ವಿನಯ್ ರಾಜ್ಕುಮಾರ್ ಜೊತೆ ರಮ್ಯಾ ಸುತ್ತಾಟ; ವೈರಲ್ ಆಗಿವೆ ಫೋಟೋಗಳು
ಒಂದಷ್ಟು ದಿನಗಳ ಹಿಂದೆ ರಮ್ಯಾ ಮತ್ತು ವಿನಯ್ ರಾಜ್ಕುಮಾರ್ ಅವರು ಒಟ್ಟಿಗೆ ಫೋಟೋಶೂಟ್ ಮಾಡಿಸಿದ್ದರು. ಈಗ ಅವರಿಬ್ಬರು ಜೊತೆಯಾಗಿ ಸುತ್ತಾಡಿದ ಫೋಟೋಗಳನ್ನು ಸ್ವತಃ ರಮ್ಯಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಪುತ್ರಿ ವಂದಿತಾ ರಾಜ್ಕುಮಾರ್ ಕೂಡ ರಮ್ಯಾ ಜೊತೆಯಲ್ಲಿ ಕಾಲ ಕಳೆದಿದ್ದಾರೆ.

ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಈಗಂತೂ ರಮ್ಯಾ (Ramya) ಅವರು ಸಿನಿಮಾ ಆಯ್ಕೆಯಲ್ಲಿ ಅವರಸ ತೋರುತ್ತಿಲ್ಲ. ಆರಾಮಾಗಿ ಅವರು ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ದೇಶ-ವಿದೇಶ ಸುತ್ತುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ರಮ್ಯಾ ಅವರಿಗೆ ವಿನಯ್ ರಾಜ್ಕುಮಾರ್ (Vinay Rajkumar) ಕೂಡ ಸಾಥ್ ನೀಡಿದ್ದಾರೆ. ಈ ಬಾರಿ ಅವರ ಜೊತೆ ಪುನೀತ್ ರಾಜ್ಪುಮಾರ್ ಪುತ್ರಿ ವಂದಿತಾ ಕೂಡ ಇದ್ದಾರೆ.
ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಸುತ್ತಾಟಗಳ ಬಗ್ಗೆ ಅವರು ಅಪ್ಡೇಟ್ ನೀಡುತ್ತಾರೆ. ಈಗ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿನಯ್ ರಾಜ್ಕುಮಾರ್, ರಮ್ಯಾ, ವಂದಿತಾ ರಾಜ್ಕುಮಾರ್ ಅವರು ಖುಷಿ ಖುಷಿಯಾಗಿ ಕಾಲ ಕಳೆದ ಕ್ಷಣಗಳು ಈ ಫೋಟೋಗಳಲ್ಲಿ ಸೆರೆ ಆಗಿವೆ.
ರಾಜ್ಕುಮಾರ್ ಕುಟುಂಬದ ಜೊತೆ ರಮ್ಯಾ ಅವರಿಗೆ ಮೊದಲಿನಿಂದಲೂ ಆಪ್ತತೆ ಇದೆ. ರಮ್ಯಾ ಮತ್ತು ವಿನಯ್ ರಾಜ್ಕುಮಾರ್ ಅವರು ಕ್ಲೋಸ್ ಆಗಿದ್ದಾರೆ. ಇತ್ತೀಚೆಗೆ ವಿನಯ್ ರಾಜ್ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಬಿಡುಗಡೆ ಆಯಿತು. ಆ ಚಿತ್ರಕ್ಕೆ ರಮ್ಯಾ ಅವರು ಶುಭ ಕೋರಿದರು. ಆ ಮೂಲಕ ವಿನಯ್ ರಾಜ್ಕುಮಾರ್ ಅವರಿಗೆ ರಮ್ಯಾ ಸಪೋರ್ಟ್ ಮಾಡಿದರು.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಅವರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ವೈರಲ್ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಆದರೆ ಯಾರೊಬ್ಬರೂ ಕೂಡ ನೆಗೆಟಿವ್ ಕಮೆಂಟ್ ಮಾಡುವುದಾಗಲಿ, ಅಸಭ್ಯ ಪದಗಳನ್ನು ಬಳಸುವುದಾಗಲಿ ಮಾಡಿಲ್ಲ. ಅಷ್ಟರಮಟ್ಟಿಗೆ ರಮ್ಯಾ ಅವರು ಕಾನೂನಿನ ಮೂಲಕ ಬದಲಾವಣೆ ತಂದಿದ್ದಾರೆ.
ಇದನ್ನೂ ಓದಿ: ಎಷ್ಟೇ ವರ್ಷ ಕಳೆದರೂ ನೀವೇ ನಮ್ಮ ಕ್ರಶ್: ರಮ್ಯಾ ಫೋಟೋಗೆ ಹೊಗಳಿಕೆ
ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಾಗ ದರ್ಶನ್ ಅಭಿಮಾನಿಗಳು ಅಶ್ಲೀಲ ಮತ್ತು ಅಸಭ್ಯವಾಗಿ ರಮ್ಯಾಗೆ ಮೆಸೇಜ್ ಕಳಿಸಿದ್ದರು. ಅಂಥವರ ವಿರುದ್ಧ ರಮ್ಯಾ ದೂರು ನೀಡಿದ್ದರು. ಬಳಿಕ ಹಲವರನ್ನು ಅರೆಸ್ಟ್ ಮಾಡಲಾಗಿತ್ತು. ಆ ಘಟನೆಯ ಪರಿಣಾಮದಿಂದ ಕಮೆಂಟ್ ಬಾಕ್ಸ್ನಲ್ಲಿ ಈಗ ಸಭ್ಯತೆ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








