AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​ ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ

Sonu Shetty: ದರ್ಶನ್ ಅಭಿಮಾನಿಗಳು ಸೋನು ಶೆಟ್ಟಿ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಸೋನು ಶೆಟ್ಟಿ ಅಭಿಮಾನಿಗಳ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ.

‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​ ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ
ದರ್ಶನ್-ಸೋನು
ರಾಜೇಶ್ ದುಗ್ಗುಮನೆ
|

Updated on:Aug 06, 2025 | 10:19 AM

Share

ನಟ ದರ್ಶನ್ ಅಭಿಮಾನಿಗಳಿಗೆ ಇತ್ತೀಚೆಗೆ ರಮ್ಯಾ (Ramya) ಬಿಸಿ ಮುಟ್ಟಿಸಿದ್ದಾರೆ. ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಅನೇಕರ ಹೆಸರನ್ನು ಅವರು ಸೈಬರ್ ಕ್ರೈಮ್​ಗೆ ನೀಡಿದ್ದು, ಈ ಪೈಕಿ ಕೆಲವರ ಬಂಧನ ಆಗಿದೆ. ಆದಾಗ್ಯೂ ಅವರ ಅಭಿಮಾನಿಗಳು ತಮ್ಮ ಕಾಯಕ ಮುಂದುವರಿಸಿದ್ದಾರೆ. ‘ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ’ ಎಂದಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿಗೆ ಡಿ ಬಾಸ್ ಫ್ಯಾನ್ಸ್ ಅಶ್ಲೀಲ ಪದ ಬಳಕೆ ಮಾಡಿ ಬೈದಿದ್ದಾರೆ.

‘ಡಿ ಬಾಸ್ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು’ ಎಂದು ವಾರಗಳ ಹಿಂದೆ ಸೋನು ಶೆಟ್ಟಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಅವರ ಕಮೆಂಟ್ ಬಾಕ್ಸ್ ಹಾಗೂ ಇನ್​ಸ್ಟಾಗ್ರಾಮ್ ಇನ್​​ಬಾಕ್ಸ್​​ನಲ್ಲಿ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಹಾಗೂ ಬೆದರಿಕೆ ಒಡ್ಡುವ ಸಂದೇಶ ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ
Image
ಜೂ. ಎನ್​ಟಿಆರ್​ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
Image
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ಫ್ಯಾನ್​ ಪೇಜ್ ನಿರ್ವಹಣೆಗೆ ದರ್ಶನ್ 25 ಲಕ್ಷ ಖರ್ಚು ಮಾಡ್ತಾರೆ; ಲಾಯರ್ ಜಗದೀಶ್

‘ದರ್ಶನ್ ಹೆಸರು ಬಳಸಿಕೊಂಡು ನೀವು ಪಬ್ಲಿಸಿಟಿ ಮಾಡಿಕೊಳ್ಳುತ್ತಿದ್ದೀರಾ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ನನಗೆ ಅವರ ಹೆಸರನ್ನು ತೆಗೆದುಕೊಂಡು ಪಬ್ಲಿಸಿಟಿ ಪಡೆದುಕೊಳ್ಳೋ ಅಗತ್ಯ ನನಗೆ ಇಲ್ಲ’ ಎಂದು ಸೋನು ಶೆಟ್ಟಿ ಹೇಳಿದ್ದಾರೆ. ಇದಾದ ಬಳಿಕ ಸೋನು ಶೆಟ್ಟಿ ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಅಭಿಮಾನಿಗಳು ಮಾಡಿದ ಕೆಟ್ಟ ಕಮೆಂಟ್​ಗಳನ್ನು ತೋರಿಸಿದ್ದಾರೆ. ಸದ್ಯ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ಸೋನು ಶೆಟ್ಟಿ ಪೋಸ್ಟ್

ರಮ್ಯಾ ಕೇಸ್

ರಮ್ಯಾ ಅವರು ‘ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕೆಲವರು ಬೆದರಿಕೆ ಹಾಕಿದ್ದರು. ಇದಕ್ಕೆ ರಮ್ಯಾ ಕೇಸ್ ಹಾಕಿದ್ದಾರೆ. ಈ ಪ್ರಕರಣದಲ್ಲಿ ಕೆಲವರ ಬಂಧನ ಆಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:13 am, Wed, 6 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ