ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರನ್ನು ಆರಾಧಿಸುವ ಅನೇಕ ಕಲಾವಿದರಿದ್ದಾರೆ. ‘ಸ್ಪರ್ಶ’, ‘ಹುಚ್ಚ’ ಇಂದ ಹಿಡಿದು ‘ಮ್ಯಾಕ್ಸ್’ ಸಿನಿಮಾವರೆಗೆ ಸುದೀಪ್ ಅನೇಕ ಹಿಟ್ಗಳನ್ನು ನೀಡಿದ್ದಾರೆ. ಇದರಲ್ಲಿ ‘ಸ್ವಾತಿ ಮುತ್ತು’ ಚಿತ್ರ ಕೂಡ ಒಂದು. ಇದರ ಬಗ್ಗೆ ಸುದೀಪ್ ಅವರು ಒಂದು ಸ್ವಾರಸ್ಯಕರ ಘಟನೆ ಹೇಳಿದ್ದರು. ಚಾಲೆಂಜ್ ಆಗಿ ಸ್ವೀಕರಿಸಿ ಸುದೀಪ್ ಅವರು ಈ ಸಿನಿಮಾ ಮಾಡಿದ್ದರು ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.
1986ರಲ್ಲಿ ತೆಲುಗಿನಲ್ಲಿ ಬಂದ ‘ಸ್ವಾತಿ ಮುತ್ಯಂ’ ಚಿತ್ರದ ರಿಮೇಕ್ ಆಗಿ ‘ಸ್ವಾತಿ ಮುತ್ತು’ ಸಿನಿಮಾ ಮೂಡಿ ಬಂತು. ಮೂಲ ಸಿನಿಮಾದಲ್ಲಿ ಕಮಲ್ ಹಾಸನ್ ಅವರು ನಟಿಸಿದ್ದರು. ಅವರ ನಟನೆಯನ್ನು ಮ್ಯಾಚ್ ಮಾಡಬೇಕು ಎಂದರೆ ನಿಜಕ್ಕೂ ಚಾಲೆಂಜಿಂಗ್. ಆದರೆ, ಈ ಚಾಲೆಂಜ್ನ ರಿಮೇಕ್ ಮಾಡುತ್ತೇನೆ ಎಂದಾಗ ಸುದೀಪ್ ಅವರು ಒಪ್ಪಿಕೊಂಡು ನಟಿಸಿದರು. ಈ ಮೂಲಕ ಭೇಷ್ ಎನಿಸಿಕೊಂಡರು.
ಈ ಬಗ್ಗೆ ಮಾತನಾಡಿದ್ದ ಸುದೀಪ್, ‘ಒಂದು ಕಡೆ ಎಲ್ಲರೂ ಸೇರುತ್ತಾರೆ. ಆಗ ಕಮಲ್ ಹಾಸನ್ ಟಾಪಿಕ್ ಬರುತ್ತದೆ. ಕಮಲ್ ಹಾಸನ್ ಬಗ್ಗೆ ಹೊಗಳಿದಾಗ ಖುಷಿ ಆಗುತ್ತದೆ. ನಮ್ಮಲ್ಲಿ ಒಬ್ಬರೂ ಹುಟ್ಟಿಲ್ಲ ಎಂಬ ಸುದ್ದಿ ಬರುತ್ತದೆ. ನಮ್ಮಲ್ಲಿ ಇದಾರೆ. ಆದರೆ, ನೀವ್ಯಾಕೆ ಏಕೆ ಆ ರೀತಿಯ ಕಥೆ ಬರೆಯುವುದಿಲ್ಲ ಎಂದು ಕೇಳಲಾಯಿತು. ನಿಮ್ಮ ಕೈಯಲ್ಲಿ ಆಗುತ್ತದೆಯೇ ಎನ್ನುವ ಪ್ರಶ್ನೆ ಬಂತು. ಅದಕ್ಕೆ ನಾನು ಮಾಡುತ್ತೇನೆ ಎಂದೆ. ನಾವು ಚೂಸ್ ಮಾಡಿದ್ದನ್ನು ಮಾಡಬೇಕು ಎಂದು ಅಂದರು. ಓಕೆ ಎಂದೆ. ಆಗ ಅವರು ‘ಸ್ವಾತಿ ಮುತ್ತು’ ಆಯ್ಕೆ ಮಾಡಿದರು’ ಎಂದಿದ್ದರು ಸುದೀಪ್.
ಇದನ್ನೂ ಓದಿ:ಮ್ಯಾಚ್ ಮುಗಿಸಿ ಮೆಟ್ರೋದಲ್ಲಿ ಬಂದ ಕಿಚ್ಚ ಸುದೀಪ್ ಆ್ಯಂಡ್ ಟೀಂ; ಇಲ್ಲಿದೆ ವಿಡಿಯೋ
ಕಮಲ್ ಹಾಸನ್ ಅವರ ವಿಚಾರ ಬಂದಿದ್ದರಿಂದಲೇ ಅವರ ನಟನೆಯ ಸಿನಿಮಾ ಆಯ್ಕೆ ಮಾಡಲಾಯಿತು. ‘ಸ್ವಾಮಿ ಮುತ್ಯಂ’ ಚಿತ್ರವನ್ನು ತೆಗೆದುಕೊಂಡು ರಿಮೇಕ್ ಮಾಡಲಾಯಿತು. ‘ಸ್ವಾತಿ ಮುತ್ತು’ ಸಿನಿಮಾ 2003ರಲ್ಲಿ ರಿಲೀಸ್ ಆಯಿತು. ಸುದೀಪ್ ಅವರ ನಟನೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಕೇಳಿ ಬಂತು.
ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು. ಸುದೀಪ್ ಜೊತೆ ಮೀನಾ, ಕಿಶನ್ ಶ್ರೀಕಾಂತ್ ಮೊದಾದವರು ನಟಿಸಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗಿವೆ. ಸುದೀಪ್ ಅವರಿಗೆ ಈ ಚಿತ್ರದ ನಟನೆಗೆ ಫಿಲ್ಮ್ ಫೇರ್ ಸೌತ್ ಅವಾರ್ಡ್ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ