ಶ್ರೀಲೀಲಾ ಮನೆಗೆ ಬಂತು ಮುದ್ದಾದ ಪಾಪು; ಮೂರನೇ ಮಗುವಿಗೆ ತಾಯಿ ಸ್ಥಾನ ತುಂಬಿದ ನಟಿ

ಶ್ರೀಲೀಲಾ ಅವರು ಮತ್ತೊಂದು ಮಗುವನ್ನು ದತ್ತು ಪಡೆದು ತಮ್ಮ ಕುಟುಂಬವನ್ನು ವಿಸ್ತರಿಸಿದ್ದಾರೆ. ಇದರಿಂದ ಮೂರನೇ ಮಗುವಿಗೆ ತಾಯಿಯ ಸ್ಥಾನ ತುಂಬಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಶ್ರೀಲೀಲಾ ಅವರು ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ದತ್ತು ಪಡೆದಿರುವ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಶ್ರೀಲೀಲಾ ಮನೆಗೆ ಬಂತು ಮುದ್ದಾದ ಪಾಪು; ಮೂರನೇ ಮಗುವಿಗೆ ತಾಯಿ ಸ್ಥಾನ ತುಂಬಿದ ನಟಿ
ಶ್ರೀಲೀಲಾ

Updated on: Apr 28, 2025 | 2:27 PM

ನಟಿ ಶ್ರೀಲೀಲಾ (Sreeleela) ಅವರು ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕನ್ನಡದಿಂದ ಆರಂಭ ಆದ ಅವರ ವೃತ್ತಿ ಜೀವನ ಈಗ ಬಾಲಿವುಡ್​ನತ್ತ ಸಾಗಿದೆ. ಅವರಿಗೆ ಅಲ್ಲಿ ಹಲವು ಆಫರ್​ಗಳು ಹುಡುಕಿ ಬರುತ್ತಿವೆ. ಹೀಗಿರುವಾಗಲೇ ಅವರು ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೊದಲು ಇಬ್ಬರು ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದಿದ್ದರು. ಈಗ ನಟಿ ಮತ್ತೊಂದು ಪುಟ್ಟ ಕಂದಮ್ಮನನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಮೂರನೇ ಮಗಿವಗೆ ತಾಯಿಯ ಸ್ಥಾನ ತುಂಬಿದ್ದಾರೆ.

‘ಕಿಸ್’, ‘ಭರಾಟೆ’ ಮುಂತಾದ ಕನ್ನಡ ಸಿನಿಮಾಗಳ ಮೂಲಕ ಶ್ರೀಲೀಲಾ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ಟಾಲಿವುಡ್​ನಲ್ಲಿ ಹೆಚ್ಚಾಗಿದೆ. ಈ ಚಿತ್ರದಿಂದ ಅವರಿಗೆ ತೆಲುಗಿನಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ‘ಪುಷ್ಪ 2’ ಚಿತ್ರದ ವಿಶೇಷ ಹಾಡಿಗೂ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ.  ನಟನೆಯ ಜೊತೆಗೆ ಅವರಿಗೆ ಸಾಮಾಜಿಕ ಕೆಲಸಗಳ ಬಗ್ಗೆ ಆಸಕ್ತಿ ಇದೆ.

ಇದನ್ನೂ ಓದಿ
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್

ಶ್ರೀಲೀಲಾ ಅವರು 21ನೇ ವಯಸ್ಸಿಗೆ ಎರಡು ಮಕ್ಕಳ ತಾಯಿಯಾದರು. ಹೌದು, ಈ ಮೊದಲು ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ್ದ ಶ್ರೀಲೀಲಾ ದತ್ತು ಪಡೆದುಕೊಂಡಿದ್ದರು. ಆ ಮೂಲಕ ಆ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬಿದ್ದರು. ಈಗ ಅವರು ಮತ್ತೊಂದು ಮಗುವನ್ನು ದತ್ತು ಪಡೆದಿದ್ದಾರೆ.


‘ಮನೆಗೆ ಮತ್ತೊಂದು ಸದಸ್ಯೆಯ ಆಗಮನ’ ಎಂದು ಶ್ರೀಲೀಲಾ ಬರೆದುಕೊಂಡಿದ್ದಾರೆ. ಜೊತೆಗೆ ಮಗುವಿನ ಫೋಟೋಗಳನ್ನು ಅವರು ಹಾಕಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಗಳಿಂದ ಭರ್ಜರಿ ಕಮೆಂಟ್​ಗಳು ಬರುತ್ತಿವೆ. ನಟಿಯ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಲೀಲಾಗೆ ಈಗಿನ್ನೂ 23 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಸಾಮಾಜಿಕ ಕೆಲಸದ ಬಗ್ಗೆ ಇಷ್ಟೊಂದು ಗಮನ ಹರಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಬಾಲಿವುಡ್ ಸ್ಟಾರ್ ನಟಿಯಿಂದ ಅವಕಾಶ ಕಸಿದುಕೊಂಡ ನಟಿ ಶ್ರೀಲೀಲಾ

ಶ್ರೀಲೀಲಾ ಅವರು ಸದ್ಯ ಬಾಲಿವುಡ್​ನಲ್ಲಿ ‘ಆಶಿಕಿ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಕಾರ್ತಿಕ್ ಆರ್ಯನ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯೂ ಇದೆ. ಅವರು ಸಿದ್ದಾರ್ಥ್ ಮಲ್ಹೋತ್ರ ಚಿತ್ರಕ್ಕೆ ನಾಯಕಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.