20 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸಿನಿಮಾ ನಿರ್ದೇಶಕ ಬಂಧನ
ಇಲ್ಲೊಬ್ಬ ಸಿನಿಮಾ ನಿರ್ದೇಶಕನ ಜೀವನವೇ ಸಿನಿಮಾದಂತಾಗಿದೆ. ಕೊಲೆ ಆರೋಪಿಯಾಗಿದ್ದ ಸಿನಿಮಾ ನಿರ್ದೇಶಕ ಗಜೇಂದ್ರ ಬರೋಬ್ಬರಿ 20 ವರ್ಷಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದ, ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.
ಇಲ್ಲೊಬ್ಬ ಸಿನಿಮಾ ನಿರ್ದೇಶಕನ ಕತೆಯೇ ಸಿನಿಮಾದಂತಾಗಿದೆ. ಕೊಲೆ ಆರೋಪಿಯಾಗಿದ್ದ ಸಿನಿಮಾ ನಿರ್ದೇಶಕನೊಬ್ಬ ಬರೋಬ್ಬರಿ 20 ವರ್ಷಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆದರೆ ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಈಗ ಮತ್ತೆ ಜೈಲು ಪಾಲಾಗಿದ್ದಾನೆ. ಸಿನಿಮಾ ನಿರ್ದೇಶಕನ ಹೆಸರು ಗಜ ಅಲಿಯಾಸ್ ಗಜೇಂದ್ರ.
2004ರಲ್ಲಿ ರೌಡಿ ಶೀಟರ್ ಕೊತ್ತ ರವಿ ಎಂಬಾತನನ್ನು ವಿಲ್ಸನ್ ಗಾರ್ಡನ್ನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಚಂದ್ರಪ್ಪ, ಅಲ್ಯುಮೀನಿಯಮ್ ಬಾಬು ಸೇರಿದಂತೆ ಸಿನಿಮಾ ನಿರ್ದೇಶಕ ಗಜ ಹೆಸರೂ ಸಹ ಇತ್ತು. ಗಜ ಅಲಿಯಾಸ್ ಗಜೇಂದ್ರ ಈ ಕೊತ್ತ ರವಿ ಕೊಲೆ ಪ್ರಕರಣದಲ್ಲಿ ಎಂಟನೇ ಆರೋಪಿ ಆಗಿದ್ದ. ಪ್ರಕರಣ ನಡೆದಾಗ ಗಜೇಂದ್ರನನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದ ಗಜೇಂದ್ರ ಆ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಆದರೆ ಆ ಬಳಿಕ ಪೊಲೀಸರಿಂದ ಕಣ್ಮರೆಯಾಗಿದ್ದ.
ಇದನ್ನೂ ಓದಿ:ಸೆಟ್ನಲ್ಲೂ ಶೋಕಿ; ಸ್ಟಾರ್ ನಟನ ಸಿನಿಮಾ ಮಾಡಲು ಹೋದ ನಿರ್ಮಾಪಕನೇ ಸುಸ್ತು
ಜಾಮೀನು ಪಡೆದ ಬಳಿಕ ಜಾಮೀನಿನ ನಿಯಮಗಳನ್ನು ಪಾಲಿಸಿರಲಿಲ್ಲ. ಹಲವು ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 20 ವರ್ಷಗಳಿಂದ ಪೊಲೀಸರ ಕೈಗೂ ಗಜೇಂದ್ರ ಸಿಕ್ಕಿರಲಿಲ್ಲ. ಇದೀಗ ಸಿಸಿಬಿ ಪೊಲೀಸರ ಕೈಗೆ ಗಜೇಂದ್ರ ಸಿಕ್ಕಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಜೈಲಿಗೆ ಕಳಿಸಲಾಗಿದೆ. ಅರಸಯ್ಯನ ಶಿಷ್ಯನಾಗಿದ್ದ ಗಜೇಂದ್ರ ಅಲಿಯಾಸ್ ಗಜ, ಈ ಹಿಂದೆ ‘ಪುಟಾಣಿ ಪವರ್’ ಹಾಗೂ ‘ರುದ್ರ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ