ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು

|

Updated on: Nov 08, 2024 | 8:46 AM

ಸೋನು ನಿಗಮ್ ಮತ್ತು ಸಂಜಿತ್ ಹೆಗಡೆ ಅವರ ಜುಗಲ್ಬಂಧಿಯ ‘ಮಾಯಾವಿ’ ಹಾಡು ಮೆಚ್ಚುಗೆ ಪಡೆದಿದೆ. ಸಂಜಿತ್ ಹೆಗಡೆ ಅವರು ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಸಾಹಿತ್ಯ ಹಾಗೂ ಸಂಗೀತ ಎರಡೂ ಕಿವಿಗೆ ಇಂಪು ನೀಡುತ್ತವೆ.

ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು
ಸೋನು-ಸಂಜಿತ್
Follow us on

ಸೋನು ನಿಗಮ್ ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಅವರ ಕಂಠ ಅನೇಕರಿಗೆ ಇಷ್ಟ ಆಗುತ್ತದೆ. ಇನ್ನು, ಸೋನು ನಿಗಮ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಪರಭಾಷೆಯವರಾದರೂ ಕನ್ನಡದ ಮಗನಂತೆ ಇದ್ದಾರೆ. ಇಬ್ಬರೂ ಒಂದಾಗಿ ಹಾಡನ್ನು ಹೇಳಿದರೆ? ಹೀಗೊಂದು ಅಪರೂಪೂದ ಸಮ್ಮಿಲನಕ್ಕೆ ‘ಮಾಯಾವಿ..’ ಹಾಡು ಸಾಕ್ಷಿ ಆಗಿದೆ. ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಸಂಜಿತ್ ಹೆಗಡೆ ಅವರು ಹಾಡು ಹೇಳುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು ತಮ್ಮದೇ ಆಲ್ಬಂ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ‘ಮಾಯಾವಿ..’ ಹಾಡನ್ನು ಅವರೇ ಕಂಪೋಸ್ ಮಾಡಿದ್ದಾರೆ. ಈ ಹಾಡಿಗೆ ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಇದನ್ನು ಗೌತಮ್ ಹೆಬ್ಬಾರ್, ಸನ್ನಿ ಎಂಆರ್ ಹಾಗೂ ಸಂಜಿತ್ ಹೆಗಡೆ ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ‘ಸಲಿಮ್ ಸುಲೇಮಾನ್ ಮ್ಯೂಸಿಕ್’ (Salim Sulaiman Music) ಯೂಟ್ಯೂಬ್ ಚಾನೆಲ್​ನಲ್ಲಿ ಹಾಡು ರಿಲೀಸ್ ಆಗಿದೆ.

‘ಮಾಯಾವಿ.. ಮಿನುಗು ನೀನು.. ಮುಂಜಾನೆ ಬಿಸಿಲು ನೀನು ಸಾಲದಿರು ಹಾಡು ನೀನು ಬೇಕೆನಿಸೋ ಸಂಜೆ ನೀನು..’ ಎಂಬ ಸಾಲುಗಳಿಂದ ಹಾಡು ಆರಂಭ ಆಗುತ್ತದೆ. ಸಂಜಿತ್ ಹೆಗಡೆ ಹಾಗೂ ಸೋನು ನಿಗಮ್ ಜುಗಲ್​ ಬಂಧಿ ವೀಕ್ಷಕರಿಗೆ ಇಷ್ಟ ಆಗಿದೆ. ಸಾಹಿತ್ಯ ಮತ್ತು ಮ್ಯೂಸಿಕ್ ಕಿವಿಗೆ ಇಂಪು ನೀಡುತ್ತದೆ. ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ‘ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’; ಸೋನು ನಿಗಮ್ ಹೇಳಿದ ಈ ಮಾತು ನೆನಪಿದೆಯೇ?

ಈ ಮೊದಲು ಮಾತನಾಡಿದ್ದ ಸಂಜಿತ್ ಹೆಗಡೆ ಅವರು, ‘ತಮ್ಮದೇ ಆಲ್ಬಂ ಮಾಡುವತ್ತ ಹೆಚ್ಚು ಗಮನ ಹರಿಸುತ್ತಿದ್ದೇನೆ’ ಎಂದಿದ್ದರು. ಈ ಮೊದಲು ‘ನಂಗೆ ಅಲ್ಲವಾ..’ ಆಲ್ಬಂ ರಿಲೀಸ್ ಮಾಡಿದ್ದರು. ಈ ಹಾಡನ್ನು ಕನ್ನಡಿಗರು ಮಾತ್ರವಲ್ಲದೆ, ಪರಭಾಷಿಗರು ಕೂಡ ಇಷ್ಟ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.