ಹೆಸರೇನು ಎಂದು ಕೇಳಿದೆ, ‘ಘೋಸ್ಟ್’ ಎಂದರು ಶ್ರೀನಿ. ಕೂಡಲೇ ಒಪ್ಪಿಗೆ ಸೂಚಿಸಿದೆ. ಶಕ್ತಿಧಾಮದ ಪಾಸಿಟಿವ್ ವೈಬ್ಸ್​ನಿಂದಲೋ ಏನೋ ಅಂದಿನಿಂದಲೂ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಯ್ತು. ಕತೆ ಕೇಳಿದ ಎರಡೇ ದಿನಕ್ಕೆ ಸಿನಿಮಾ ಹೆಸರು ಘೋಷಣೆ ಮಾಡಿದಿವಿ. ಹತ್ತು ದಿನಕ್ಕೆ ಮುಹೂರ್ತ ಮಾಡಿದೆವು, ಹತ್ತು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಬಹಳ ಸುಸೂತ್ರವಾಗಿ ನಡೆದುಕೊಂಡು ಹೋಯಿತು” ಎಂದಿದ್ದಾರೆ ಶಿವರಾಜ್ ಕುಮಾರ್.

”ಸಿನಿಮಾದ ಕತೆ, ಚಿತ್ರಕತೆ ಎಲ್ಲವೂ ಮೊದಲೇ ರೆಡಿಯಿತ್ತು. ಯಾವುದನ್ನೂ ಸಹ ಚಿತ್ರೀಕರಣದ ಮಧ್ಯದಲ್ಲಿ ನಾವು ಬದಲಾಯಿಸಲು ಪ್ರಯತ್ನಿಸಲಿಲ್ಲ. ಪೊಲೀಸ್ ಪಾತ್ರಕ್ಕೆ ಜಯರಾಂ ಎಂಬುದು ಮೊದಲೇ ನಿಶ್ಚಿತವಾಗಿತ್ತು, ಮತ್ತೊಂದು ಪಾತ್ರಕ್ಕೆ ಅನುಪಮ್ ಖೇರ್ ಬೇಕು ಅಂದುಕೊಂಡಿದ್ದೆವು. ಅವರು ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು, ಆದರೆ ಅದೂ ಸಾಧ್ಯವಾಯಿತು. ಬಹಳ ಪ್ರೀತಿಯಿಂದ ಬಂದು ನಟಿಸಿದರು ಅನುಪಮ್ ಖೇರ್. ಅರ್ಜುನ್ ಜನ್ಯ ಸಂಗೀತವೂ ಅಷ್ಟೆ ಎಲ್ಲವೂ ನಾವಂದುಕೊಂಡಂತೆ ತನ್ನಂತಾನೆ ಸುಲಭವಾಗಿ ನಡೆಯಿತು” ಎಂದರು ಶಿವರಾಜ್ ಕುಮಾರ್.

ಇದನ್ನೂ ಓದಿ:ಶಿವಣ್ಣ ನಟಿಸಿರುವ ‘ಘೋಸ್ಟ್’ ಸಿನಿಮಾದ ವಿಶೇಷತೆಗಳಿವು

”ಅರ್ಜುನ್ ಜನ್ಯಾಗೆ ಈ ಸಿನಿಮಾ ಬಹಳ ಸವಾಲಿನದ್ದು. ಸಾಮಾನ್ಯ ಸಿನಿಮಾ ಹಾಡಿನಂತೆ ಈ ಸಿನಿಮಾದ ಹಾಡುಗಳು ಇಲ್ಲ. ಬಹಳ ಡಿಫರೆಂಟ್ ಆಗಿವೆ. ಅದಕ್ಕೆಂದೆ ಓಜಿಎಂ ಎಂದು ಮಾಡಿ ನಾಲ್ಕು ಭಾಷೆಯಲ್ಲಿ ಒಂದೇ ಹಾಡು ಮಾಡಿದೆವು, ಅದು ಸಹ ವರ್ಕೌಟ್ ಆಯಿತು. ಹೀಗೆ ಒಂದಕ್ಕೊಂದು ಪಾಸಿಟಿವ್ ವಿಷಯಗಳೇ ಸಿನಿಮಾಕ್ಕೆ ಸೇರಿಕೊಳ್ಳುತ್ತಾ ಹೋಯಿತು. ಸಿನಿಮಾದ ಕತೆ ಕೇಳಿದ ಹತ್ತು ತಿಂಗಳಲ್ಲಿ ಸಿನಿಮಾ ರೆಡಿಯಾಗಿ ಹನ್ನೊಂದನೇ ತಿಂಗಳಿಗೆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ” ಎಂದರು ಶಿವಣ್ಣ.

‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಶಿವಣ್ಣ ಹಲವು ಭಿನ್ನ ಷೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಜೊತೆಗೆ ಅನುಪಮ್ ಖೇರ್, ಜಯರಾಂ ಅವರುಗಳು ಸಹ ಈ ಸಿನಿಮಾದಲ್ಲಿದ್ದಾರೆ. ‘ಬೀರ್​ಬಲ್’ ಖ್ಯಾತಿಯ ಶ್ರೀನಿ ನಿರ್ದೇಶಿಸಿರುವ ಈ ಸಿನಿಮಾಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ