ಪಾರ್ಟಿ ಸಖತ್ ಜೋರು, ಆದರೆ ಫಿಟ್​ನೆಸ್ ಮರೆತಿಲ್ಲ ಕಿಚ್ಚ

|

Updated on: Aug 27, 2023 | 6:22 PM

Sudeep: ಸುಮಲತಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ನಟ ಸುದೀಪ್, ತಡರಾತ್ರಿಯವರೆಗೂ ಕಾರ್ಯಕ್ರಮದಲ್ಲಿದ್ದಾಗಿಯೂ ಮಾರನೇಯ ದಿನ ತಮ್ಮ ವರ್ಕೌಟ್ ಅನ್ನು ಮರೆತಿಲ್ಲ. ಕಿಚ್ಚ 46 ಸಿನಿಮಾ ಕ್ಲೈಮ್ಯಾಕ್ಸ್​ಗಾಗಿ ಭರ್ಜರಿಯಾಗಿ ಕಿಚ್ಚ ತಯಾರಾಗುತ್ತಿದ್ದಾರೆ.

ಪಾರ್ಟಿ ಸಖತ್ ಜೋರು, ಆದರೆ ಫಿಟ್​ನೆಸ್ ಮರೆತಿಲ್ಲ ಕಿಚ್ಚ
ಸುದೀಪ್
Follow us on

ಸುದೀಪ್ (Sudeep)​ ಅಪ್ಪಟ ಸಿನಿಮಾ ಪ್ರೇಮಿ. ಅವರಿಗೆ ಎಲ್ಲದಕ್ಕಿಂತಲೂ ಸಿನಿಮಾನೇ ಮೊದಲು. ಸಿನಿಮಾ ಕಾರ್ಯಕ್ರಮಗಳು, ಸಿನಿಮಾ ಸಂಬಂಧಿ ಪಾರ್ಟಿಗಳು ಇನ್ನಿತರೆಗಳಲ್ಲಿ ಸತತವಾಗಿ ಭಾಗವಹಿಸುತ್ತಲೇ ಇರುತ್ತಾರೆ. ಅಭಿಮಾನಿಗಳು ಸೇರಿದಂತೆ ಇನ್ನೂ ಹಲವಾರ ಮಂದಿಯನ್ನು ಪ್ರತಿದಿನ ಭೇಟಿ ಮಾಡುತ್ತಿರುತ್ತಾರೆ. ಇವುಗಳೆಲ್ಲದರ ನಡುವೆಯೂ ಸಿನಿಮಾ ಹಾಗೂ ತಮ್ಮ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುವುದನ್ನು ಮಾತ್ರ ನಟ ಸುದೀಪ್ ಮರೆಯುವುದಿಲ್ಲ.

ನಟಿ, ಸಂಸದೆ ಸುಮಲತಾರ ಹುಟ್ಟುಹಬ್ಬವನ್ನು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. ನಟ ಸುದೀಪ್ ಸಹ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸುಮಲತಾ ಅವರಿಗೆ ವಿಶ್ ಮಾಡಿದ್ದು ಮಾತ್ರವೇ ಅಲ್ಲದೆ ಹಾಡಿ, ಕುಣಿದು ಸಂಭ್ರಮಿಸಿದ್ದಾರೆ. ಮಧ್ಯರಾತ್ರಿ ದಾಟಿದ ಬಳಿಕವಷ್ಟೆ ಪಾರ್ಟಿಯಿಂದ ತೆರಳಿದ್ದರು ಸುದೀಪ್.

ತಡರಾತ್ರಿ ವರೆಗೂ ಪಾರ್ಟಿ ಮಾಡಿದ್ದರೂ ಸಹ ಸುದೀಪ್, ಫಿಟ್​ನೆಸ್ ಮರೆತಿಲ್ಲ. ಪಾರ್ಟಿ ಮುಗಿಸಿ ನೇರವಾಗಿ ಜಿಮ್​ಗೆ ಹೋಗಿರುವ ಸುದೀಪ್, ಸಖತ್ ಆಗಿ ವರ್ಕೌಟ್ ಮಾಡಿ, ಸಿಕ್ಸ್ ಪ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಶೂಟಿಂಗ್​ ನಲ್ಲಿ ತೊಡಗಿಕೊಂಡಿರುವ ನಟ ಸುದೀಪ್, ಪಾತ್ರಕ್ಕಾಗಿ ಸಿಕ್ಸ್ ಮಾಡಿಕೊಂಡಿದ್ದಾರೆ. ಸಿನಿಮಾಕ್ಕಾಗಿ ಭರ್ಜರಿ ಫೈಟ್ ಸೀನ್​ಗಾಗಿ ಜಿಮ್​ನಲ್ಲಿ ತಾಲೀಮು ಮಾಡುತ್ತಿದ್ದಾರೆ ಸುದೀಪ್.

ಇದನ್ನೂ ಓದಿ: ಪೌಡರ್ಗೆ  ಸಿದ್ಧವಾದ ದಿಗಂತ್, ಬೆಂಬಲ ನೀಡಿದ ಕಿಚ್ಚ ಸುದೀಪ್

ಸುದೀಪ್ ಪ್ರಸ್ತುತ ‘ಕಿಚ್ಚ 46’ ಎಂಬ ತಾತ್ಕಾಲಿಕ ಹೆಸರಿನಿಂದ ಕರೆಯಲಾಗುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ತಮಿಳುನಾಡು, ಕರ್ನಾಟಕ ಇನ್ನೂ ಕೆಲವು ಭಾಗಗಳಲ್ಲಿ ನಡೆಯುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಚಾಲ್ತಿಯಲ್ಲಿದ್ದು ಭರ್ಜರಿ ಫೈಟ್ ಸೀಕ್ವೆನ್ಸ್ ಶೂಟಿಂಗ್ ನಡೆಸಲಾಗುತ್ತಿದೆ. ಫೈಟ್ ಸೀಕ್ವೆನ್ಸ್​ಗಾಗಿ ಸುದೀಪ್ ಜಿಮ್​ನಲ್ಲಿ ಹೀಗೆ ತಯಾರಾಗಿದ್ದಾರೆ.

ತಮ್ಮ ಹುರಿಗಟ್ಟಿದ ಮೈಯ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ಸುದೀಪ್, ”ವರ್ಕೌಟ್ ಮಾಡುವುದು ನನಗೆ ಖುಷಿ ನೀಡುತ್ತಿರುವ ಹೊಸ ಸಂಗತಿ. ದಿನನಿತ್ಯದ ಜೀವನದಲ್ಲಿ ಹೆಚ್ಚು ಏಕಾಗ್ರತೆಯಿಂದ ಹಾಗೂ ಶಾಂತಚಿತ್ತತೆಯಿಂದ ತೊಡಗಿಕೊಳ್ಳಲು ನನಗೆ ವರ್ಕೌಟ್ ಸಹಕಾರಿಯಾಗಿದೆ. ಕಿಚ್ಚ 46 ಕ್ಲೈಮ್ಯಾಕ್ಸ್ ಇನ್ನೊಂದು ತಿಂಗಳಲ್ಲಿ ಚಿತ್ರೀಕರಣಗೊಳ್ಳಲಿದ್ದು, ಅದಕ್ಕೆ ಮುನ್ನ ನಾನು ಜಿಮ್​ನಲ್ಲಿ ತಯಾರಾಗಬೇಕದೆ” ಎಂದಿದ್ದಾರೆ ಸುದೀಪ್.

 

Published On - 6:17 pm, Sun, 27 August 23