ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅವರು ಈಗ ಪರಭಾಷೆಯಲ್ಲೂ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ಅವರು ನಟಿಸಿದ ಬಳಿಕ ತಮಿಳು ಮತ್ತು ತೆಲುಗು ನಿರ್ಮಾಪಕರು ಶಿವಣ್ಣನ ಕಾಲ್ಶೀಟ್ಗಾಗಿ ಮುಗಿಬಿದ್ದಿದ್ದಾರೆ. ರಾಮ್ ಚರಣ್ (Ram Charan) ನಟಿಸಲಿರುವ 16ನೇ ಸಿನಿಮಾದಲ್ಲಿ ಶಿವರಾಜ್ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಉಪ್ಪೆನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾವನ್ನು ಸದ್ಯಕ್ಕೆ RC16 ಎಂದು ಕರೆಯಲಾಗುತ್ತಿದೆ. ಈ ಸಿನಿಮಾಗೆ ಸಂಬಂಧಿಸಿದಂತೆ ಶಿವಣ್ಣ (Shivanna) ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್ನಲ್ಲಿ ‘RC16’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು (ಮಾರ್ಚ್ 20) ನಡೆದಿದೆ. ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಕಾರಣಾಂತರಗಳಿಂದ ಶಿವರಾಜ್ಕುಮಾರ್ ಅವರು ಈ ಇವೆಂಟ್ನಲ್ಲಿ ಭಾಗಿಯಾಗಿಲ್ಲ. ಆದರೂ ಸಂದರ್ಶವೊಂದರಲ್ಲಿ ಈ ಸಿನಿಮಾದ ಬಗ್ಗೆ ಶಿವಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ರಾಮ್ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.
ಪತ್ರಕರ್ತ ಬಿ. ಗಣಪತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಶಿವರಾಜ್ಕುಮಾರ್ ಅವರು ನಿರ್ದೇಶಕ ಬುಚ್ಚಿ ಬಾಬು ಸನಾ ಹಾಗೂ ರಾಮ್ ಚರಣ್ ಬಗ್ಗೆ ಮಾತನಾಡಿದ್ದಾರೆ. ‘ರಾಮ್ ಚರಣ್ ಅವರ ಒಂದು ತೆಲುಗು ಸಿನಿಮಾ ಆಫರ್ ಬಂದಿದೆ. ಅದು ಬೇರೆ ಥರ ಇದೆ. ಆ ಪಾತ್ರದ ತೂಕ, ಅವರು ಹೆಂಗೆ ಯೋಚನೆ ಮಾಡುತ್ತಾರೆ ಎಂಬುದೇ ಗೊತ್ತಿಲ್ಲ. ರಾಮ್ ಚರಣ್ ಕೂಡ ಥ್ರಿಲ್ ಆಗಿಬಿಟ್ಟರು. ‘ಶಿವಣ್ಣ ಆ್ಯಕ್ಟ್ ಮಾಡುತ್ತಾರಾ. ನಂಗೆ ಬಹಳ ಇಷ್ಟ’ ಅಂದ್ರು. ನನಗೂ ರಾಮ್ ಚರಣ್ ಅಂದ್ರೆ ತುಂಬ ಇಷ್ಟ’ ಎಂದು ಶಿವಣ್ಣ ಹೇಳಿದ್ದಾರೆ.
• @NimmaShivanna about #RC16 :
I’m Quite Shocked When @BuchiBabuSana Came with #RamCharan‘s New Film to me, it is Completely on another level. I Wondered How He Imagined that Character & I Love @AlwaysRamCharan Soo Much he is a beautiful human being & Extraordinary Actor. The… pic.twitter.com/paDwLbTMcd
— Trends RamCharan ™ (@TweetRamCharan) March 20, 2024
‘ರಾಮ್ ಚರಣ್ ಒಬ್ಬ ಅದ್ಭುತವಾದ ವ್ಯಕ್ತಿ. ಅದ್ಭುತವಾದ ನಟ. ನನ್ನ ಪಾತ್ರದಲ್ಲಿ ವಿಭಿನ್ನತೆ ಇದೆ, ಒಂದು ಉದ್ದೇಶ ಉದೆ. ಆ ಪಾತ್ರ ನಾನು ಮಾಡಿದರೆ ಆ ಉದ್ದೇಶಕ್ಕೆ ಅರ್ಥ ಎಂದು ನಿರ್ದೇಶಕ ಬುಚ್ಚಿ ಬಾಬು ಸನಾ ಹೇಳಿದ್ರು. ಅವರು ಕೈ ಕಟ್ಟಿಕೊಂಡು ಕುಳಿತು ಕಥೆ ಹೇಳಿದರು. ನಿರ್ದೇಶಕರಾದ ನೀವು ಈ ರೀತಿ ಕುಳಿತುಕೊಳ್ಳಬಾರದು, ಆರಾಮಾಗಿ ಕುಳಿತುಕೊಂಡು ಕಥೆ ಹೇಳಿ ಎಂದೆ. ಕಥೆ ಹೇಳಲು ಅರ್ಧ ಗಂಟೆ ಕೊಡಿ ಎಂದಿದ್ದರು. ನಾನು ಒಂದೂವರೆ ಗಂಟೆ ಕಥೆ ಕೇಳಿದೆ. ಅವರು ಇಡೀ ಕಥೆ ಹೇಳಿದರು’ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ: ‘ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಅದಕ್ಕಾಗಿಯೇ..’: ಮನದ ಮಾತು ತಿಳಿಸಿದ ಶಿವಣ್ಣ
ಕನ್ನಡದಲ್ಲಿ ಶಿವಣ್ಣ ಮಾತನಾಡಿದ್ದನ್ನು ರಾಮ್ ಚರಣ್ ಅವರ ಅಭಿಮಾನಿಗಳು ತೆಲುಗಿಗೆ ಭಾಷಾಂತರ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ದೊಡ್ಡ ಪರದೆಯಲ್ಲಿ ಶಿವರಾಜ್ಕುಮಾರ್ ಮತ್ತು ರಾಮ್ ಚರಣ್ ಅವರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.