ಹೇಗಿದೆ ನೋಡಿ ‘ಸು ಫ್ರಮ್ ಸೋ’ ಸಿನಿಮಾ ಶೂಟ್ ಮಾಡಿದ ಲೊಕೇಶನ್; ಎಲ್ಲವೂ ನಿಜವಾದ ಮನೆಗಳು

‘ಸು ಫ್ರಮ್ ಸೋ’ ಚಿತ್ರದ ಶೂಟಿಂಗ್​ಗೆ ನಿಜವಾದ ಹಳ್ಳಿಯ ಮನೆಯನ್ನು ಬಳಸಲಾಗಿದೆ ಎಂಬುದು ವಿಶೇಷ. ರಾಜ್ ಬಿ ಶೆಟ್ಟಿ ಅವರು ಚಿತ್ರದ ಹಳ್ಳಿಗಾಡಿನ ವಾತಾವರಣವನ್ನು ನಿಖರವಾಗಿ ತೋರಿಸಲು ಈ ರೀತಿ ಮಾಡಿದ್ದಾರೆ. ಒಂದು ತಿಂಗಳ ಕಾಲ ಈ ಮನೆಯನ್ನು ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಮನೆಯ ಮಾಲೀಕರ ಸಹಕಾರ ಮತ್ತು ಚಿತ್ರತಂಡದ ಶ್ರಮದ ಬಗ್ಗೆ ಈ ವಿಡಿಯೋ ವಿವರಿಸುತ್ತದೆ.

ಹೇಗಿದೆ ನೋಡಿ ‘ಸು ಫ್ರಮ್ ಸೋ’ ಸಿನಿಮಾ ಶೂಟ್ ಮಾಡಿದ ಲೊಕೇಶನ್; ಎಲ್ಲವೂ ನಿಜವಾದ ಮನೆಗಳು
ಸು ಫ್ರಮ್ ಸೋ ಮನೆ (Credit: DURGA KAKYAPADAVU)

Updated on: Aug 05, 2025 | 12:06 PM

ಸಾಮಾನ್ಯವಾಗಿ ಸಿನಿಮಾ ಶೂಟ್ ಮಾಡುವಾಗ ಸೆಟ್​ಗಳ ನಿರ್ಮಾಣ ಮಾಡುತ್ತಾರೆ. ಸೆಟ್​ನಲ್ಲಿಯೇ ಸಿನಿಮಾ ಶೂಟ್ ಮಾಡುತ್ತಾರೆ. ಶೂಟಿಂಗ್ ವೇಳೆ ಜನರು ಕಿಕ್ಕಿರಿದು ನೆರೆಯುತ್ತಾರೆ. ಈ ಕಾರಣಕ್ಕೆ ಬಹುತೇಕರು ಸೆಟ್​ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ರಾಜ್ ಬಿ ಶೆಟ್ಟಿ (Raj B Shetty) ಅವರು ನಿಜವಾದ ಮನೆಯನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್ ಮಾಡಿದ್ದಾರೆ. ‘ದುರ್ಗ ಕಾಕ್ಯಾಪಡವು’ ಹೆಸರಿನ ಯೂಟ್ಯೂಬ್ ಚಾನೆಲ್​ನವರು ‘ಸು ಫ್ರಮ್ ಸೋ’ ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ತೋರಿಸಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಪಕ್ಕಾ ಹಳ್ಳಿ ಸೊಗಡಿನ ಕಥೆ. ಈ ಚಿತ್ರದ ಕಥೆ ಸಂಪೂರ್ಣವಾಗಿ ಹಳ್ಳಿಯಲ್ಲೇ ಸಾಗುತ್ತದೆ. ಈ ಕಾರಣಕ್ಕೆ ಅಂಥದ್ದೇ ಮನೆಗಾಗಿ ರಾಜ್ ಬಿ. ಶೆಟ್ಟಿ ಅವರು ಹುಡುಕಾಟ ನಡೆಸಿದ್ದರು. ಈ ರೀತಿ ಹುಡುಕಾಟದಲ್ಲಿರುವ ರಾಜ್ ಬಿ. ಶೆಟ್ಟಿಗೆ ಅಂಥದ್ದೊಂದು ಮನೆ ಸಿಕ್ಕಿತ್ತು. ಆ ಮನೆ ಹೇಗಿದೆ ಎಂಬುದನ್ನು ದುರ್ಗಪ್ರಸಾದ್ ಅವರು ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಸು ಫ್ರಮ್ ಸೋ’ದ ಬಹುತೇಕ ಕಥೆ ಅಶೋಕನ ಮನೆಯಲ್ಲಿ ಸಾಗುತ್ತದೆ. ಇದಕ್ಕಾಗಿ ಒಂದು ತಿಂಗಳು ಮನೆಯೊಂದನ್ನು ತೆಗೆದುಕೊಳ್ಳಲಾಗಿತ್ತು. ಮನೆಯ ಮಾಲೀಕರು ಸಹ ಖುಷಿಯಿಂದ ಮನೆಯನ್ನು ಶೂಟಿಂಗ್​ಗೆ ನೀಡಿದ್ದರು. ಸಂಪೂರ್ಣ ಮನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಲಾಗಿತ್ತು. ಸಿನಿಮಾದಲ್ಲಿ ನೋಡಿದ ಮನೆಗೂ ಆ ಲೊಕೇಶ್​ನಗೂ ಈಗ ಸಾಕಷ್ಟು ವ್ಯತ್ಯಾಸ ಇದೆ.

ಇದನ್ನೂ ಓದಿ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?

ಸು ಫ್ರಮ್ ಸೋ ಲೋಕೇಶ್ ವಿಡಿಯೋ

‘ಒಂದು ತಿಂಗಳು ಮನೆಯಲ್ಲಿ ಶೂಟ್ ಮಾಡಿದರು. ಶೂಟಿಂಗ್ ನಮಗೆ ಹೊಸದಾಗಿತ್ತು. ಲೈಟ್ ಸೆಟಿಂಗ್ ಕೂಡ ದೊಡ್ಡದಾಗಿತ್ತು. ರಾಜ್ ಬಿ ಶೆಟ್ಟಿ ಅವರು ದೊಡ್ಡ ಸ್ಟಾರ್​. ಅವರು ನಮ್ಮ ಜೊತೆ ಸಾಮಾನ್ಯರಂತೆ ಬೆರೆತು ಹೋಗಿದ್ದರು. ಜೆಪಿ ತುಮಿನಾಡ್ ಸರಳ ವ್ಯಕ್ತಿ’ ಎಂದು ಮನೆಯ ಮಾಲೀಕರು ಹೊಗಳಿದ್ದಾರೆ.

ಇದನ್ನೂ ಓದಿ: ಬಾವ ಬಂದರು ಹಾಡಿಗೆ ರಾಜ್ ಬಿ ಶೆಟ್ಟಿ ಗ್ಯಾಂಗ್​ನಿಂದ ಭರ್ಜರಿ ಸ್ಟೆಪ್

ಮೆಹಂದಿ ಕಾರ್ಯಕ್ರಮ, ಡ್ಯಾಂಕ್ಸ್ ಆ್ಯಂಥಮ್ ಹಾಡಿನ ಶೂಟ್, ಬಾವನ ಎಂಟ್ರಿ ಶೂಟ್ ನಡೆದ ಸ್ಥಳವನ್ನು ದುರ್ಗಪ್ರಸಾದ್ ಅವರು ತೋರಿಸಿದ್ದಾರೆ. ಮದುವೆ ದೃಶ್ಯ, ರವಿ ಅಣ್ಣನ ಬೈಕ ಬೀಳೋದು, ರವಿ ಅಣ್ಣ ಚಪ್ಪೆ ಸೋಡ ಕುಡಿಯೋದು ಮೊದಲಾದ ಲೊಕೇಶನ್​ಗಳನ್ನು ರಿಯಲ್ ಆಗಿಯೇ ತೆಗೆದುಕೊಳ್ಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:54 am, Tue, 5 August 25