ರಾಜ್​ಕುಮಾರ್ ಕಂಠಸಿರಿಗೆ ಮರುಳಾಗಿದ್ದ ಎಸ್​​ಪಿಬಿ; ಅವರ ಹೊಗಳಿಕೆಯನ್ನು ನೀವೇ ಕೇಳಿ

ವರನಟ ಡಾ.ರಾಜ್​ಕುಮಾರ್ ಕೇವಲ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಪರಭಾಷೆಯವರೂ ರಾಜ್​ಕುಮಾರ್ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಏಕೆ ಎಸ್​ಪಿ ಬಾಲಸುಬ್ರಮಣ್ಯ ಅವರು ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿದ್ದರು.

ರಾಜ್​ಕುಮಾರ್ ಕಂಠಸಿರಿಗೆ ಮರುಳಾಗಿದ್ದ ಎಸ್​​ಪಿಬಿ; ಅವರ ಹೊಗಳಿಕೆಯನ್ನು ನೀವೇ ಕೇಳಿ
ರಾಜ್​​ಕುಮಾರ್​-ಎಸ್​ಪಿಬಿ

Updated on: Feb 28, 2025 | 8:42 AM

ರಾಜ್​ಕುಮಾರ್ ಕಂಠದ ಬಗ್ಗೆ ಸಂಜಯ್ ನಾಗ್ ಹೆಸರಿನ ಯುವ ಗಾಯಕ ಟೀಕೆ ಮಾಡಿದ್ದರು. ರಾಜ್​ಕುಮಾರ್ ಓರ್ವ ಹಾರಿಬಲ್ ಗಾಯಕ ಎಂದು ಅವರು ಹೇಳಿದ್ದರು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಂಜಯ್ ಬಗ್ಗೆ ಟೀಕೆಗಳು ವ್ಯಕ್ತವಾದವು. ರಾಜ್​ಕುಮಾರ್ ಓರ್ವ ಶ್ರೇಷ್ಠ ಗಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಸಾವಿರಾರು ಹಾಡುಗಳನ್ನು ಹಾಡಿ ಸಂಗೀತ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ ಎಸ್​​ಪಿ ಬಾಲಸುಬ್ರಮಣ್ಯಂ ಅವರೂ ರಾಜ್​ಕುಮಾರ್ ಧ್ವನಿಗೆ ಮರುಳಾಗಿದ್ದರು.

‘ರಾಜ್​ಕುಮಾರ್ ಒಳ್ಳೆಯ ಗಾಯಕರು. ಕ್ಲಾಸಿಕಲ್ ಮ್ಯೂಸಿಕ್​ನ ಕಲಿತವರು. ಆದರೂ ಅವರು ಹಾಡಲಿಲ್ಲ. ತಾವು ಹಾಡದೇ ಇರುವುದರಿಂದ ಬೇರೆಯವರಿಗೆ ಅವಕಾಶ ಸಿಗುತ್ತಿದೆ. ಅದಕ್ಕೆ ಏಕೆ ಅಡ್ಡಿಯಾಗಬೇಕು ಎಂಬುದು ರಾಜ್​ಕುಮಾರ್ ಆಲೋಚನೆ ಆಗಿತ್ತು’ ಎಂದು ಅಣ್ಣಾವ್ರ ವಿಶಾಲ ಆಲೋಚನೆಯ ಬಗ್ಗೆ ಬಾಲಸುಬ್ರಮಣ್ಯಂ ಅವರು ಹೇಳಿದ್ದರು.

‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು ರಾಜ್​ಕುಮಾರ್ ಬಳಿ ಹಾಡಿಸಬೇಕು ಎಂದು ಸಂಗೀತ ಸಂಯೋಜಕ ಜಿಕೆ ವೆಂಕಟೇಶ್ ಒತ್ತಾಯಿಸಿದರು. ‘ಈ ಹಾಡು ಹಾಡಿದ ಬಳಿಕ ಎಲ್ಲರೂ ರಾಜ್​ಕುಮಾರ್ ಅವರೇ ಹಾಡಬೇಕು ಎಂದು ಒತ್ತಡ ಹೇರೋಕೆ ಪ್ರಾರಂಭಿಸಿದರು. ಆ ಬಳಿಕ ಅವರು ಈ ಹಾಡುಗಳನ್ನು ಹಾಡಿದರು’ ಎಂದು ಎಸ್​​ಪಿಬಿ ಹೇಳಿದ್ದರು.

ಇದನ್ನೂ ಓದಿ
ಅಣ್ಣಾವ್ರು ಸಿನಿಮಾಗಳು ಎವರ್​ಗ್ರೀನ್ ಆಗಲು ಅವರು ಬಳಸುತ್ತಿದ್ದ ತಂತ್ರವೇನು?
ರಾಜ್​ಕುಮಾರ್ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ
ಪುನೀತ್ ಬರ್ತ್​ಡೇಗೆ ಬಿಗ್ ಸರ್​ಪ್ರೈಸ್; ಹಿಟ್ ಚಿತ್ರ ರೀ-ರಿಲೀಸ್
ದ್ವಾರಕೀಶ್ ವಿಧಿವಶ ಬಗ್ಗೆ ಶಿವಮೊಗ್ಗದಿಂದಲೇ ಶಿವರಾಜ್​​ಕುಮಾರ್ ಭಾವುಕ ಮಾತು

ಇದನ್ನೂ ಓದಿ: ರಾಜ್​ಕುಮಾರ್ ಸಿನಿಮಾಗಳು ಎವರ್​ಗ್ರೀನ್ ಆಗಲು ಅವರು ಬಳಸುತ್ತಿದ್ದುದು ಇದೇ ತಂತ್ರ

ರಾಜ್​ಕುಮಾರ್ ಅವರು ಹಾಡಿದ ‘ಯಾರೇ ಕೂಗಾಡಲಿ..’ ಹಾಡು ಅಪಾರ ಮನ್ನಣೆ ಪಡೆಯಿತು. ರಾಜ್​ಕುಮಾರ್ ಶ್ರೇಷ್ಠ ಗಾಯಕ ಎಂಬುದು ಈ ಹಾಡಿನ ಮೂಲಕ ಎಲ್ಲರಿಗೂ ಗೊತ್ತಾಯಿತು. ಆ ಬಳಿಕ ಅವರು ಅನೇಕ ಹಾಡುಗಳನ್ನು ಹಾಡಿದರು. ಇದಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಗಳು ಕೂಡ ಬಂದವು.

ವಿವಾದ

‘ರಾಜ್​ಕುಮಾರ್ ಓರ್ವ ಉತ್ತಮ ಕಲಾವಿದ. ಆದರೆ, ಅವರು ಓರ್ವ ಹಾರಿಬಲ್ ಸಿಂಗರ್’ ಎಂದು ಸಂಜಯ್ ನಾಗ್ ಟ್ವೀಟ್ ಮಾಡಿದ್ದರು. ಇದನ್ನು ಅನೇಕರು ಟೀಕಿಸಿದರು. ಅವರ ಬಗ್ಗೆ ಅದೆಷ್ಟು ಟೀಕೆಗಳು ವ್ಯಕ್ತವಾದವು ಎಂದರೆ ತಮ್ಮ ಟ್ವಿಟರ್ ಖಾತೆಯನ್ನೇ ಡಿ ಆ್ಯಕ್ಟೀವೇಟ್ ಮಾಡಬೇಕಾದ ಪರಿಸ್ಥಿತಿ ಅವರಿಗೆ ಬಂದೊದಗಿತು. ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.