ಬುಕಿಂಗ್‌ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನೂ ಬೀಟ್ ಮಾಡಿದ ‘ಸು ಫ್ರಮ್ ಸೋ’
ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಆನ್‌ಲೈನ್ ಬುಕಿಂಗ್‌ನಲ್ಲಿ ಈ ಚಿತ್ರವು ಹೊಸ ದಾಖಲೆ ಬರೆದಿದೆ, ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ಹಿಂದಿಕ್ಕಿದೆ. 9.7 ರೇಟಿಂಗ್‌ನೊಂದಿಗೆ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಸಿನಿಮಾ (Su From So) ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ಬುಕಿಂಗ್ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ. ಆನ್‌ಲೈನ್ ಬುಕಿಂಗ್‌ನಲ್ಲಿ ಸಿನಿಮಾ ಪವನ್ ಕಲ್ಯಾಣ್ ಸಿನಿಮಾ ದಾಖಲೆಯನ್ನೇ ಉಡೀಸ್ ಮಾಡಿದೆ. ಈ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಈ ವಿಚಾರ ನಟ, ನಿರ್ಮಾಪಕ ರಾಜ್ ಬಿ. ಶೆಟ್ಟಿ ಹಾಗೂ ತಂಡಕ್ಕೆ ಖುಷಿ ತಂದಿದೆ. ಚಿತ್ರದ ರೇಟಿಂಗ್, ಬುಕಿಂಗ್ ಬಗ್ಗೆ ಇಲ್ಲಿದೆ ವಿವರ.
‘ಸು ಫ್ರಮ್ ಸೋ’ ಚಿತ್ರವನ್ನು ಜೆಪಿ ತುಮ್ಮಿನಾಡ ನಿರ್ದೇಶನ ಮಾಡಿದ್ದಾರೆ. ಅವರ ಪ್ರತಿಭೆಯನ್ನು ನಂಬಿ ರಾಜ್ ಬಿ. ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. ಮೊದಲ ದಿನವೇ ಸಿನಿಮಾ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬುಕಿಂಗ್ ವಿಚಾರದಲ್ಲೂ ಸಿನಿಮಾ ದಾಖಲೆಯನ್ನೇ ಬರೆದಿದೆ. ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ಸಿನಿಮಾ ಹಿಂದಿಕ್ಕಿದೆ.
ಇದನ್ನೂ ಓದಿ: Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ; ಪ್ರೇಕ್ಷಕನಿಗೆ ಮನರಂಜನೆಯ ರಸದೌತಣ
ಹಿತೇಶ್ ಹೆಸರಿನ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರಿನ್ಶಾಟ್ ಸಮೇತ ಪೋಸ್ಟ್ ಹಾಕಿದ್ದಾರೆ. ಒಂದು ಗಂಟೆಯಲ್ಲಿ ಎಷ್ಟು ಟಿಕೆಟ್ಗಳು ಬುಕ್ ಆಗಿವೆ ಎಂಬ ಮಾಹಿತಿಯನ್ನು ಬುಕ್ ಮೈ ಶೋ ನೀಡುತ್ತದೆ. ‘ಹರಿ ಹರ ವೀರ ಮಲ್ಲು’ ಚಿತ್ರಕ್ಕೆ ಒಂದು ಗಂಟೆಯಲ್ಲಿ 6.13 ಸಾವಿರ ಟಿಕೆಟ್ ಬುಕ್ ಆದರೆ, ‘ಸು ಫ್ರಮ್ ಸೋ’ ಸಿನಿಮಾಗೆ 6.23 ಸಾವಿರ ಟಿಕೆಟ್ ಬುಕ್ ಆಗಿದೆ. ಈ ಮೂಲಕ ಪವನ್ ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದೆ.
Screen Shot taken at July 25 , 9:25pm#SuFromSo : 6.23K/hour#HHVM : 6.13K/hour
Can you believe this? A Kannada movie made by completely new faces has surpassed the hourly trending of a movie starring one of the biggest Telugu stars! 🤯🔥 pic.twitter.com/6hY5DCE8KR
— Hithesh ᵀᵒˣᶦᶜ (@YashViratstan) July 25, 2025
ಇನ್ನು ರೇಟಿಂಗ್ ವಿಚಾರದಲ್ಲಿ ‘ಸು ಫ್ರಮ್ ಸೋ’ ಎಲ್ಲರನ್ನೂ ಬೀಟ್ ಮಾಡಿದೆ. ಈವರೆಗೆ (ಜುಲೈ 26ರ ಬೆಳಿಗ್ಗೆ 8.30ರವರೆಗೆ) ಎರಡೂವರೆ ಸಾವಿರ ಜನರು ಟಿಕೆಟ್ ಬುಕ್ ಮಾಡಿದ್ದು, 9.7 ರೇಟಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಬಹುತೇಕರು 10ಕ್ಕೆ 10 ಸ್ಟಾರ್ ನೀಡಿದ್ದಾರೆ. ಸಿನಿಮಾದ ಅಬ್ಬರ ದಿನ ಕಳೆದಂತೆ ಹೆಚ್ಚುತ್ತಿದೆ. ಶೋಗಳ ಸಂಖ್ಯೆ ಹೆಚ್ಚಾದರೆ ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Sat, 26 July 25








