ಒಂದೇ ಟೇಕ್ನಲ್ಲಿ ನಿರ್ಮಾಣ ಆಯ್ತು ‘ಯಂಗ್ ಮ್ಯಾನ್’ ಸಿನಿಮಾ; ಜೂನ್ 7ಕ್ಕೆ ಬಿಡುಗಡೆ
‘ಯಂಗ್ ಮ್ಯಾನ್’ ಸಿನಿಮಾಗೆ ಮುತ್ತುರಾಜ್ ಅವರು ನಿರ್ದೇಶನ ಮಾಡಿದ್ದಾರೆ. ವಿಜಯಲಕ್ಷ್ಮಿ ರಾಮೇಗೌಡ ಅವರು ಬಂಡವಾಳ ಹೂಡಿದ್ದಾರೆ. ಸುನೀಲ್ ಗೌಡ, ಹರೀಶ್ ಆಚಾರ್ಯ, ರಾಶಿಕಾ ಕರಾವಳಿ, ಶ್ರುತಿ ಗೌಡ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸಿಂಗಲ್ ಟೇಕ್ನಲ್ಲಿ ಮೂಡಿಬಂದ ಈ ಸಿನಿಮಾ ಜೂನ್ 7ರಂದು ರಿಲೀಸ್ ಆಗಲಿದೆ.

ಚಿತ್ರರಂಗದಲ್ಲಿ ಒಂದಿಲ್ಲೊಂದು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಏನಾದರೂ ಡಿಫರೆಂಟ್ ಆಗಿ ಮಾಡಬೇಕು ಎಂಬ ತವಕದಲ್ಲಿ ಸಿನಿಮಾ ಮಂದಿ ಇರುತ್ತಾರೆ. ಈ ಮೊದಲು ಕನ್ನಡ ಚಿತ್ರರಂಗದಲ್ಲಿ (Sandalwood) ಶಂಕರ್ ನಾಗ್ ಅಭಿನಯದ ‘ಇದು ಸಾಧ್ಯ’ ಸಿನಿಮಾ (Kannada Cinema) ಕೇವಲ 36 ಗಂಟೆಯಲ್ಲಿ ಚಿತ್ರೀಕರಣ ಮುಗಿಸಿ ದಾಖಲೆ ಬರೆದಿತ್ತು. ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಬಂದ ‘ದಕ್ಷ’ ಸಿನಿಮಾವನ್ನು ಸಿಂಗಲ್ ಟೇಕ್ನಲ್ಲಿ ಚಿತ್ರಿಸಲಾಗಿತ್ತು. ಈಗ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಇನ್ನೊಂದು ಸಿಂಗಲ್ ಟೇಕ್ (Single Take) ಪ್ರಯತ್ನ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಹೊಸಬರ ‘ಯಂಗ್ ಮ್ಯಾನ್’ ಸಿನಿಮಾ ಕೂಡ ಸಿಂಗಲ್ ಟೇಕ್ನಲ್ಲಿ ಚಿತ್ರಿತವಾಗಿದೆ. ಉತ್ಸಾಹಿ ತಂಡದವರು ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಜೂನ್ 7ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟಕ್ಕೂ ಈ ಸಿನಿಮಾ ತಂಡದವರು ಒಂದೇ ಟೇಕ್ನಲ್ಲಿ ಶೂಟಿಂಗ್ ಮಾಡಲು ಕಾರಣ ಏನು? ಸಿನಿಮಾದ ಕಹಾನಿ ಏನು ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಿ ತಿಳಿಯಬೇಕು.
‘ಯಂಗ್ ಮ್ಯಾನ್’ ಸಿನಿಮಾಗೆ ಮುತ್ತುರಾಜ್ ಅವರು ನಿರ್ದೇಶನ ಮಾಡಿದ್ದಾರೆ. ವಿಜಯಲಕ್ಷ್ಮಿ ರಾಮೇಗೌಡ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಮುರಳಿ ಎಸ್.ವೈ. ಅವರು ಕೆಲಸ ಮಾಡಿದ್ದಾರೆ. ಲೋಕಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗರಾಜ್ ವೀನಸ್ ಮೂರ್ತಿ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್, ಶ್ರೇಯಸ್ ಮಂಜು ನಟನೆಯ ಹೊಸ ಸಿನಿಮಾಗೆ ಎಸ್. ನಾರಾಯಣ್ ನಿರ್ದೇಶನ
ಡಿಎಸ್ಕೆ ಸಿನಿಮಾಸ್ ಸಂಸ್ಥೆಯ ಮುಖ್ಯಸ್ಥರಾದ ಸುನಿಲ್ ಕುಂಬಾರ್ ಅವರು ‘ಯಂಗ್ ಮ್ಯಾನ್’ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದೇಶಪ್ರೇಮದ ಕುರಿತಾದ ಕಥಾಹಂದರ ಇರಲಿದೆ. ಸುನೀಲ್ ಗೌಡ, ಹರೀಶ್ ಆಚಾರ್ಯ, ರಾಶಿಕಾ ಕರಾವಳಿ, ಶ್ರುತಿ ಗೌಡ, ಆನಂದ್ ಕುಮಾರ್, ಋಷಿ ಅನಿತಾ, ನಯನಾ ಪುಟ್ಡಸ್ವಾಮಿ, ತನುಜಾ, ಜಯರಾಮ್, ಅನುಕುಮಾರ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.