ಕಡಿಮೆ ಶೋ ಕೊಟ್ಟರೂ ‘ಸು ಫ್ರಮ್ ಸೋ’ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್

Su from So Box office Collection Day 1: ರಾಜ್ ಬಿ. ಶೆಟ್ಟಿ ನಿರ್ಮಿಸಿರುವ ಮತ್ತು ಸ್ಥಳೀಯ ಕಲಾವಿದರನ್ನು ಒಳಗೊಂಡ ‘ಸು ಫ್ರಮ್ ಸೋ’ ಕನ್ನಡ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಕಡಿಮೆ ಪ್ರದರ್ಶನಗಳ ಹೊರತಾಗಿಯೂ, ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದೆ. ಬಾಯ್ಮಾತಿನ ಪ್ರಚಾರ ಮತ್ತು ಜನಪ್ರಿಯತೆಯಿಂದಾಗಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಕಡಿಮೆ ಶೋ ಕೊಟ್ಟರೂ ‘ಸು ಫ್ರಮ್ ಸೋ’ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
ಸು ಫ್ರಮ್ ಸೋ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ

Updated on: Jul 26, 2025 | 7:42 AM

ರಾಜ್ ಬಿ ಶೆಟ್ಟಿ ಅವರು ನಿರ್ಮಿಸಿರೋ ಹಾಗೂ ರಂಗಭೂಮಿ ಕಲಾವಿದರೇ ನಟಿಸಿರೋ ‘ಸು ಫ್ರಮ್ ಸೋ’ (Su From So Movie) ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಕಡಿಮೆ ಶೋಗಳ ಹೊರತಾಗಿಯೂ ಸಿನಿಮಾ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಶೋಗಳ ಸಂಖ್ಯೆ ಇನ್ನಷ್ಟು ಏರಿಕೆ ಕಂಡರೆ ಸಿನಿಮಾದ ಕಲೆಕ್ಷನ್ ಎರಿಕೆ ಆಗುವ ಸೂಚನೆ ಸಿಕ್ಕಿದೆ. ವೀಕೆಂಡ್​ನ ಎಲ್ಲಾ ಶೋಗಳು ಬಹುತೇಕ್ ಈಗಲೇ ಬುಕ್ ಆಗಿದೆ ಅನ್ನೋದು ವಿಶೇಷ.

ರಾಜ್ ಬಿ. ಶೆಟ್ಟಿ ಅವರು ವಿವಿಧ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ನಿರ್ದೇಶನದಲ್ಲೂ ಅವರು ಪಳಗಿದ್ದಾರೆ. ಇಂತಹ ಸಿನಿಮಾ ಜೀವಿ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಈಗ ಅವರ ನಿರ್ಮಾಣದ ‘ಸು ಫ್ರಮ್ ಸೋ’ ಟ್ರೇಲರ್ ಮೂಲಕ ಸದ್ದು ಮಾಡಿತ್ತು. ಆ ನಿರೀಕ್ಷೆಯನ್ನು ಮೀರಿ ಸಿನಿಮಾ ನಿಂತಿದೆ.

‘ಸು ಫ್ರಮ ಸೋ’ ಚಿತ್ರ ಮೊದಲ ದಿನ ಸುಮಾರು 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಇದು ಹೊಸ ಕಲಾವಿದರು, ಹೊಸ ನಿರ್ದೇಶಕ ಮಾಡಿದ ಚಿತ್ರ. ಈ ಚಿತ್ರವನ್ನು ಜನರು ಇಷ್ಟು ಮೆಚ್ಚಿಕೊಂಡು ಮೊದಲ ದಿನ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಎಂದರೆ ಅದನ್ನು ಮೆಚ್ಚಲೇ ಬೇಕು. ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ 220 ಶೋಗಳು ಸಿಕ್ಕಿವೆ. ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕೆ ಹೋಲಿಸಿದರೆ ಈ ಗಳಿಕೆ ಕಡಿಮೆಯೇ.

ಇದನ್ನೂ ಓದಿ
ಹರಿ ಹರ ವೀರ ಮಲ್ಲು ಕಲೆಕ್ಷನ್; ಮೊದಲ ದಿನ ಭರ್ಜರಿ ಎರಡನೇ ದಿನ ಒಂದಂಕಿ ಗಳಿಕೆ
Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ
ಪ್ರೀತಿ-ಪ್ರೇಮಗಳಿಂದ ಮನಸ್ಸು ಒಡೆದು ಪಾಠ ಕಲಿತಿದ್ದೇ ಹೆಚ್ಚು ನಿತ್ಯಾ ಮೆನನ್
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

ಈಗಾಗಲೇ ಚಿತ್ರಕ್ಕೆ ಬಾಯ್ಮಾತಿನ ಪ್ರಚಾರ ಸಿಕ್ಕಿ ಆಗಿದೆ. ಈ ಕಾರಣದಿಂದಲೇ ಚಿತ್ರ ಬಹುತೇಕ ಕಡೆಗಳಲ್ಲಿ ಹೌಸಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು, ಪರ ರಾಜ್ಯಗಳಲ್ಲಿಯೂ ಶೋ ಕೊಡಲಾಗಿದ್ದು, ಅಲ್ಲಿಯೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ಸು ಫ್ರಮ ಸೋ ವಿಮರ್ಶೆ: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ; ಪ್ರೇಕ್ಷಕನಿಗೆ ಮನರಂಜನೆಯ ರಸದೌತಣ

‘ಲೈಟರ್ ಬುದ್ಧ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸ್ಥಳೀಯ ಕಲಾವಿದರನ್ನೇ ಇಟ್ಟುಕೊಂಡು ‘ಸು ಫ್ರಮ್ ಸೋ’ ನಿರ್ಮಾಣ ಮಾಡಲಾಗಿದೆ. ರಾಜ್ ಬಿ. ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಜೆಪಿ ತುಮಿನಾಡ ಅವರೇ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:41 am, Sat, 26 July 25