‘ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ’; ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ಪುಷ್ಪಾ
ಪುಷ್ಪಾ ಅವರು ತಮ್ಮ ಇತ್ತೀಚಿನ ಚಿತ್ರ "ಕೊತ್ತಲವಾಡಿ"ಯ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಚಲನಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯುವ ಉದ್ದೇಶ ಹೊಂದಿರುವ ಅವರು, ಹಣ ಸಂಪಾದನೆಗಾಗಿ ಈ ಕ್ಷೇತ್ರಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲಿ ಶರಣ್ ಅವರೊಂದಿಗೆ ಚಿತ್ರ ನಿರ್ಮಿಸುವ ಯೋಜನೆಗಳನ್ನು ಅವರು ತಿಳಿಸಿದ್ದಾರೆ.

ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ (Kothalavadi) ಸಿನಿಮಾ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ರಿಲೀಸ್ ಬಳಿಕ ಪುಷ್ಪಾ ಅವರು ಖುಷಿಯಲ್ಲಿದ್ದಾರೆ. ಈ ಸಿನಿಮಾನ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಮಾಡಿದ ಸಿನಿಮಾ ಎಂದಿದ್ದಾರೆ. ಅಲ್ಲದೆ, ನಿರ್ಮಾಣಕ್ಕೆ ಇಳಿದ ಬಳಿಕ ಮತ್ತೆ ಹಿಂದಿರುಗಿ ಹೋಗುವ ಮಾತೇ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
‘ಕೊತ್ತಲವಾಡಿ’ ಸಿನಿಮಾ ರಿಲೀಸ್ ಬಳಿಕ ‘ಕನ್ನಡ ಪಿಚ್ಚರ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಬಂದಮೇಲೆ ಹೋಗೋ ಜಾಯಮಾನ ಅಲ್ಲ. ಯಶ್ ಅಂದು ಎಲ್ಲೋ ಇದ್ದ. ಈಗ ಅವನು ಎಲ್ಲಿದ್ದಾನೆ ಗೊತ್ತಲ್ಲ. ಆಡಿಕೊಳ್ಳುವವರನ್ನು ಮೆಟ್ಟಿ ನಿಲ್ಲಬೇಕು. ಹಾಸನದಲ್ಲಿ ತೋಟ ತೆಗೆದುಕೊಂಡಾಗ ಸಾಕಷ್ಟು ತೊಂದರೆ ಕೊಟ್ಟರು. ಆದರೆ, ಈಗ ಕಾಡನ್ನು ನಾಡು ಮಾಡಿದ್ದಾರೆ ಎಂದು ಹೊಗಳುತ್ತಾರೆ’ ಎಂದಿದ್ದಾರೆ ಪುಷ್ಪಾ.
‘ನಾನು ಅಣ್ಣಾವ್ರ ಅಭಿಮಾನಿ. ಅವರು ಮೆಸೇಜ್ ಕೊಡುವ ಸಿನಿಮಾಗಳನ್ನು ಮಾಡುತ್ತಿದ್ದರು. ನಾನು ಕೂಡ ಅದೇ ರೀತಿಯ ಸಿನಿಮಾಗಳನ್ನು ಮಾಡುತ್ತೇನೆ. ಸಂದೇಶ ಕೊಡೋ ಚಿತ್ರಗಳನ್ನು ಮಾಡೋದೆ ನನ್ನ ಉದ್ದೇಶ. ಶರಣ್ ಜೊತೆ ಸಿನಿಮಾ ಮಾಡಬೇಕಿದೆ. ಶ್ರೀರಾಜ್ ಅವರೇ ಆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕುಳಿತುಕೊಂಡು ಕಥೆಯನ್ನು ಇನ್ನಷ್ಟು ಉತ್ತಮ ಮಾಡುತ್ತೇವೆ. ತರಾತುರಿ ಮಾಡಲ್ಲ’ ಎಂದಿದ್ದಾರೆ ಪುಷ್ಪಾ.
ಪುಷ್ಪಾ ಸಂದರ್ಶನ
‘ನಾನು ಹಣ ಮಾಡಬೇಕು ಎಂದು ಇಲ್ಲಿಗೆ ಬಂದಿಲ್ಲ. ಹಣ ಮಾಡೋದು ನನ್ನ ಉದ್ದೇಶ ಅಲ್ಲ. ಹಣ ಇಂದಲ್ಲ ನಾಳೆ ಬಂದೇ ಬರುತ್ತದೆ. ನಾನು ಬೇರೆ ಕಡೆಯಿಂದ ಹಣ ತಂದು ಸಿನಿಮಾ ಮಾಡವಷ್ಟು ಕ್ಯಾಪ್ಯಾಸಿಟಿ ನನ್ನ ಬಳಿ ಇದೆ’ ಎನ್ನುತ್ತಾರೆ ಪುಷ್ಪಾ.
ಇದನ್ನೂ ಓದಿ: ‘ಕೊತ್ತಲವಾಡಿ’ ಸಿನಿಮಾದಲ್ಲಿ ಬಳಕೆ ಆಗಿದೆ ಯಶ್ ಖರೀದಿಸಿದ್ದ ಮೊದಲ ಬೈಕ್
‘ಕೊತ್ತಲವಾಡಿ’ ಸಿನಿಮಾ ಶ್ರೀರಾಜು ನಿರ್ದೇಶನ ಮಾಡಿದ್ದಾರೆ. ಪೃಥ್ವಿ ಅಂಬರ್, ಕಾವ್ಯಾ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








