‘ಸು ಫ್ರಮ್ ಸೋ’ಗೆ ಒಟಿಟಿಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?

‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್‌ಗಳಲ್ಲಿ ದೊಡ್ಡ ಯಶಸ್ಸು ಕಂಡಿದೆ. 120 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ, ಒಟಿಟಿಯಲ್ಲಿ ವಿಮರ್ಶೆಗಳು ಬಹಳ ಭಿನ್ನವಾಗಿವೆ.‘ನಾವು ಸಿನಿಮಾನ ಥಿಯೇಟರ್ನಲ್ಲಿ ನೋಡದೇ ಇದ್ದಿದ್ದೇ ಒಳ್ಳೆಯದಾಯ್ತು, ಇದು ಓವರ್ ರೇಟೆಡ್ ಚಿತ್ರ’ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ. ಈ ರೀತಿ ಹೇಳಲು ಅನೇಕ ಕಾರಣಗಳು ಇವೆ.

‘ಸು ಫ್ರಮ್ ಸೋ’ಗೆ ಒಟಿಟಿಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?
ಸು ಫ್ರಮ್ ಸೋ

Updated on: Sep 11, 2025 | 7:06 AM

‘ಸು ಫ್ರಮ್ ಸೋ’ ಸಿನಿಮಾ (Su From So) ಥಿಯೇಟರ್​ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಈ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ 120 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದ ಒಂದು ಸಿನಿಮಾ 120 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದರೆ ಅದು ಸುಲಭದ ಮಾತಲ್ಲ. ಅಷ್ಟು ಉತ್ತಮ ವಿಮರ್ಶೆ ಪಡೆದಿದ್ದರಿಂದಲೇ ಸಿನಿಮಾ ಗೆಲುವು ಕಂಡಿದೆ. ಆದರೆ, ಒಟಿಟಿಯಲ್ಲಿ ನೋಡಿದ ಕೆಲವರು ಇದಕ್ಕೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ.

‘ಸು ಫ್ರಮ್ ಸೋ’ ಜುಲೈ 25ರಂದು ಥಿಯೇಟರ್​​ನಲ್ಲಿ ರಿಲೀಸ್ ಆಗುವ ಕೆಲ ದಿನ ಮೊದಲೇ ಚಿತ್ರಕ್ಕೆ ವಿಶೇಷ ಶೋಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೋನಿಂದ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಸಿಕ್ಕಿತು. ಮೂರಕ್ಕೂ ಹೆಚ್ಚು ವಾರಗಳು ಸಿನಿಮಾಗೆ ಟಿಕೆಟ್ ಸಿಗದಂತೆ ಆದವು. ಜನರು ಈ ರೇಂಜ್​ಗೆ ಸಿನಿಮಾ ನೋಡಿದ್ದಾರೆ ಎಂದರೆ ಸಿನಿಮಾ ಉತ್ತಮವಾಗಿದೆ ಎಂದೇ ಅರ್ಥ. ಆದರೆ, ಈಗ ಒಟಿಟಿಯಲ್ಲಿ ಸಿನಿಮಾ ನೋಡಿದ ಕೆಲವರು ಕ್ಯಾತೆ ತೆಗೆದಿದ್ದಾರೆ.

ಇದನ್ನೂ ಓದಿ
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ

ಇದನ್ನೂ ಓದಿ: ‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?  

‘ನಾವು ಸಿನಿಮಾನ ಥಿಯೇಟರ್​ನಲ್ಲಿ ನೋಡದೇ ಇದ್ದಿದ್ದೇ ಒಳ್ಳೆಯದಾಯ್ತು, ಇದು ಓವರ್​ ರೇಟೆಡ್ ಚಿತ್ರ’ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ. ಈ ರೀತಿ ಹೇಳಲು ಅನೇಕ ಕಾರಣಗಳು ಇವೆ. ಜಿಯೋ ಹಾಟ್​ಸ್ಟಾರ್​​ನಲ್ಲಿ ಪ್ರೀಮಿಯಮ್ ಸಬ್​ಸ್ಕ್ರಿಪ್ಶನ್ ತೆಗೆದುಕೊಂಡರೆ ಮಾತ್ರ ನಿಮಗೆ ಜಾಹೀರಾತು ಇಲ್ಲದೆ ಸಿನಿಮಾ ನೋಡುವ ಅವಕಾಶ ಸಿಗುತ್ತದೆ. ಇಲ್ಲವಾದಲ್ಲಿ, ಸಿನಿಮಾ ಪೂರ್ಣಗೊಳ್ಳುವುದಕ್ಕೂ ಮೊದಲು ಕನಿಷ್ಠ ಹದಿನೈದು ಬಾರಿ ಜಾಹೀರಾತುಗಳು ಬರುತ್ತವೆ. ಪ್ರತಿ ಬಾರಿ ಜಾಹೀರಾತು ಒಂದು ನಿಮಿಷಕ್ಕೂ ಹೆಚ್ಚು ಸಮಯ ಇರುತ್ತದೆ. ಆ ಸಮಯದಲ್ಲಿ ಗಮನ ಮೊಬೈಲ್ ಕಡೆ ಹೋಗುತ್ತದೆ, ಇಲ್ಲವೇ ಅಡುಗೆ ಮನೆಯ ಸಣ್ಣ ಪುಟ್ಟ ಕೆಲಸ ನೆನಪಾಗುತ್ತದೆ. ಹೀಗಾದಾಗ ಸಿನಿಮಾದ ನಿಜವಾದ ಅನುಭವ ಸೀಗೋದಿಲ್ಲ.

ಇನ್ನು ಸಿನಿಮಾಗಳನ್ನು ತಯಾರಿಸೋದೇ ಥಿಯೇಟರ್ ಅನುಭವಕ್ಕೆ. ಅಲ್ಲಿ ಸಿನಿಮಾ ಬೇರೆಯದೇ ರೀತಿಯ ಅನುಭವ ನೀಡುತ್ತದೆ. ಇದೇ ಅನುಭವವನ್ನು ಮೊಬೈಲ್​ನಲ್ಲೋ ಅಥವಾ ಟಿವಿಯಲ್ಲೋ ನೋಡಿ ಪಡೆಯಲು ಸಾಧ್ಯವಿಲ್ಲ. ಗುಂಪಿನಲ್ಲಿದ್ದಾಗ ಸಣ್ಣ ಸಣ್ಣ ಹಾಸ್ಯಗಳು ಸಾಂಕ್ರಾಮಿಕದಂತೆ ಹರಡಿ ನಗು ತರಿಸುತ್ತವೆ. ಆದರೆ, ಮನೆಯಲ್ಲಿ ಆ ರೀತಿ ಆಗೋದಿಲ್ಲ. ಈ ಕಾರಣದಿಂದಲೂ ಕೆಲವರಿಗೆ ಸಿನಿಮಾ ಇಷ್ಟ ಆಗದೇ ಇರಬಹುದು. ಇನ್ನೂ ಕೆಲವರಿಗೆ ಸಿನಿಮಾದ ನಿಜವಾದ ಆಶಯ ಅಥವಾ ಹಾಸ್ಯದ ಒಳಗಿರೋ ಒಂದೊಳ್ಳೆಯ ಸಂದೇಶ ಅರ್ಥವಾಗದೇ ಇರಬಹುದು. ಈ ಮಧ್ಯೆಯೂ ಕೆಲವರು ಸಿನಿಮಾನ ಅದ್ಭುತ ಎಂದು ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.