‘ಸು ಫ್ರಮ್ ಸೋ’ ತೆಲುಗು ವರ್ಷನ್​ಗೆ ಹೈದರಾಬಾದ್​ನಲ್ಲಿ ಭರ್ಜರಿ ಶೋ

ಕನ್ನಡದಲ್ಲಿ ಯಶಸ್ವಿಯಾದ ‘ಸು ಫ್ರಮ್ ಸೋ’ ತೆಲುಗು ಆವೃತ್ತಿ ಆಗಸ್ಟ್ 8 ರಂದು ತೆರೆ ಕಾಣುತ್ತಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಸಿನಿಮಾ ಸಾಕಷ್ಟು ಶೋಗಳನ್ನು ಪಡೆದಿದೆ. ಮಹೇಶ್ ಬಾಬು ಅವರ ಮಲ್ಟಿಪ್ಲೆಕ್ಸ್‌ನಲ್ಲಿ 8 ಶೋಗಳನ್ನು ಪಡೆದುಕೊಂಡಿದೆ. ಮಲಯಾಳಂನಲ್ಲೂ ಯಶಸ್ವಿಯಾಗಿರುವ ಚಿತ್ರ ಇದೀಗ ತೆಲುಗು ಪ್ರೇಕ್ಷಕರನ್ನು ರಂಜಿಸುವ ನಿರೀಕ್ಷೆಯಲ್ಲಿದೆ.

‘ಸು ಫ್ರಮ್ ಸೋ’ ತೆಲುಗು ವರ್ಷನ್​ಗೆ ಹೈದರಾಬಾದ್​ನಲ್ಲಿ ಭರ್ಜರಿ ಶೋ
ಸು ಫ್ರಮ್ ಸೋ

Updated on: Aug 07, 2025 | 8:52 AM

‘ಸು ಫ್ರಮ್ ಸೋ’ ಸಿನಿಮಾ (Su From So) ಕನ್ನಡದ ಬಳಿಕ ಮಲಯಾಳಂನತ್ತ ಸಾಗಿತು. ಅಲ್ಲಿ ಚಿತ್ರ ಉತ್ತಮ ವಿಮರ್ಶೆ ಪಡೆಯಿತು. ಆ ಬಳಿಕ ಚಿತ್ರ ತೆಲುಗು ನಾಡಿನತ್ತ ಸಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಆಗಸ್ಟ್ 8ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಹೈದರಾಬಾದ್​​ನಲ್ಲಿ ಹೆಚ್ಚು ಶೋಗಳು ಸಿಕ್ಕಿವೆ. ಇದರ ಜೊತೆಗೆ ಎರಡೂ ರಾಜ್ಯಗಳ ವಿವಿಧ ಕಡೆಗಳಲ್ಲಿ ಸಿನಿಮಾಗೆ ಶೋ ಆಯೋಜನೆ ಮಾಡಲಾಗಿದೆ.

‘ಪುಷ್ಪ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಗೆ ಇದೆ. ಇವರು ಸಿನಿಮಾ ಹಂಚಿಕೆಯ ಅನುಭವ ಹೊಂದಿದ್ದಾರೆ. ಅವರು ‘ಸು ಫ್ರಮ್ ಸೋ’ ಚಿತ್ರದ ತೆಲುಗು ವರ್ಷನ್ ಹಂಚಿಕೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಕಾರಣದಿಂದ ತೆಲುಗಿನಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆ ಸುಳ್ಳಾಗಿಲ್ಲ.

‘ಸು ಫ್ರಮ್ ಸೋ’ ಸಿನಿಮಾಗೆ ಹೈದರಾಬಾದ್​ನಲ್ಲಿ ಈವರೆಗೆ (ಆಗಸ್ಟ್ 7, ಬೆಳಿಗ್ಗೆ 9 ಗಂಟೆವರೆಗೆ) 38 ಶೋಗಳನ್ನು ನೀಡಲಾಗಿದೆ. ಕನ್ನಡದಿಂದ ಡಬ್ ಆಗಿ ತೆಲುಗಿನಲ್ಲಿ ರಿಲೀಸ್ ಆಗುತ್ತಿರುವ ಚಿತ್ರವೊಂದಕ್ಕೆ ಇಷ್ಟು ಶೋ ಸಿಕ್ಕಿದ್ದು ನಿಜಕ್ಕೂ ಗ್ರೇಟ್. ಮಹೇಶ್ ಬಾಬು ಒಡೆತನದ ಮಲ್ಟಿಪ್ಲೆಕ್ಸ್​​ನಲ್ಲೇ ಸಿನಿಮಾಗೆ 8 ಶೋ ಸಿಕ್ಕಿದೆ. ಸಂಜೆ ವೇಳೆಗೆ ಈ ಶೋಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ
ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
ಪತಿಗೆ ಎಂದೂ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

‘ಸು ಫ್ರಮ್ ಸೋ’ ಸಿನಿಮಾನ ಕನ್ನಡಿಗರು ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಮಲಯಾಳಂನವರಿಗೂ ಸಿನಿಮಾ ಇಷ್ಟ ಆಗಿದೆ. ಕೊಚ್ಚಿ ಮೊದಲಾದ ಕಡೆಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ರಿತಿಯಲ್ಲಿ ತೆಲುಗು ಮಂದಿಗೂ ಸಿನಿಮಾ ಹಿಡಿಸಿದರೆ ವೀಕೆಂಡ್ ವೇಳೆಗೆ ಶೋಗಳ ಸಂಖ್ಯೆ ಮತ್ತಷ್ಟು ಏರಿಕೆ ಕಾಣಬಹುದು. ಹೈದರಾಬಾದ್ ಮಾತ್ರವಲ್ಲದೆ, ವಿಜಯವಾಡ ಮೊದಲಾದ ಕಡೆಗಳಲ್ಲೂ ‘ಸು ಫ್ರಮ್ ಸೋ’ ಸಿನಿಮಾ ತೆಲುಗು ವರ್ಷನ್​ಗೆ ಶೋ ಸಿಕ್ಕಿದೆ.

ಇದನ್ನೂ ಓದಿ: 50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು? ಇಲ್ಲಿದೆ ವಿವರ

ಹೈದರಾಬಾದ್​ನಲ್ಲಿ ‘ಸು ಫ್ರಮ್ ಸೋ’ ಚಿತ್ರದ ಕನ್ನಡ ವರ್ಷನ್ ಕೂಡ ಪ್ರದರ್ಶನ ಕಾಣುತ್ತಿದೆ. ಇಂದಿಗೆ ಒಟ್ಟೂ ಐದು ಶೋಗಳನ್ನು ಸಿನಿಮಾಗೆ ನೀಡಲಾಗಿದೆ. ಅಲ್ಲಿರುವ ಕನ್ನಡಿಗರು ಸಿನಿಮಾನ ಇಷ್ಟಪಟ್ಟು ನೋಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.