SS Rajamouli: ‘ಕಬ್ಜ’ ಸಾಂಗ್​ ರಿಲೀಸ್​​​ಗೆ ಬರ್ತಿಲ್ಲ ರಾಜಮೌಳಿ; ಕಾರಣ ತಿಳಿಸಿದ ನಿರ್ದೇಶಕ

ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರು ಫೆಬ್ರವರಿ 3ರಂದು ನಿಧನ ಹೊಂದಿದರು. ರಾಜಮೌಳಿ ಸೇರಿ ಅನೇಕರಿಗೆ ಅವರು ಸ್ಫೂರ್ತಿ ಆಗಿದ್ದರು. ವಿಶ್ವನಾಥ್ ಅವರನ್ನು ಕಳೆದುಕೊಂಡ ನೋವಿನಿಂದ ರಾಜಮೌಳಿ ಅವರು ಹೊರ ಬಂದಿಲ್ಲ.

SS Rajamouli: ‘ಕಬ್ಜ’ ಸಾಂಗ್​ ರಿಲೀಸ್​​​ಗೆ ಬರ್ತಿಲ್ಲ ರಾಜಮೌಳಿ; ಕಾರಣ ತಿಳಿಸಿದ ನಿರ್ದೇಶಕ
ರಾಜಮೌಳಿ-ಉಪೇಂದ್ರ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Feb 04, 2023 | 11:19 AM

ಉಪೇಂದ್ರ ಹಾಗೂ ಸುದೀಪ್ (Kichcha Sudeep) ನಟನೆಯ ‘ಕಬ್ಜ’ ಸಿನಿಮಾದ (Kabzaa Movie) ಮೊದಲ ಸಾಂಗ್ ರಿಲೀಸ್ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ರಾತ್ರಿ 7 ಗಂಟೆಗೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಈಗಾಗಲೇ ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಈ ಸಿನಿಮಾದ ಟೀಸರ್ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಈಗ ಚಿತ್ರದ ಟೈಟಲ್ ಟ್ರ್ಯಾಕ್ ಕೇಳಲು ಫ್ಯಾನ್ಸ್ ಕಾದಿದ್ದಾರೆ. ಈ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬರಬೇಕಿತ್ತು. ಆದರೆ, ಅವರು ಆಗಮಿಸಲು ಸಾಧ್ಯವಾಗುತ್ತಿಲ್ಲ.

ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರು ಫೆಬ್ರವರಿ 3ರಂದು ನಿಧನ ಹೊಂದಿದರು. ರಾಜಮೌಳಿ ಸೇರಿ ಅನೇಕರಿಗೆ ಅವರು ಸ್ಫೂರ್ತಿ ಆಗಿದ್ದರು. ವಿಶ್ವನಾಥ್ ಅವರನ್ನು ಕಳೆದುಕೊಂಡ ನೋವಿನಿಂದ ರಾಜಮೌಳಿ ಅವರು ಹೊರ ಬಂದಿಲ್ಲ. ಈ ಕಾರಣಕ್ಕೆ ಅವರು ‘ಕಬ್ಜ’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ, ಗಣ್ಯರ ಉಪಸ್ಥಿತಿಯಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ತಂಡ ತಿಳಿಸಿದೆ.

ಭರವಸೆ ನೀಡಿದ ರಾಜಮೌಳಿ

‘ಕಬ್ಜ’ ಸಿನಿಮಾ ತಂಡ ಪ್ರಮೋಷನ್​ಗೆ ದೊಡ್ಡ ಮಟ್ಟದ ಪ್ಲ್ಯಾನ್ ರೂಪಿಸಿಕೊಂಡಿದೆ. ಈ ಕಾರಣಕ್ಕೆ ತಂಡ ಮತ್ತೆ ಹೈದರಾಬಾದ್​ಗೆ ತೆರಳಲಿದೆ.  ಮುಂದಿನ ದಿನಗಳಲ್ಲಿ ‘ಕಬ್ಜ’ ಚಿತ್ರದ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಇದು ಪೂರ್ವ ನಿರ್ಧರಿತ ಕಾರ್ಯಕ್ರಮ ಆಗಿರುವುದರಿಂದ ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ಮೌನಾಚರಣೆ ಕೋರಿ ‘ಕಬ್ಜ’ ಸಾಂಗ್ ರಿಲೀಸ್ ಮಾಡಲಾಗುತ್ತಿದೆ.

ಇದನ್ನೂ ಓದಿ
Image
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​
Image
ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್
Image
Kabzaa: ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕು ಸೇಲ್​; ಉಪ್ಪಿ ಸಿನಿಮಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​
Image
‘ಕೆಜಿಎಫ್’ ತರ ‘ಕಬ್ಜ’ ಇದೆ ಅನ್ನೋದೇ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಎಂದ ಉಪೇಂದ್ರ

ಹೈಪ್ ಹೆಚ್ಚಿಸಲು ಪ್ಲ್ಯಾನ್

ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಲು ತಂಡ ಸಜ್ಜಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡಲಾಗುವುದು. ಹೈದರಾಬಾದ್​ನಲ್ಲಿ ಫಸ್ಟ್​ ಸಾಂಗ್​ ರಿಲೀಸ್​ ಆಗಲಿದೆ.

ತೆಲುಗು ನೆಲದಲ್ಲಿ ಉಪೇಂದ್ರ, ಸುದೀಪ್​ ಹಾಗೂ ಶ್ರೀಯಾ ಶರಣ್​ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಎಲ್ಲ ಕಾರಣದಿಂದ ಹೈದರಾಬಾದ್​ನಲ್ಲಿ ನಡೆಯಲಿರುವ ಶೀರ್ಷಿಕೆ ಗೀತೆ ಬಿಡುಗಡೆ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಬಲವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ