AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಹಾಡು ಕೇಳಿ ಅತ್ತಿದ್ದ ಪುಟ್ಟಣ್ಣ ಕಣಗಾಲ್; ಹಾಡಿದ್ದಕ್ಕೆ ಸಂಭಾವನೆಯೇ ಬೇಡವೆಂದ ಎಸ್​ಪಿಬಿ

ಶ್ರೀನಾಥ್ ಅವರು "ಸರಿಗಮಪ" ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಅವರ "ಮಾನಸ ಸರೋವರ" ಚಿತ್ರದ ಚಿತ್ರೀಕರಣದ ಸ್ಮರಣೀಯ ಅನುಭವವನ್ನು ಹಂಚಿಕೊಂಡಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ "ನೀನೆ ಸಾಕಿದ ಗಿಣಿ" ಹಾಡು ಪುಟ್ಟಣ್ಣ ಅವರನ್ನು ಭಾವುಕರನ್ನಾಗಿಸಿತ್ತು ಎಂದು ಅವರು ಹೇಳಿದ್ದಾರೆ. ಈ ಹಾಡಿನ ಸ್ಮರಣೆ ಎಸ್.ಪಿ.ಬಿ ಅವರ ನೆನಪುಗಳನ್ನು ಮರುಕಳಿಸುತ್ತದೆ ಎಂದು ಶ್ರೀನಾಥ್ ಹೇಳಿದ್ದಾರೆ.

ಆ ಹಾಡು ಕೇಳಿ ಅತ್ತಿದ್ದ ಪುಟ್ಟಣ್ಣ ಕಣಗಾಲ್; ಹಾಡಿದ್ದಕ್ಕೆ ಸಂಭಾವನೆಯೇ ಬೇಡವೆಂದ ಎಸ್​ಪಿಬಿ
ಎಸ್​ಪಿಬಿ-ಶ್ರೀನಾಥ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 01, 2025 | 8:09 AM

Share

ಪುಟ್ಟಣ್ಣ ಕಣಗಾಲ್ (Puttanna Kanagal) ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದರು. ‘ನಾಗರಹಾವು’ ಸಿನಿಮಾ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎನ್ನಬಹುದು. ಅದೇ ರೀತಿ ‘ಮಾನಸ ಸರೋವರ’ ಚಿತ್ರ ಕೂಡ ಒಂದು. ಈ ಸಿನಿಮಾ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶ್ರೀನಾಥ್ ಅವರು ವೈದ್ಯನ ಪಾತ್ರ ಮಾಡಿದ್ದರು. ‘ಸರಿಗಮಪ’ ವೇದಿಕೆ ಮೇಲೆ ಬಂದ ಅವರು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಎಸ್​ಪಿಬಿ ಅವರನ್ನು ನೆನಪಿಸಿಕೊಂಡಿದ್ದಾರೆ.

‘ಮಾನಸ ಸರೋವರ’ ಸಿನಿಮಾ ಮಾತ್ರ ಯಶಸ್ಸು ಕಂಡಿರಲಿಲ್ಲ. ಆ ಚಿತ್ರದ ಹಾಡುಗಳು ಕೂಡ ಹಿಟ್ ಆದವು. ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯ ಕಥೆ ಎನ್ನಬಹುದು. ಈ ಚಿತ್ರದಲ್ಲಿ ಬರೋ ‘ನೀನೇ ಸಾಕಿದಾ ಗಿಣಿ..’ ಹಾಡು ಸೂಪರ್ ಹಿಟ್ ಆಗಿತ್ತು. ಇದನ್ನು ಹಾಡಿದ್ದು ಶ್ರೇಷ್ಠ ಗಾಯಕ ಎಸ್​ಪಿ ಬಾಲ ಸುಬ್ರಹ್ಮಣ್ಯಂ ಆಗಿತ್ತು. ಅಂದಿನ ಘಟನೆಯನ್ನು ಶ್ರೀನಾಥ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
ಅವನು ಗೆಳೆಯನಲ್ಲ, ಸಹೋದ್ಯೋಗಿ; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?
Image
ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ; ಹೊಸ ಬ್ಯಾನರ್ ಶುರು?
Image
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
Image
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ

ಜೀ ಕನ್ನಡ ನಡೆಸಿಕೊಡೋ ಸರಿಗಮಪ ವೇದಿಕೆ ಮೇಲೆ ಶ್ರೀನಾಥ್ ಅವರು ಆಗಮಿಸಿದರು. ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ಬಾಲು ನಮ್ಮ ಆತ್ಮದ ಜೊತೆ ಸೇರಿಕೊಂಡ್ನಾ ಅಥವಾ ಅವನ ಆತ್ಮದ ಜೊತೆ ನಮ್ಮನ್ನು ಸೇರಿಸಿಕೊಂಡನಾ ಗೊತ್ತಾಗಲಿಲ್ಲ. ಮಾನಸ ಸರೋವರ ನೀನೆ ಸಾಕಿದ ಗಿಣಿ ಹಾಡನ್ನು ಹಾಡಿದರು. ನಾಲ್ಕು ಲೈನ್ ಹಾಡುವ ಮೂಲಕ ಪುಟ್ಟಣ್ಣ  ಕಣ್ಣಲ್ಲಿ ನೀರು ಬಂತು. ಅವರು ಅಳುತ್ತಾ ಹೊರ ಹೋದರು’ ಎಂದಿದ್ದಾರೆ ಶ್ರೀನಾಥ್.

View this post on Instagram

A post shared by Zee Kannada (@zeekannada)

‘ಹಾಡು ಮುಗಿಸಿ ಎಸ್​ಪಿಬಿ ಬಂದರು. ನಾನು ಹೋಗಿ ಬರ್ತೀನಿ ಎಂದರು. ಪುಟ್ಟಣ್ಣ ಹೊರಗೆ ಹೋಗಿದ್ದಾರೆ ಬರ್ತಾರೆ ಎಂದೆ. ಲೈಫ್ ಅಲ್ಲಿ ಒಂದೊಳ್ಳೆಯ ಹಾಡು ಕೊಟ್ಟಿದ್ದು ಪುಟ್ಟಣ್ಣ ಅಂತ ಅವರಿಗೆ ಹೇಳಿಬಿಡು. ನನಗೆ ಸಂಭಾವನೆಯೂ ಬೇಡ ಎಂದು ಎಸ್​ಪಿಬಿ ಹೊರಗೆ ಹೋದರು’ ಎಂದು ಶ್ರೀನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಪಿ ಬಾಲಸುಬ್ರಹ್ಮಣ್ಯಂ ನಾಲ್ಕನೇ ಪುಣ್ಯತಿಥಿ; ಮುಖ್ಯ ರಸ್ತೆಯೊಂದಕ್ಕೆ ಗಾಯಕನ ಹೆಸರಿಟ್ಟ ಸಿಎಂ

‘ಈ ಹಾಡು ಪ್ರತಿ ಬಾರಿ ನೆನಪಿಸಿಕೊಂಡಾಗ ಎಸ್​ಪಿಬಿ ನೆನಪಿಗೆ ಬರುತ್ತಾರೆ. ಅವರು ನೆನಪಿಗೆ ಬಂದಾಗ ನಾನು ಭಾವುಕನಾಗುತ್ತೇನೆ’ ಎಂದು ಶ್ರೀನಾಥ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ 

Published On - 7:59 am, Tue, 29 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ