
‘ಸು ಫ್ರಮ್ ಸೋ’ ಸಿನಿಮಾ (Su From So) ರಿಲೀಸ್ ಆಗಿ ಬರೋಬ್ಬರಿ 45 ದಿನಗಳು ಕಳೆದಿವೆ. ಹಾಗಿದ್ದರೂ ಚಿತ್ರ ಇನ್ನೂ ಗಳಿಕೆ ಮಾಡೋದನ್ನು ಮುಂದುವರಿಸಿದೆ! ಇದು ಅಚ್ಚರಿ ಎನಿಸಿದರೂ ಸತ್ಯ. ‘ಸು ಫ್ರಮ್ ಸೋ’ ಸಿನಿಮಾ 45ನೇ ದಿನವಾದ ಭಾನುವಾರ (ಸೆಪ್ಟೆಂಬರ್ 7) ಬರೋಬ್ಬರಿ 37 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ಚಿತ್ರವೊಂದು 45ನೇ ಇಷ್ಟು ಗಳಿಕೆ ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
‘ಸು ಫ್ರಮ್ ಸೋ’ ಸಿನಿಮಾ ಒಟ್ಟಾರೆ ಕಲೆಕ್ಷನ್ 122 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದ ಗಳಿಕೆ ಶೀಘ್ರವೇ ಕೊನೆಗೊಳ್ಳೋ ಸಾಧ್ಯತೆ ಇದೆ. ಏಕೆಂದರೆ ಚಿತ್ರ ಒಟಿಟಿಗೆ ಎಂಟ್ರಿ ಕೊಡಲು ರೆಡಿ ಆಗಿದೆ. ಈ ಸಿನಿಮಾದ ಒಟಿಟಿ ದಿನಾಂಕದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ, ಕೊನೆಗೂ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿ ‘ಸು ಫ್ರಮ್ ಸೋ’ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ. ಸೆಪ್ಟೆಂಬರ್ 9ರಿಂದ ಚಿತ್ರ ಜಿಯೋಹಾಟ್ಸ್ಟಾರ್ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ಆ ಬಳಿಕ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣಲಿದೆ. ಕೆಲವರ ಊಹೆ ಪ್ರಕಾರ ನವರಾತ್ರಿ ಸಮಯದಲ್ಲಿ ಚಿತ್ರ ಟಿವಿಯಲ್ಲಿ ಪ್ರಸಾರ ಕಾಣಲಿದೆ ಎಂದು ಹೇಳಲಾಗುತ್ತಿದೆ.
‘ಸು ಫ್ರಮ್ ಸೋ’ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೆಪಿ ತುಮಿನಾಡು ನಿರ್ದೇಶನ ಚಿತ್ರಕ್ಕೆ ಇದೆ. ಸಿನಿಮಾದ ಗ್ರಾಸ್ ಕಲೆಕ್ಷನ್ 107 ಕೋಟಿ ರೂಪಾಯಿ. ವಿದೇಶದಿಂದ ಚಿತ್ರಕ್ಕೆ 15 ಕೋಟಿ ರೂಪಾಯಿ ಹರಿದು ಬಂದಿದೆ. ಸಿನಿಮಾ ತೆಲುಗಿನಲ್ಲಿ 2.23 ಕೋಟಿ ರೂಪಾಯಿ, ಮಲಯಾಳಂನಲ್ಲಿ 5.65 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಒಟಿಟಿ ರಿಲೀಸ್: ಸೆಪ್ಟೆಂಬರ್ 9ರಿಂದ ಜಿಯೋ ಹಾಟ್ಸ್ಟಾರ್ ಮೂಲಕ ಪ್ರಸಾರ
ಚಿತ್ರ ಒಟಿಟಿಯಲ್ಲಿ ರಿಲೀಸ್ ಆದ ಬಳಿಕವೂ ಮತ್ತಷ್ಟು ದಿನ ಥಿಯೇಟರ್ನಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸಣ್ಣ ಬಜೆಟ್ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಇದೇ ಮೊದಲು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.