60ನೇ ವಸಂತಕ್ಕೆ ಕಾಲಿಟ್ಟ ಸುಮಲತಾ ಅಂಬರೀಷ್; ಬರ್ತ್ಡೇ ಪಾರ್ಟಿಯಲ್ಲಿ ಸ್ಟಾರ್ ಕಲಾವಿದರ ಸಂಗಮ
ಈ ವರ್ಷ ಸುಮಲತಾ ಅಂಬರೀಷ್ ಅವರಿಗೆ ಹುಟ್ಟುಹಬ್ಬ ಸಖತ್ ಸ್ಪೆಷಲ್. ಅದಕ್ಕೆ ಹಲವು ಕಾರಣಗಳು ಇವೆ. ಶನಿವಾರ (ಆಗಸ್ಟ್ 26) ರಾತ್ರಿಯೇ ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಮಾಡಲಾಗಿದೆ. ಕನ್ನಡ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಎಲ್ಲರನ್ನೂ ಅಂಬರೀಷ್ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಇಂದು (ಆಗಸ್ಟ್ 27) ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅವರು, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಎರಡೂ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಅವರಿಗೆ ಸ್ನೇಹಿತರಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಪಾರ್ಟಿ ಮಾಡಲಾಗಿದೆ. ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಪಾರ್ಟಿ ನಡೆದಿದೆ. ಕನ್ನಡ ಚಿತ್ರರಂಗದ (Sandalwood) ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಹಲವು ಸ್ಟಾರ್ ನಟ-ನಟಿಯರ ಸಂಗಮ ಈ ಔತಣ ಕೂಟದಲ್ಲಿ ಆಗಿದೆ. ಎಲ್ಲರೂ ಸುಮಲತಾ ಅಂಬರೀಷ್ಗೆ ಹುಟ್ಟುಹಬ್ಬದ (Sumalatha Ambareesh Birthday) ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಬರ್ತ್ಡೇ ವಿಶ್ ಮಾಡಲಾಗುತ್ತಿದೆ.
ಈ ವರ್ಷ ಸುಮಲತಾ ಅಂಬರೀಷ್ ಅವರಿಗೆ ಹುಟ್ಟುಹಬ್ಬ ಸಖತ್ ಸ್ಪೆಷಲ್. ಅದಕ್ಕೆ ಹಲವು ಕಾರಣಗಳು ಇವೆ. ಶನಿವಾರ (ಆಗಸ್ಟ್ 26) ರಾತ್ರಿಯೇ ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಮಾಡಲಾಗಿದೆ. ಕನ್ನಡ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಎಲ್ಲರನ್ನೂ ಅಂಬರೀಷ್ ಕುಟುಂಬದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದು 60ನೇ ವರ್ಷದ ಬರ್ತ್ಡೇ ಎಂಬ ಖುಷಿ ಒಂದು ಕಡೆ. ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆ ಬಳಿಕ ಸುಮಲತಾ ಅಂಬರೀಷ್ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಎಂಬ ಖುಷಿ ಇನ್ನೊಂದು ಕಡೆ. ಈ ಸಂಭ್ರಮದಲ್ಲಿ ಜೋರಾಗಿ ಸೆಲೆಬ್ರೇಟ್ ಮಾಡಲಾಗಿದೆ.
ಇದನ್ನೂ ಓದಿ: ಪತಿ ಅಭಿಷೇಕ್, ಅತ್ತೆ ಸುಮಲತಾ ಜೊತೆ ಹಬ್ಬ ಆಚರಿಸಿದ ಅವಿವಾ; ಇಲ್ಲಿವೆ ಫೋಟೋಸ್
ಬಹುಭಾಷಾ ನಟಿಯಾಗಿ ಗುರುತಿಸಿಕೊಂಡವರು ಸುಮಲತಾ ಅಂಬರೀಷ್. ಕನ್ನಡ , ಮಲಯಾಲಂ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. 1978ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಎಲ್ಲ ಭಾಷೆಯ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದಾರೆ. ಈಗ ಸಿನಿಮಾಗಿಂತಲೂ ಹೆಚ್ಚಾಗಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: ‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’; ಅಂಬರೀಷ್ ಜನ್ಮದಿನಕ್ಕೆ ಸುಮಲತಾ ಭಾವುಕ ಪೋಸ್ಟ್
ಅಂಬರೀಷ್ ಅವರು ಸಿನಿಮಾದಲ್ಲಿ ಸಾಧನೆ ಮಾಡಿದ ಬಳಿಕ ರಾಜಕೀಯಕ್ಕೆ ಕಾಲಿಟ್ಟು, ಆ ಕ್ಷೇತ್ರದಲ್ಲೂ ಯಶಸ್ಸು ಕಂಡಿದ್ದರು. ಅಂಬರೀಷ್ ನಂತರ ಸುಮಲತಾ ಕೂಡ ಅದೇ ಹಾದಿಯಲ್ಲಿ ಸಾಗಿದರು. 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸಂಸದೆ ಆಗುವ ಮೂಲಕ ಅವರು ಅಪಾರ ಜನಬೆಂಬಲ ಪಡೆದರು. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 am, Sun, 27 August 23