‘ಸು ಫ್ರಮ್ ಸೋ’ ತೆಲುಗಿಗೆ ರಿಮೇಕ್ ಮಾಡಿದರೆ ಈ ಕಲಾವಿದರಿಗೆ ಮಣೆ ಹಾಕ್ತೀನಿ ಎಂದ ರಾಜ್ ಬಿ. ಶೆಟ್ಟಿ

ರಾಜ್ ಬಿ. ಶೆಟ್ಟಿ ನಿರ್ಮಿಸಿದ ‘ಸು ಫ್ರಮ್ ಸೋ’ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದರೆ ಯಾವ ರೀತಿಯ ಪಾತ್ರವರ್ಗ ಇರುತ್ತಿತ್ತು ಎಂದು ರಾಜ್ ಬಿ. ಶೆಟ್ಟಿಗೆ ಕೇಳಲಾಯಿತು. ಹೊಸ ಕಲಾವಿದರನ್ನು ಆಯ್ಕೆ ಮಾಡುವ ಬಗ್ಗೆ ಅವರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

‘ಸು ಫ್ರಮ್ ಸೋ’ ತೆಲುಗಿಗೆ ರಿಮೇಕ್ ಮಾಡಿದರೆ ಈ ಕಲಾವಿದರಿಗೆ ಮಣೆ ಹಾಕ್ತೀನಿ ಎಂದ ರಾಜ್ ಬಿ. ಶೆಟ್ಟಿ
ಸು ಫ್ರಮ್ ಸೋ

Updated on: Aug 08, 2025 | 12:42 PM

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ (Su From So) ಸೂಪರ್ ಹಿಟ್ ಆಗಿದೆ. ಕನ್ನಡದಲ್ಲಿ ಈ ಚಿತ್ರ 45 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ. ಈ ಸಿನಿಮಾ ಇಂದು (ಆಗಸ್ಟ್ 8) ತೆಲುಗನಲ್ಲಿ ರಿಲೀಸ್ ಆಗಿದೆ. ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದರೆ ಯಾವ ರೀತಿಯ ಪಾತ್ರವರ್ಗ ಇರುತ್ತಿತ್ತು ಎಂದು ರಾಜ್ ಬಿ. ಶೆಟ್ಟಿಗೆ ಕೇಳಲಾಯಿತು. ಇದಕ್ಕೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ರಿಲೀಸ್​ಗೂ ಮೊದಲು ಸುದ್ದಿಗೋಷ್ಠಿ ನಡೆಸಿದರು ರಾಜ್​ ಬಿ. ಶೆಟ್ಟಿ. ಈ ವೇಳೆ ಕೆಲ ಪ್ರಶ್ನೆಗಳು ಅವರಿಗೆ ಎದುರಾದವು. ‘ನೀವು ಸು ಫ್ರಮ್ ಸೋ ಚಿತ್ರವನ್ನು ನೇರವಾಗಿ ತೆಲುಗಿನಲ್ಲಿ ಮಾಡಿದ್ದರೆ ಯಾವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ರಾಜ್ ಬಿ. ಶೆಟ್ಟಿ ಅವರಿಗೆ ಕೇಳಲಾಯಿತು.

‘ನಾನು ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಸ್ಟಾರ್ ಹೀರೋಗಳನ್ನು ಆಯ್ಕೆ ಮಾಡಿಕೊಂಡರೆ, ಅವರು ಶೈನ್ ಆಗುವ ರೀತಿಯಲ್ಲೇ ಪಾತ್ರ ಬರೆಯಬೇಕಾಗುತ್ತದೆ. ಸಿನಿಮಾದಲ್ಲಿ 20-30 ಪಾತ್ರ ಬರುತ್ತದೆ. ಎಲ್ಲ ಪಾತ್ರಕ್ಕೂ ಅದರದ್ದೇ ಆದ ತೂಕ ಇದೆ. ನೀವು ಸಿನಿಮಾದಿಂದ ಹೊರ ಬರುವಾಗ ಕನಿಷ್ಠ 10 ಪಾತ್ರ ನೆನಪಿನಲ್ಲಿ ಇರುತ್ತದೆ’ ಎನ್ನುತ್ತಾರೆ ರಾಜ್.

ಇದನ್ನೂ ಓದಿ
ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?
‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ ಲೆಕ್ಕ
‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ನಲ್ಲಿ ರಾಜ್ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?

‘ನಾನು ಎಲ್ಲಾ ಪಾತ್ರಗಳಿಗೂ ಸರಿಯಾದ ತೂಕ ಕೊಡಬೇಕು. ಒಂದೊಮ್ಮೆ ಸ್ಟಾರ್​ ಈ ಸಿನಿಮಾದಲ್ಲಿ ನಟಿಸಿದರೆ ಅವರ ಪಾತ್ರಕ್ಕೆ ತೂಕ ಬಂದು, ಉಳಿದ ಪಾತ್ರಗಳು ಡಲ್ ಆಗಬಹುದು. ನಾನು ಹುಡುಕುತ್ತೇನೆ, ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ರಾಜ್. ಸಿನಿಮಾದಲ್ಲಿ ತಾವು ನಟಿಸಿದ್ದಾಗಿ ಹೇಳಿಕೊಳ್ಳದೆ ಇರಲು ಕಾರಣ ಕೂಡ ಇದೇ ಆಗಿದೆಯಂತೆ. ‘ಸಿನಿಮಾ ಕಂಟೆಂಟ್​​ನಿಂದ ಗೆಲ್ಲಬೇಕು. ನಾನಿದ್ದೇನೆ ಎಂಬ ಕಾರಣಕ್ಕೆ ಸಿನಿಮಾ ಹೈಲೈಟ್ ಆಗಬಾರದು’ ಎಂಬುದು ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.