AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಒಟಿಟಿ ವರ್ಷನ್​ನಲ್ಲಿ ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ

'ಸು ಫ್ರಮ್ ಸೋ' ಕನ್ನಡ ಸಿನಿಮಾ ಜಿಯೋಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸೆಪ್ಟೆಂಬರ್ 9ರಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್‌ನಲ್ಲಿ 45 ದಿನಗಳ ಯಶಸ್ವಿ ಪ್ರದರ್ಶನದ ನಂತರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದ ರನ್ ಟೈಮ್ ಅಲ್ಲಿ ಒಟಿಟಿ ಮತ್ತು ಥಿಯೇಟರ್ ನಡುವೆ ವ್ಯತ್ಯಾಸ ಕಂಡುಬಂದಿದೆ.

‘ಸು ಫ್ರಮ್ ಸೋ’ ಒಟಿಟಿ ವರ್ಷನ್​ನಲ್ಲಿ ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Sep 09, 2025 | 6:59 AM

Share

‘ಸು ಫ್ರಮ್ ಸೋ’ ಸಿನಿಮಾ (Su From So) ಜಿಯೋ ಹಾಟ್​ಸ್ಟಾರ್ ಒಟಿಟಿ ಮೂಲಕ ಇಂದಿನಿಂದ (ಸೆಪ್ಟೆಂಬರ್ 9) ಪ್ರಸಾರ ಆರಂಭಿಸಿದೆ. ಈ ಚಿತ್ರ ಥಿಯೇಟರ್​ನಲ್ಲಿ ಯಶಸ್ವಿಯಾಗಿ 45 ದಿನಗಳ ಪ್ರದರ್ಶನ ಕಂಡು ಈಗ ಒಟಿಟಿಗೆ ಕಾಲಿಟ್ಟಿದೆ. ಈ ಸಿನಿಮಾ ಥಿಯೇಟರ್​ನಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿತ್ತು. ಅದೇ ರೀತಿಯ ಮೆಚ್ಚುಗೆಯು ಒಟಿಟಿಯಲ್ಲೂ ಸಿಗುವ ನಿರೀಕ್ಷೆ ಇದೆ. ಸಿನಿಮಾನ ಥಿಯೇಟರ್​ನಲ್ಲಿ ಮಿಸ್ ಮಾಡಿಕೊಂಡವರು, ಮತ್ತೊಮ್ಮೆ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಇದು ಒಳ್ಳೆಯ ಅವಕಾಶ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಅದಕ್ಕೂ ನಾಲ್ಕು ದಿನ ಮೊದಲೇ ಚಿತ್ರದ ಪ್ರೀಮಿಯರ್ ಶೋಗಳು ಪ್ರಸಾರ ಕಂಡವು. ಈ ವೇಳೆ ಜನರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಬಾಯ್ಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಗಿದೆ. ಈಗ ಸಿನಿಮಾ ಥಿಯೇಟರ್​ನಲ್ಲಿ ದೊಡ್ಡ ಯಶಸ್ಸು ಕಂಡಿರುವುದರಿಂದ ಒಟಿಟಿಯಲ್ಲೂ ಹೆಚ್ಚಿನ ವೀಕ್ಷಣೆ ಆಗೋ ಸಾಧ್ಯತೆ ಇದೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯವರೂ ‘ಸು ಫ್ರಮ್ ಸೋ’ ಸಿನಿಮಾನ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸೋ ಸಾಧ್ಯತೆ ಇದೆ.

ಸಿನಿಮಾದ ರನ್​ ಟೈಮ್​ ಬಗ್ಗೆ ಚರ್ಚೆ ನಡೆಯುತ್ತಿದೆ. ಬುಕ್ ಮೈ ಶೋನಲ್ಲಿ ಸಿನಿಮಾದ ಅವಧಿ 2 ಗಂಟೆ 17 ನಿಮಿಷ ಇದೆ. ಆದರೆ, ಒಟಿಟಿಯಲ್ಲಿ 7 ನಿಮಿಷ ಕಡಿಮೆ ತೋರಿಸುತ್ತಿದೆ. ಅಂದರೆ, ಒಟಿಟಿಯಲ್ಲಿ ರನ್ ಟೈಮ್ 2 ಗಂಟೆ 10 ನಿಮಿಷ ಎಂದು ಮಾತ್ರ ತೋರಿಸುತ್ತಿದೆ. ಆ ಏಳು ನಿಮಷ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಯಾವುದಾದರೂ ದೃಶ್ಯಕ್ಕೆ ಕತ್ತರಿ ಹಾಕಿದರೇ ಎನ್ನುವ ಪ್ರಶ್ನೆಯನ್ನೂ ಅನೇಕರು ಕೇಳುತ್ತಿದ್ದಾರೆ. ಸಿನಿಮಾ ಆರಂಭದಲ್ಲಿ ಕೊನೆಯಲ್ಲಿ ಕೆಲವರಿಗೆ ಧನ್ಯವಾದ ಹೇಳುವ ಕೆಲಸ ಆಗುತ್ತದೆ. ಅದನ್ನು ಒಟಿಟಿಯಲ್ಲಿ ತೋರಿಸದ ಕಾರಣ ಅವಧಿ ಕಡಿಮೆ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ತಂಡದವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ
Image
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
Image
‘ಹಳ್ಳಿ ಪವರ್​​’ನಲ್ಲಿ ಮೊದಲ ವಾರವೇ ಇಬ್ಬರು ಎಲಿಮಿನೇಟ್
Image
‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್; 45ನೇ ದಿನವೂ ಅಬ್ಬರದ ಕಲೆಕ್ಷನ್
Image
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ

ಇದನ್ನೂ ಓದಿ: ‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್ ಮಾಡಿದ ಕಲರ್ಸ್; 45ನೇ ದಿನವೂ ಅಬ್ಬರದ ಕಲೆಕ್ಷನ್

‘ಸು ಫ್ರಮ್ ಸೋ’ ಸಿನಿಮಾನ ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದರೆ, ಜೆಪಿ ತುಮಿನಾಡ್ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡರೆ ಜೆಪಿ ಗುರೂಜಿ ಪಾತ್ರದಲ್ಲಿ ಮಿಂಚಿದರು. ಈ ಸಿನಿಮಾದಲ್ಲಿ ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು