ಬಾಲಿವುಡ್ನಲ್ಲಿ ಫೇಮಸ್ ಆಗಿರೋ ಅನೇಕ ಹೀರೋ/ಹೀರೋಯಿನ್ಗಳ ಮಕ್ಕಳು ಚಿತ್ರರಂಗಕ್ಕೆ ಬರೋ ಪ್ರಯತ್ನದಲ್ಲಿದ್ದಾರೆ. ಕೆಲವು ಸೆಲೆಬ್ರಿಟಿ ಮಕ್ಕಳು ನಿರ್ಮಾಪಕರಿಗೆ ಹೊರೆ ಆದ ಉದಾಹರಣೆಯೂ ಇದೆ. ಇದಕ್ಕೆ ಹೊಸ ಉದಾಹರಣೆ ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ. ಅವರು ‘ಸಂಕಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುನೀಲ್ ಅವರ ಹಳೆಯ ಗೆಳೆಯ ಸಾಜಿದ್ ನಾಡಿಯಾದ್ವಾಲಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಅಹಾನ್ ಅವರು ನಡೆದುಕೊಳ್ಳುತ್ತಿರುವ ರೀತಿಗೆ ಸಾಜಿದ್ ಸಿಟ್ಟಾಗಿದ್ದಾರೆ. ಸಿನಿಮಾ ನಿಲ್ಲಿಸೋ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸುನೀಲ್ ಶೆಟ್ಟಿ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ಸಾಜಿದ್ ಹಾಗೂ ಅವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಅಹಾನ್ ಅವರ ಸಿನಿಮಾ ಮಾಡೋ ಜವಾಬ್ದಾರಿಯನ್ನು ಸಾಜಿದ್ ಅವರೇ ತೆಗೆದುಕೊಂಡಿದ್ದಾರೆ. ‘ಸಂಕಿ’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈಗ ಚಿತ್ರವನ್ನು ಅರ್ಧಕ್ಕೆ ಕೈ ಬಿಡಬೇಕು ಎನ್ನುವ ಆಲೋಚನೆ ಸಾಜಿದ್ಗೆ ಬಂದಿದೆ.
ಅಹಾನ್ ಜೊತೆ ಬರುವ ಸಹಾಯಕರ ಸಂಖ್ಯೆ ದೊಡ್ಡದಿದೆ. ಇದು ಸಾಜಿದ್ಗೆ ಹೊರೆ ಆಗುತ್ತಿದೆ. ಹೇರ್ ಸ್ಟೈಲಿಸ್ಟ್ ಒಬ್ಬರು, ಮೇಕಪ್ ಮಾಡೋಕೆ ಒಬ್ಬರು, ಸ್ಟೈಲಿಸ್ಟ್ ಅಂತಲೇ ಒಬ್ಬರು, ಕಾರು ಚಾಲಕ, ಅಡುಗೆ ಮಾಡೋ ವ್ಯಕ್ತಿ ಹೀಗೆ ಅಹಾನ್ ಖರ್ಚು ದೊಡ್ಡದಾಗುತ್ತಿದೆ. ಹೀಗಾಗಿ, ಸಿನಿಮಾನ ಅರ್ಧಕ್ಕೆ ನಿಲ್ಲಿಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ ಎನ್ನಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಾಲಿವುಡ್ನಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳೇ ಕಮಾಲ್ ಮಾಡುತ್ತಿಲ್ಲ. ಹೀಗಿರುವಾಗ ಹೊಸಬರ ಸಿನಿಮಾಗೆ ಬೇಡಿಕೆ ಬರಬೇಕು ಎಂದರೆ ಹೇಗೆ ಸಾಧ್ಯ? ಈ ಕಾರಣದಿಂದಲೇ ಸಾಜಿದ್ ಅವರ ಚಿಂತೆ ಮತ್ತಷ್ಟು ಹೆಚ್ಚಿದೆ. ಸದ್ಯ ಒಟಿಟಿ ಹಕ್ಕನ್ನು ಸಾಜಿದ್ ಅಮೇಜಾನ್ ಪ್ರೈಮ್ ವಿಡಿಯೋಗೆ ಮಾರಾಟ ಮಾಡಿದ್ದಾರೆ. ಅಮೇಜಾನ್ ಜೊತೆ ಮೊದಲೇ ಮಾಡಿಕೊಂಡಿರೋ ಒಪ್ಪಂದದಿಂದ ಇದು ಸಾಧ್ಯ ಆಗಿದೆ. ಆದರೆ, ಟಿವಿ ಹಕ್ಕನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಸುನೀಲ್ ಶೆಟ್ಟಿ ಒಟ್ಟೂ ಆಸ್ತಿ ಎಷ್ಟು? ಈ ನಟನ ಸಂಪಾದನೆಗೆ ಇದೆ ಹಲವು ಮಾರ್ಗ
ಸದ್ಯ ಸುನೀಲ್ ಶೆಟ್ಟಿ ಅವರು ಸಾಜಿದ್ನ ಭೇಟಿ ಮಾಡಿ ಸಿನಿಮಾನ ಅರ್ಧಕ್ಕೆ ನಿಲ್ಲಿಸಬೇಡಿ ಎಂದು ಕೋರಿದ್ದಾರೆ. ಇದರ ಜೊತೆಗೆ ಅಗತ್ಯ ಸಹಾಯವನ್ನು ಸಾಜಿದ್ಗೆ ಮಾಡೋದಾಗಿ ಅವರು ಹೇಳಿದ್ದಾರಂತೆ. ಇತ್ತೀಚೆಗೆ ಅನೇಕ ನಿರ್ಮಾಪಕರು ಹೀರೋಗಳ ಸಂಭಾವನೆ ಬಗ್ಗೆ ಅವರ ಖರ್ಚು-ವೆಚ್ಛಗಳ ಬಗ್ಗೆ ಆತಂಕ ಹೊರ ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:26 pm, Wed, 17 July 24