ಥಿಯೇಟರ್​ನಲ್ಲಿ ಬದಲಾದ ತಂಬಾಕು ಜಾಹೀರಾತು; ಸುನೀತಾ ಬದಲು ಓಂ ಪ್ರಕಾಶ್ ಕಥೆ

‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು’ ಎಂಬ ಜಾಹೀರಾತು ಪ್ರಸಾರ ಕಾಣುತ್ತಿತ್ತು. ಇದನ್ನು ಈಗ ಬದಲಾಗಿಸಿದೆ. ಈಗ ಸುನಿತಾ ಬದಲು ಓಂ ಪ್ರಕಾಶ್ ಹೆಸರಿನ ವ್ಯಕ್ತಿ ಬಂದಿದ್ದಾನೆ.

ಥಿಯೇಟರ್​ನಲ್ಲಿ ಬದಲಾದ ತಂಬಾಕು ಜಾಹೀರಾತು; ಸುನೀತಾ ಬದಲು ಓಂ ಪ್ರಕಾಶ್ ಕಥೆ
ತಂಬಾಕು ಜಾಹೀರಾತು

Updated on: Aug 24, 2024 | 8:39 AM

‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್​ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ. ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು’ ಎಂಬ ಲೈನ್​ಗಳನ್ನು ನಿಮಗೆ ತುಂಬಾ ಚಿರಪರಿಚಿತವೇ ಆಗಿರುತ್ತದೆ. ಥಿಯೇಟರ್​ಗೆ ಹೋದಾಗ ಈ ಜಾಹೀರಾತು ಕಾಣಿಸುತ್ತದೆ. ಆದರೆ, ಈಗ ಜಾಹೀರಾತು ಬದಲಾಗಿದೆ. ಈ ಅಡ್ವಟೈಸ್​ಮೆಂಟ್​ನ ಇನ್ಮುಂದೆ ಥಿಯೇಟರ್​ನಲ್ಲಿ ಕಾಣ ಸಿಗುವುದಿಲ್ಲ.

ಹೌದು, ಥಿಯೇಟರ್​​ನಲ್ಲಿ ಈಗ ತಂಬಾಕಿನ ಹೊಸ ಜಾಹೀರಾತು ಬಂದಿದೆ. ತಂಬಾಕು ತಿಂದರೆ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಸುನಿತಾ ಹೇಳಿಕೊಂಡಿದ್ದಳು. ಈಗ ಇವಳ ಬದಲು ಓಂ ಪ್ರಕಾಶ್ ಹೆಸರಿನ ವ್ಯಕ್ತಿ ಬಂದಿದ್ದಾನೆ. ಸಣ್ಣ ವಯಸ್ಸಿನಿಂದ ತಂಬಾಕು ತಿಂದು ಈತನಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆ ಬಗ್ಗೆ ಅವರ ಪತ್ನಿ ಸುನಿತಾ ಮಾತನಾಡುತ್ತಾಳೆ.

ಧೂಮಪಾನದ ಜಾಹೀರಾತಲ್ಲೂ ಬದಲಾವಣೆ ಆಗಿದೆ. ಸಿಗರೇಟ್ ಸೇದುವುದನ್ನು ಬಿಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಚೇತರಿಕೆಯಾಗುತ್ತದೆ ಎಂಬ ಹೊಸ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಜಾಹೀರಾತು ಶುಕ್ರವವಾರದಿಂದ (ಆಗಸ್ಟ್ 23) ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ತಂಬಾಕು, ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್​ ಮಸಾಲ ನಿಷೇಧ

ಸಿನಿಮಾ ಪ್ರದರ್ಶನಕ್ಕೂ ಮೊದಲು, ಮಧ್ಯಂತರದಲ್ಲಿ ಈ ರೀತಿ ಜಾಹೀರಾತು ತೋರಿಸುವುದರಿಂದ ಕಿರಿಕಿರಿ ಆಗುತ್ತದೆ ಎಂದು ಕೆಲವರು ಹೇಳಿಕೊಂಡಿದ್ದೂ ಇದೆ. ಕೆಲವರು ಕೋರ್ಟ್​ನಲ್ಲಿ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು. ಆದರೆ, ಈ ರೀತಿಯ ಜಾಹೀರಾತನ್ನು ಪ್ರದರ್ಶಿಸಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us