ರಾಜ್ಕುಮಾರ್ ಸಿನಿಮಾಗಳು ಎವರ್ಗ್ರೀನ್ ಆಗಲು ಅವರು ಬಳಸುತ್ತಿದ್ದುದು ಇದೇ ತಂತ್ರ
ಜಯಮಾಲಾ ಅವರು ವರನಟ ಡಾ. ರಾಜ್ಕುಮಾರ್ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಸಿನಿಮಾಗಳು ಎವರ್ಗ್ರೀನ್ ಆಗಿ ಉಳಿಯಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ರಾಜ್ ಕುಮಾರ್ ಅವರ ಚಿತ್ರಗಳ ದೀರ್ಘಕಾಲಿಕ ಯಶಸ್ಸು ಮತ್ತು ಒಟಿಟಿ ಯುಗದಲ್ಲಿನ ಬದಲಾವಣೆಗಳನ್ನು ಕುರಿತು ಇಲ್ಲಿ ವಿವರಿಸಲಾಗಿದೆ.

ರಾಜ್ಕುಮಾರ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಕಥೆಯೊಂದಿಗೆ ಅವರು ಬಂದಿದ್ದಾರೆ. ಒಂದರಲ್ಲಿ ಹಳ್ಳಿ ಹುಡುಗನ ಪಾತ್ರ ಮಾಡಿದರೆ ಮತ್ತೊಂದರಲ್ಲಿ ಪೊಲೀಸ್ ಅಧಿಕಾರಿ, ಮತ್ತೊಂದರಲ್ಲಿ ಪೌರಾಣಿಕ ಪಾತ್ರ. ಹೀಗೆ ಎಲ್ಲವೂ ಭಿನ್ನ. ರಾಜ್ಕುಮಾರ್ ಸಿನಿಮಾಗಳು ಎವರ್ಗ್ರೀನ್ ಆಗಿ ಇರಲು ಕಾರಣ ಏನು ಎಂಬುದನ್ನು ಜಯಮಾಲಾ ಅವರು ರಿವೀಲ್ ಮಾಡಿದ್ದರು. ಆ ಬಗ್ಗೆ ಇಂದು ಚರ್ಚಿಸೋಣ.
ಜಯಮಾಲಾ ಅವರಿಗೆ ಇಂದು (ಫೆಬ್ರವರಿ 28) 66ನೇ ವರ್ಷದ ಜನ್ಮದಿನ. ಇತ್ತೀಚೆಗೆ ಅವರು ಮಗಳ ಮದುವೆಯನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಿದರು. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಆಫರ್ಗಳು ಅವರನ್ನು ಹುಡುಕಿ ಬಂದವು. ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ರಾಜ್ಕುಮಾರ್ ಜೊತೆ ವಿಶೇಷ ಬಾಂಧವ್ಯ ಇತ್ತು.
ರಾಜ್ಕುಮಾರ್ ನಟನೆಯ ‘ದಾರಿ ತಪ್ಪಿದ ಮಗ’ ಸಿನಿಮಾದಲ್ಲಿ ಬುಂದೇಲ್ಪುರದ ರಾಜಕುಮಾರಿ ಪಾತ್ರ ಮಾಡಿದರು ಜಯಮಾಲಾ. ‘ಬಡವರ ಬಂಧು’, ‘ಪ್ರೇಮದ ಕಾಣಿಕೆ’ ಮೊದಲಾದ ಸಿನಿಮಾಗಳಲ್ಲಿ ಜಯಮಾಲಾ ಅವರು ರಾಜ್ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದರು. ಹೀಗಾಗಿ, ಇವರ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಅಣ್ಣಾವ್ರನ್ನು ಹತ್ತಿರದಿಂದ ಜಯಮಾಲಾ ಕಂಡಿದ್ದರು. ಅವರ ಸಿನಿಮಾಗಳು ಎವರ್ಗ್ರೀನ್ ಆಗಲು ಕಾರಣ ಏನು ಎಂಬುದನ್ನು ಜಯಮಾಲಾ ವಿವರಿಸಿದ್ದರು.
ಸ್ಕ್ರಿಪ್ಟ್ನ ಆಯ್ಕೆ ಮಾಡಿಕೊಳ್ಳುವುದರಿಂದ ಹಿಡಿದು ನಂತರದ ಚರ್ಚೆ, ಸಿನಿಮಾ ಶೂಟಿಂಗ್ ಹಾಗೂ ರಿಲೀಸ್ವರೆಗೆ ರಾಜ್ಕುಮಾರ್ ಅವರು ಜೀವವನ್ನೇ ಇಟ್ಟಿರುತ್ತಾರೆ ಅನ್ನೋದು ಜಯಮಾಲಾ ಅಭಿಪ್ರಾಯ. ಈ ಕಾರಣದಿಂದಲೇ ಸಿನಿಮಾಗಳು ಎವರ್ಗ್ರೀನ್ ಆಗಿವೆ ಎಂಬುದು ಜಯಮಾಲಾ ಅಭಿಪ್ರಾಯ.
ಇದನ್ನೂ ಓದಿ: Rajkumar: ರಾಜ್ಕುಮಾರ್ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ
100 ದಿನಗಳು ಅನ್ನೋದು ರಾಜ್ಕುಮಾರ್ ಸಿನಿಮಾಗೆ ತುಂಬಾನೇ ಸಣ್ಣದು. ಅವರ ಸಿನಿಮಾಗಳು ವರ್ಷಗಟ್ಟಲೆ ಓಡಿದ ಉದಾಹರಣೆಯೂ ಇದೆ. ಆದರೆ, ಈಗಿನ ಕಾಲದಲ್ಲಿ ಅದೆಲ್ಲ ಸಾಧ್ಯವಿಲ್ಲ. ಒಟಿಟಿಯ ಕಾರಣಕ್ಕೆ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಥಿಯೇಟರ್ನಿಂದ ಕಾಲ್ಕೀಳುತ್ತವೆ. ಆದರೆ, ರಾಜ್ಕುಮಾರ್ ಅವರು ಅಂದು ಮಾಡಿದ ದಾಖಲೆಯನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







