ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ. ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಮಾಲ್ಡೀವ್ಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ಆಗಿದ್ದಾರೆ. ಈ ಖುಷಿಯಲ್ಲಿ ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.
ಸೋನು ಶ್ರೀನಿವಾಸ ಗೌಡ ಅವರ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದರಿಂದ ಅವರು ಬೆಳಕಿಗೆ ಬಂದರು. ಆದರೆ, ಅವರು ಇದರಿಂದ ಅಂಜಲಿಲ್ಲ. ಟೀಕೆಗಳನ್ನು ಎದುರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆದರು. ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದರು. ಇದರಿಂದ ಸೋನು ಶ್ರೀನಿವಾಸ ಗೌಡ ಅವರಿಗೆ ಅಭಿಮಾನಿ ಬಳಗ ಹಿರಿದಾಗುತ್ತಾ ಬಂತು. ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟ ಅವರು ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡರು. ವಿಡಿಯೋ ಏಕೆ ಲೀಕ್ ಆಯಿತು, ಅದನ್ನು ಲೀಕ್ ಮಾಡಿದ್ದು ಯಾರು ಎಂಬುದನ್ನು ಅವರು ಹೇಳಿಕೊಂಡರು. ಬಿಗ್ ಬಾಸ್ನಿಂದ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿತು.
ಈಗ ಸೋನು ಶ್ರೀನಿವಾಸ್ ಗೌಡ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ. ಇದಕ್ಕಾಗಿ ಅವರು ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ‘ಇದು ಒಂದು ಮಿಲಿಯನ್ ಫಾಲೋವರ್ಸ್’ ಸಿಕ್ಕಿದ್ದಕ್ಕೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅನೇಕರು ಈ ವಿಡಿಯೋಗೆ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಎಷ್ಟೇ ಟ್ರೋಲ್ ಆದರೂ ಜಗ್ಗಲ್ಲ ಸೋನು ಶ್ರೀನಿವಾಸ್ ಗೌಡ
ಮಾಲ್ಡೀವ್ಸ್ಗೆ ತೆರಳಿದ ಬಳಿಕ ಸೋನು ಅವರು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅನೇಕರು ಅಶ್ಲೀಲ ಪದ ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಈ ಮೊದಲು ಕಮೆಂಟ್ ಆಯ್ಕೆಯನ್ನು ಆಫ್ ಮಾಡುತ್ತಿದ್ದರು. ಈಗ ಅದನ್ನೂ ಅವರು ನಿಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ