AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’: ಸಿಹಿ ಸುದ್ದಿ ನೀಡಿದ ರಾಜ್ ಬಿ. ಶೆಟ್ಟಿ

ಬಾಕ್ಸ್ ಆಫೀಸ್​ನಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಧೂಳೆಬ್ಬಿಸಿದೆ. ಪರಭಾಷೆ ಮಂದಿ ಕೂಡ ಫಿದಾ ಆಗಿದ್ದಾರೆ. ಕನ್ನಡದ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಆಫರ್ ಬಂದಿದೆ ಎಂಬುದು ಖುಷಿಯ ವಿಚಾರ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ಅವರು ಹಿಂದಿ ರಿಮೇಕ್ ಕುರಿತು ಮಾತಾಡಿದ್ದಾರೆ.

ಹಿಂದಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’: ಸಿಹಿ ಸುದ್ದಿ ನೀಡಿದ ರಾಜ್ ಬಿ. ಶೆಟ್ಟಿ
Su From So
ಮದನ್​ ಕುಮಾರ್​
|

Updated on: Aug 05, 2025 | 4:03 PM

Share

ಜೆ.ಪಿ. ತುಮಿನಾಡು, ಸಂಧ್ಯಾ ಅರಕೆರೆ, ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್ ಮುಂತಾದವರು ನಟಿಸಿರುವ ‘ಸು ಫ್ರಮ್ ಸೋ’ (Su From So) ಸಿನಿಮಾ ಸೂಪರ್ ಹಿಟ್ ಆಗಿದೆ. ಪರಭಾಷೆಯ ಮಂದಿ ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ನಟ ರಾಜ್​ ಬಿ. ಶೆಟ್ಟಿ (Raj B Shetty) ಅವರು ಈ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಚಿತ್ರಮಂದಿರದಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಅದರ ಜೊತೆ ಹಿಂದಿಯಲ್ಲಿ ರಿಮೇಕ್ (Su From So Hindi Remake) ಮಾಡಲು ಆಫರ್ ಬಂದಿದೆ. ಆ ಬಗ್ಗೆ ರಾಜ್ ಬಿ. ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ನಡೆಸಿದ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾಗೆ ಹಿಂದಿಯಿಂದ ರಿಮೇಕ್ ಆಫರ್ ಬಂದಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹೇಗೆ ಮೂಡಿಬರಬಹುದು ಎಂಬ ಕುತೂಹಲ ಕೂಡ ಅವರಿಗೆ ಇದೆ.

‘ಹಿಂದಿ ರಿಮೇಕ್ ಆಫರ್ ಬಂದಿದೆ. ಅವರು ಹೇಗೆ ಸಿನಿಮಾ ಮಾಡುತ್ತಾರೆ ಅಂತ ನನಗೆ ತುಂಬಾ ಕುತೂಹಲ ಇದೆ. ಇದು ಯಾವಾಗಲೂ ಕಲಿಕೆಯ ಪ್ರಕ್ರಿಯೆ. ಇದು ಒಂದು ಪ್ರದೇಶದಲ್ಲಿ ಬೇರೂರಿರುವ ಕಥೆ. ಅಂತಹ ಸಿನಿಮಾಗಳನ್ನೇ ನಾವು ಯಾವಾಗಲೂ ಮಾಡುವುದು. ಯಾಕೆಂದರೆ ಅದು ನಾವು ನೋಡಿರುವ ಜಗತ್ತು. ನಾವು ಬದುಕಿರುವ ಜಗತ್ತು. ನಮಗೆ ಆ ಕಥೆ ಸುಂದರ ಎನಿಸಿತು. ಪ್ರೇಕ್ಷಕರಿಗೂ ಹಾಗೆಯೇ ಅನಿಸಿತು. ರಿಮೇಕ್ ಮಾಡುವವರಿಗೂ ಇದು ತುಂಬಾ ದೊಡ್ಡ ಕಲಿಕೆ ಆಗುತ್ತದೆ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.

ಇದನ್ನೂ ಓದಿ
Image
ಕೇರಳಕ್ಕೆ ಹೊರಟ ‘ಸು ಫ್ರಂ ಸೋ’: ಸ್ಟಾರ್ ನಟನ ಬೆಂಬಲ
Image
‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್ ಯಾರು? ಹಿನ್ನೆಲೆ ಏನು?
Image
3 ಪಟ್ಟಾಯ್ತು ಸು ಫ್ರಮ್ ಸೋ ಶೋ ಸಂಖ್ಯೆ; ಹೊಸ ಸ್ಟ್ರೆಟಜಿ ಮಾಡಿ ಗೆದ್ದ ರಾಜ್
Image
ಬುಕಿಂಗ್​ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನೂ ಬೀಟ್ ಮಾಡಿದ ‘ಸು ಫ್ರಮ್ ಸೋ’

‘ನಾವು ಸಿನಿಮಾ ಮಾಡುತ್ತೇವೆ. ಆದರೆ ನಮಗೂ ಕೂಡ ಆ ಸಿನಿಮಾದ ಜೀವಾಳ ಎಲ್ಲಿದೆ ಎಂಬುದು ತಿಳಿಯುವುದಿಲ್ಲ. ಸಿನಿಮಾ ಪೂರ್ಣಗೊಂಡ ಬಳಿಕ ಅದರಲ್ಲಿ ಜೀವಾಳ ಎಲ್ಲಿದೆ ಅಂತ ತಿಳಿಯುತ್ತೇವೆ. ಹಿಂದಿ ರಿಮೇಕ್​​ನಲ್ಲಿ ಅವರು ಅದನ್ನೇ ಬಳಸಿಕೊಳ್ಳುತ್ತಾರಾ ಅಥವಾ ಬೇರೆ ಏನನ್ನಾದರೂ ಸೇರಿಸುತ್ತಾರಾ ಎಂಬ ಕೌತುಕ ನನಗೆ ಇದೆ’ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ‘ಸು ಫ್ರಮ್ ಸೋ’ ಸಿನಿಮಾ ಶೂಟ್ ಮಾಡಿದ ಲೊಕೇಶನ್; ಎಲ್ಲವೂ ನಿಜವಾದ ಮನೆಗಳು

ಬಿಡುಗಡೆಯಾಗಿ 12 ದಿನ ಕಳೆದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತೆ ಮತ್ತೆ ಈ ಸಿನಿಮಾವನ್ನು ನೋಡುತ್ತಿದ್ದಾರೆ. 3ನೇ ವೀಕೆಂಡ್​​ನಲ್ಲಿ ಮತ್ತೆ ಭರ್ಜರಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ. ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ‘ಸು ಫ್ರಮ್ ಸೋ’ ಸಿನಿಮಾ ಅಬ್ಬರಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.