Kantara: ‘ಕಾಂತಾರ’ ವೇಷ ಧರಿಸಿ ಮೊದಲ ಬಹುಮಾನ ಪಡೆದ ತಹಶೀಲ್ದಾರ್​; ಇಲ್ಲಿದೆ ವೈರಲ್​ ವಿಡಿಯೋ

| Updated By: ಮದನ್​ ಕುಮಾರ್​

Updated on: Nov 22, 2022 | 4:08 PM

Kantara Movie Dance: ‘ಕಾಂತಾರ’ ಚಿತ್ರದ ಹಾಡಿಗೆ ವೇದಿಕೆಯಲ್ಲಿ ತಹಶೀಲ್ದಾರ್ ಪ್ರಸಾದ್​ ರಾವ್ ಪರ್ಫಾರ್ಮ್​ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿ ಅವರಿಗೆ ಪ್ರಥಮ ಬಹುಮಾನ ನೀಡಲಾಗಿದೆ.

Kantara: ‘ಕಾಂತಾರ’ ವೇಷ ಧರಿಸಿ ಮೊದಲ ಬಹುಮಾನ ಪಡೆದ ತಹಶೀಲ್ದಾರ್​; ಇಲ್ಲಿದೆ ವೈರಲ್​ ವಿಡಿಯೋ
ತಹಶೀಲ್ದಾರ್ ಪ್ರಸಾದ್ ರಾವ್
Follow us on

ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರು ‘ಕಾಂತಾರ’ (Kantara Movie) ಸಿನಿಮಾದ ರೀತಿ ವೇಷ ಧರಿಸಿ ಗಮನ ಸೆಳೆದಿದ್ದು ಕೆಲವೇ ದಿನಗಳ ಹಿಂದೆ ಸುದ್ದಿ ಆಗಿತ್ತು. ವಿಜಯನಗರಂ ಜಿಲ್ಲೆಯ ತಹಶೀಲ್ದಾರ್​ (Tahsildar) ಪ್ರಸಾದ್​ ರಾವ್​ ಅವರು ‘ಕಾಂತಾರ’ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಈಗ ವೈರಲ್​ ಆಗಿದೆ. ಅಚ್ಚರಿ ಏನೆಂದರೆ, ಈ ರೀತಿ ವೇಷ ಧರಿಸಿದ್ದಕ್ಕಾಗಿ ಅವರಿಗೆ ಮೊದಲ ಬಹುಮಾನ ಸಿಕ್ಕಿದೆ. ವೇದಿಕೆಯ ಮೇಲೆ ಕಾಂತಾರ ಚಿತ್ರದ ಹಾಡಿಗೆ ಅವರು ನೃತ್ಯ ಮಾಡಿದ್ದಾರೆ. ಭೂತಕೋಲದ (Buta Kola) ರೀತಿಯಲ್ಲಿ ಗೆಟಪ್​ ಹಾಕಿಕೊಂಡು ಎಲ್ಲರನ್ನೂ ರಂಜಿಸಿದ್ದಾರೆ. ಮೊದಲ ಬಹುಮಾನ ಪಡೆದ ಅವರಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದಾರೆ. ತಹಶೀಲ್ದಾರ್​ ಪ್ರಸಾದ್​ ರಾವ್​ ಅವರು ‘ಕಾಂತಾರ’ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪ್ರಸಾದ್​ ರಾವ್​ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ಈ ಕಾರ್ಯಕ್ರಮಕ್ಕೆ ‘ಕಾಂತಾರ’ ಚಿತ್ರದ ರೀತಿ ವೇಷ ಹಾಕಿಕೊಂಡು ಬಂದಿದ್ದನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿ ಆಯಿತು. ಅವರು ಕೂಡ ತಹಶೀಲ್ದಾರ್​ ಜೊತೆ ಸೆಲ್ಫಿ ತೆಗೆದುಕೊಂಡರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ವೇದಿಕೆ ಮೇಲೆ ಪರ್ಫಾರ್ಮ್​ ಮಾಡಿದ ಪ್ರಸಾದ್​ ರಾವ್ ಅವರಿಗೆ ಪ್ರಥಮ ಬಹುಮಾನ ನೀಡಲಾಗಿದೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ವಿಶ್ವಾದ್ಯಂತ ‘ಕಾಂತಾರ’ ಸಿನಿಮಾ ಅಬ್ಬರಿಸಿದೆ. ಇದು ತುಳುನಾಡಿನ ಕಥೆ ಆಗಿದ್ದರೂ ಕೂಡ ಎಲ್ಲ ರಾಜ್ಯಗಳ ಜನರಿಗೆ ಇಷ್ಟ ಆಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಗೂ ಡಬ್​ ಆಗಿ ಬಿಡುಗಡೆಗೊಂಡು ಭರ್ಜರಿ ಕಲೆಕ್ಷನ್​ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಚಿತ್ರಕ್ಕೆ ಪ್ರೇಕ್ಷಕರ ಮನಸೋತಿದ್ದಾರೆ.

ರಿಷಬ್​ ಶೆಟ್ಟಿ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದಲ್ಲಿ ‘ಕಾಂತಾರ’ ಮೂಡಿಬಂದಿದೆ. ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​, ಮಾನಸಿ ಸುಧೀರ್​, ಪ್ರಮೋದ್​ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎಲ್ಲರ ಪಾತ್ರಗಳೂ ಈ ಸಿನಿಮಾದಲ್ಲಿ ಹೈಲೈಟ್​ ಆಗಿವೆ. ಅದರಲ್ಲೂ ರಿಷಬ್​ ಶೆಟ್ಟಿ ಅವರು ಕ್ಲೈಮ್ಯಾಕ್ಸ್​ನಲ್ಲಿ ಅಬ್ಬರಿಸುವ ಮೂಲಕ ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ.

ಚಿತ್ರಮಂದಿರದಲ್ಲಿ ‘ಕಾಂತಾರ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಶೀಘ್ರದಲ್ಲೇ ಈ ಚಿತ್ರ ಒಟಿಟಿಗೆ ಕಾಲಿಡಲಿದೆ. ಮನೆಯಲ್ಲಿ ಕುಳಿತು ಚಿತ್ರವನ್ನು ಎಂಜಾಯ್​ ಮಾಡಲು ಸಿನಿಪ್ರಿಯರು ಕಾದಿದ್ದಾರೆ. ಒಟಿಟಿ ಪ್ರಸಾರ ದಿನಾಂಕದ ಬಗ್ಗೆ ಸದ್ಯದಲ್ಲೇ ಅನೌನ್ಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:08 pm, Tue, 22 November 22