
‘ಸು ಫ್ರಮ್ ಸೋ’ (Su From So) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಮೂರನೇ ವಾರವೂ ಚಿತ್ರದ ಗಳಿಕೆ ತಗ್ಗಿಲ್ಲ. ಸಿನಿಮಾ ಕೋಟಿಗಳಲ್ಲಿ ಕಲೆಕ್ಷನ್ ಮಾಡುವುದನ್ನು ಮುಂದುವರಿಸಿದೆ. ಈ ಸಿನಿಮಾದ ಸ್ಥಿರತೆ ನೋಡಿ ಬಾಕ್ಸ್ ಆಫೀಸ್ ಪಂಡಿತರೇ ಹೌಹಾರಿದ್ದಾರೆ. ಈ ಚಿತ್ರ ಸತತ 9 ದಿನಗಳ ಕಾಲ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.
‘ಸು ಫ್ರಮ್ ಸೋ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ರಾಜ್ ಬಿ. ಶೆಟ್ಟಿ ಅವರು ನಿರ್ಮಾಪಕನಾಗಿ, ನಟನಾಗಿ ಗೆದ್ದಿದ್ದಾರೆ. ಜೆಪಿ ತುಮಿನಾಡ್ ಅವರು ಮೊದಲ ಪ್ರಯತ್ನದಲ್ಲೇ ಗೆಲುವಿನ ರುಚಿ ಕಂಡಿದ್ದಾರೆ. ಈ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ 42 ಕೋಟಿ ರೂಪಾಯಿಯನ್ನು ಮೀರಿದೆ ಎಂಬುದು ವಿಶೇಷ.
‘ಸು ಫ್ರಮ್ ಸೋ’ ಜುಲೈ 27ರಿಂದ ಆಗಸ್ಟ್ 4ರವರೆಗೆ ನಿರಂತರವಾಗಿ 3+ ಕೋಟಿ ರೂಪಾಯಿ ಸಂಗ್ರಹಿಸಿದೆ. ಅಂದರೆ ಸತತ 9 ದಿನಗಳ ಕಾಲ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಆಗಸ್ಟ್ 4ರಂದು ಈ ಚಿತ್ರ 6.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಅನ್ನೋದು ವಿಶೇಷ. ಈ ಚಿತ್ರದ ಒಂದು ದಿನದ ಗರಿಷ್ಟ ಗಳಿಕೆ ಇದು. ಸೋಮವಾರ ಈ ಚಿತ್ರ 3.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಂಗಳವಾರ ಸಿನಿಮಾದ ಗಳಿಕೆ ಕೊಂಚ ಇಳಿಕೆ ಕಂಡಿದ್ದು, 2.62 ಕೋಟಿ ರೂಪಾಯಿ ಸಂಗ್ರಹಿಸಿದೆ.
‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ಚಿತ್ರವೊಂದು ಸ್ಥಿರವಾಗಿ 9 ದಿನ 3+ ಕೋಟಿ ರೂಪಾಯಿ ಗಳಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಈ ಸಿನಿಮಾದ ಕಲೆಕ್ಷನ್ 42 ಕೋಟಿ ರೂಪಾಯಿ ಆಗಿದೆ. ಇನ್ನೂ ಕೆಲವು ದಿನಗಳು ಸಿನಿಮಾ ಅಬ್ಬರಿಸಲಿದ್ದು, ಒಟ್ಟಾರೆ ಕಲೆಕ್ಷನ್ 50 ಕೋಟಿ ರೂಪಾಯಿ ಗಡಿ ದಾಟಲಿದೆ.
ಇದನ್ನೂ ಓದಿ: ಹೇಗಿದೆ ನೋಡಿ ‘ಸು ಫ್ರಮ್ ಸೋ’ ಸಿನಿಮಾ ಶೂಟ್ ಮಾಡಿದ ಲೊಕೇಶನ್; ಎಲ್ಲವೂ ನಿಜವಾದ ಮನೆಗಳು
‘ಸು ಫ್ರಮ್ ಸೋ’ ಈಗಾಗಲೇ ಮಲಯಾಳಂನಲ್ಲಿ ರಿಲೀಸ್ ಆಗಿದೆ. ಆಗಸ್ಟ್ 8ಕ್ಕೆ ತೆಲುಗಿನಲ್ಲಿ ಬಿಡುಗಡೆ ಕಾಣಲಿದೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ. ಅಲ್ಲಿ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.