‘ಮೊದಲೇ ಜನಿಸಿದ್ದರೆ ಶಂಕರ್ ನಾಗ್ ಜೊತೆ ಕೆಲಸ ಮಾಡಬಯಸುತ್ತಿದ್ದೆ’; ಪರಭಾಷೆಯ ಫೇಮಸ್ ನಟಿಯ ಮನದಾಳದ ಮಾತು

ಶಂಕರ್ ನಾಗ್ ಅವರು 1978ರಲ್ಲಿ ‘ಸರ್ವಸಾಕ್ಷಿ’ ಹೆಸರಿನ ಮರಾಠಿ ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ 1980ರಲ್ಲಿ ‘ಮಿಂಚಿನ ಓಟ’ ಸಿನಿಮಾ ನಿರ್ದೇಶನ ಮಾಡಿ ಫೇಮಸ್ ಆದರು. ಪರಭಾಷೆಯ ನಟಿಯೊಬ್ಬರು ಶಂಕರ್ ನಾಗ್ ಬಗ್ಗೆ ಆಡಿದ ಮಾತುಗಳು ವೈರಲ್ ಆಗಿವೆ. ನಾನು ಶಂಕರ್ ನಾಗ್ ಜೊತೆ ಕೆಲಸ ಮಾಡಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

‘ಮೊದಲೇ ಜನಿಸಿದ್ದರೆ ಶಂಕರ್ ನಾಗ್ ಜೊತೆ ಕೆಲಸ ಮಾಡಬಯಸುತ್ತಿದ್ದೆ’; ಪರಭಾಷೆಯ ಫೇಮಸ್ ನಟಿಯ ಮನದಾಳದ ಮಾತು
ಶಂಕರ್ ನಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 28, 2023 | 8:25 AM

ಶಂಕರ್ ನಾಗ್ (Shankar Nag) ಅವರು ಬದುಕಿ ಬಾಳಿದ್ದು ಕೇವಲ 35 ವರ್ಷ ಮಾತ್ರ. ನಟನಾಗಿ, ಚಿತ್ರಕಥೆಗಾರನಾಗಿ, ನಿರ್ದೇಶಕನಾಗಿ ಅವರು ಫೇಮಸ್ ಆದರು. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಶಂಕರ್​ ನಾಗ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ಹಲವು ಸಿನಿಮಾಗಳು ಈಗಲೂ ಅಭಿಮಾನಿಗಳ ಫೇವರಿಟ್ ಲಿಸ್ಟ್​ನಲ್ಲಿದೆ. ಅವರನ್ನು ಈಗಲೂ ಅನೇಕರು ಮಿಸ್ ಮಾಡಿಕೊಳ್ಳುತ್ತಾರೆ.  ಪರಭಾಷೆಯ ನಟಿಯೊಬ್ಬರು ಶಂಕರ್ ನಾಗ್ ಬಗ್ಗೆ ಆಡಿದ ಮಾತುಗಳು ವೈರಲ್ ಆಗಿವೆ. ನಾನು ಶಂಕರ್ ನಾಗ್ ಜೊತೆ ಕೆಲಸ ಮಾಡಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಶಂಕರ್ ನಾಗ್ ಅವರು 1978ರಲ್ಲಿ ‘ಸರ್ವಸಾಕ್ಷಿ’ ಹೆಸರಿನ ಮರಾಠಿ ಚಿತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ 1980ರಲ್ಲಿ ‘ಮಿಂಚಿನ ಓಟ’ ಸಿನಿಮಾ ನಿರ್ದೇಶನ ಮಾಡಿ ಫೇಮಸ್ ಆದರು. ‘ಗೀತಾ’, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ‘ಆ್ಯಕ್ಸಿಡೆಂಟ್’ ಮೊದಲಾದ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದರು. 1987ರಲ್ಲಿ ರಿಲೀಸ್ ಆದ ‘ಒಂದು ಮುತ್ತಿನ ಕಥೆ’ ಅವರ ನಿರ್ದೇಶನದ ಕೊನೆಯ ಸಿನಿಮಾ.

ನಟನೆ ಮೂಲಕವೂ ಶಂಕರ್ ನಾಗ್ ಫೇಮಸ್ ಆದರು. ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಸಾವಿನ ಬಳಿಕವೂ ಶಂಕರ್ ನಾಗ್ ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್ ಆದವು. ಅವರ ಜೊತೆ ಕೆಲಸ ಮಾಡಬೇಕು ಎಂದು ಅನೇಕರು ಕನಸು ಕಂಡಿರುತ್ತಾರೆ. ಆ ಸಾಲಿನಲ್ಲಿ ನಟಿ ಸಾಯಿ ಪಲ್ಲವಿ ಕೂಡ ಇದ್ದಾರೆ.

ಸಾಯಿ ಪಲ್ಲವಿ ತೆಲುಗು ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಅತ್ಯುತ್ತಮ ನಟಿಯರ ಸಾಲಿನಲ್ಲಿ ಅವರು ಕೂಡ ಒಬ್ಬರು. ಅವರು ಶಂಕರ್ ನಾಗ್ ಬಗ್ಗೆ ಹೇಳಿದ ವಿಡಿಯೋ ಒಂದನ್ನು ಈಗ ಶಂಕರ್ ನಾಗ್ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ‘ನಾನು ಮೊದಲೇ ಜನಿಸಿದ್ದರೆ ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಬಯಸುತ್ತಿದ್ದೆ’ ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದರು.  ಶಂಕರ್ ನಾಗ್ ಅವರು 1990ರ ಸೆಪ್ಟೆಂಬರ್ 30ರಂದು ಚಿತ್ರದುರ್ಗದ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟರು.

ಇದನ್ನೂ ಓದಿ: 23ನೇ ವಯಸ್ಸಿಗೆ ಬಣ್ಣದ ಲೋಕದ ನಂಟು; ಶಂಕರ್ ನಾಗ್ ಬದುಕಿದ ರೀತಿಯೇ ವಿಸ್ಮಯ

2022ರಲ್ಲಿ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ರಿಲೀಸ್ ಆಯಿತು. ತಮಿಳಿನ ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಯಿತು. ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯ ಮಟ್ಟವನ್ನು ಸಿನಿಮಾ ತಲುಪಿಲ್ಲ. ಸದ್ಯ ಶಿವ ಕಾರ್ತಿಕೇಯ ನಟನೆಯ 21ನೇ ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:14 am, Mon, 28 August 23