‘ಅಸುರನ್’ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್, ಫಸ್ಟ್​ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ!

ಡಿಫರೆಂಟ್ ಸಿನಿಮಾ.. ತಮ್ಮದೇ ಸ್ಟೈಲ್​​ನಲ್ಲಿ ವಿಕ್ಟರಿ ವೆಂಕಟೇಶ್ ವಿಕ್ಟರಿ ಹೊಡೆದಿದ್ದಾರೆ. ಟಾಲಿವುಡ್​ನಲ್ಲಿ ಕಮಾಲ್ ಮಾಡಿರೋ ವೆಂಕಿ ಇದೀಗ ನ್ಯೂ ಲುಕ್​ನಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಈ ಕ್ಯಾರೆಕ್ಟರ್​ ವೆಂಕಿಗೆ ಸೂಟ್​ ಆಗಲ್ಲ ಅಂತಾ ಕಾಲೆಳೆದೋರಿಗೆ ತಮ್ಮದೇ ಸ್ಟೈಲ್​ನಲ್ಲಿ ಗುನ್ನಾ ಕೊಟ್ಟಿದ್ದಾರೆ. ತಮಿಳು ನಟ ಧನುಷ್​ ಅಭಿನಯದ ಸಿನಿಮಾ ಅಸುರನ್​. ಸಿನಿಮಾರಂಗದಲ್ಲೇ ಹೊಸ ಭಾಷ್ಯ ಬರೆದ ಕಥೆ. ಹಲ್​​ಚಲ್​ ಸೃಷ್ಟಿಸಿದ್ದ ಸ್ಟೋರಿ. ಅಷ್ಟರ ಮಟ್ಟಿಗೆ ಅಸುರನ್​ ಅಬ್ಬರಿಸಿ ಬೊಬ್ಬಿರಿದಿತ್ತು. ಅದ್ರಲ್ಲೂ, ವೆಟ್ರಿಮಾರನ್ ಡೈರೆಕ್ಷನ್, ಧನುಷ್ ಆರ್ಭಟ, ಕಿಲ್ಲಿಂಗ್​ ಲುಕ್​ಗೆ ಸಿನಿಮಾರಂಗವೇ […]

‘ಅಸುರನ್’ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್, ಫಸ್ಟ್​ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ!
ಸಾಧು ಶ್ರೀನಾಥ್​

Updated on: Jan 24, 2020 | 2:13 PM

ಡಿಫರೆಂಟ್ ಸಿನಿಮಾ.. ತಮ್ಮದೇ ಸ್ಟೈಲ್​​ನಲ್ಲಿ ವಿಕ್ಟರಿ ವೆಂಕಟೇಶ್ ವಿಕ್ಟರಿ ಹೊಡೆದಿದ್ದಾರೆ. ಟಾಲಿವುಡ್​ನಲ್ಲಿ ಕಮಾಲ್ ಮಾಡಿರೋ ವೆಂಕಿ ಇದೀಗ ನ್ಯೂ ಲುಕ್​ನಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಈ ಕ್ಯಾರೆಕ್ಟರ್​ ವೆಂಕಿಗೆ ಸೂಟ್​ ಆಗಲ್ಲ ಅಂತಾ ಕಾಲೆಳೆದೋರಿಗೆ ತಮ್ಮದೇ ಸ್ಟೈಲ್​ನಲ್ಲಿ ಗುನ್ನಾ ಕೊಟ್ಟಿದ್ದಾರೆ.

ತಮಿಳು ನಟ ಧನುಷ್​ ಅಭಿನಯದ ಸಿನಿಮಾ ಅಸುರನ್​. ಸಿನಿಮಾರಂಗದಲ್ಲೇ ಹೊಸ ಭಾಷ್ಯ ಬರೆದ ಕಥೆ. ಹಲ್​​ಚಲ್​ ಸೃಷ್ಟಿಸಿದ್ದ ಸ್ಟೋರಿ. ಅಷ್ಟರ ಮಟ್ಟಿಗೆ ಅಸುರನ್​ ಅಬ್ಬರಿಸಿ ಬೊಬ್ಬಿರಿದಿತ್ತು. ಅದ್ರಲ್ಲೂ, ವೆಟ್ರಿಮಾರನ್ ಡೈರೆಕ್ಷನ್, ಧನುಷ್ ಆರ್ಭಟ, ಕಿಲ್ಲಿಂಗ್​ ಲುಕ್​ಗೆ ಸಿನಿಮಾರಂಗವೇ ಸಲಾಂ ಹೊಡೆದಿತ್ತು.

ಇಷ್ಟೆಲ್ಲಾ ಕ್ರೇಜ್, ಹವಾ ಸೃಷ್ಟಿಸಿದ್ದ ಅಸುರನ್​ ಚಿತ್ರ ಇದೀಗ ತೆಲುಗಿನಲ್ಲಿ ರಿಮೇಕ್ ಆಗ್ತಿದೆ. ನಟ ಧನುಷ್ ಅಭಿನಯಿಸಿದ್ದ ಶಿವಸ್ವಾಮಿ ಪಾತ್ರದಲ್ಲಿ ತೆಲುಗು ನಟ ವಿಕ್ಟರಿ ವೆಂಕಟೇಶ್ ಕಾಣಿಸಿಕೊಳ್ತಿದ್ದಾರೆ. ನಾರಪ್ಪನಾಗಿ ಪರದೆ ಮೇಲೆ ಕಮಾಲ್ ಮಾಡೋಕೆ ವಿಕ್ಟರಿ ವೆಂಕಟೇಶ್ ರೆಡಿಯಾಗಿದ್ದಾರೆ.

ಇನ್ನು, ತಮಿಳಿನ ಅಸುರನ್ ಚಿತ್ರ ರಿಮೇಕ್​ಗೆ ತೆಲುಗಿನಲ್ಲಿ ನಾರಪ್ಪ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದೆ. ನಾರಪ್ಪನ ಅವತಾರದಲ್ಲಿ ನಟ ವಿಕ್ಟರಿ ವೆಂಕಟೇಶ್ ಧೂಳೆಬ್ಬಿಸೋಕೆ ಸಜ್ಜಾಗಿದ್ದಾರೆ. ವೆಂಕಟೇಶ್ ರಾ ಲುಕ್​ ನೋಡಿ ಫ್ಯಾನ್ಸ್​​​ ಕೂಡ ಫಿದಾ ಆಗಿದ್ದಾರೆ.

ಆದ್ರೆ, ಈ ಸಿನಿಮಾ ಅನೌನ್ಸ್ ಆದಾಗ ಬಹುತೇಕರು ವೆಂಕಟೇಶ್ ಕಾಲೆಳೆದಿದ್ರು. ಅಸುರನ್ ಕಥೆಗೆ ವೆಂಕಿ ಬಿಲ್ ಖುಲ್ ಒಪ್ಪೋದಿಲ್ಲ, ಧನುಷ್ ಪಾತ್ರ ಅವ್ರಿಗೆ ಸೂಟ್​ ಆಗೋದಿಲ್ಲ ಅನ್ನೋ ಟಾಕ್ ಹರಿದಾಡ್ತಿತ್ತು. ಅದ್ರಲ್ಲೂ ಧನುಷ್ ಅಭಿಮಾನಿಗಳು ವೆಂಕಿಗೆ ಅಸುರನ್ ಲುಕ್ ಬರೋದು ಅಸಾಧ್ಯ ಅಂತ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡಿದ್ರು. ಆದ್ರೆ, ಈ ಎಲ್ಲಾ ಮಾತಿಗೆ ವೆಂಕಿ ಟಕ್ಕರ್ ಕೊಟ್ಟಿದ್ದಾರೆ. ಫಸ್ಟ್ ಲುಕ್​ನಲ್ಲೇ ನಾರಪ್ಪನಾಗಿ ಮಿಂಚಿದ್ದಾರೆ.

ಅಲ್ಲದೇ, ನಾರಪ್ಪನಾದ ವೆಂಕಿ ಅವತಾರ ಚಿತ್ರರಂಗದಲ್ಲಿ ಭಾರಿ ಭರವಸೆ ಮೂಡಿಸಿದೆ. ಈ ಮೂಲಕ ತಮಿಳಿನ ಅಸುರನ್​ಗೆ ತೆಲುಗು ನಾರಪ್ಪ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಅನ್ನೋದು ಸಾಬೀತಾಗಿದೆ. ಆದ್ರೆ, ಸಿನಿಮಾ ಕೂಡ ಫಸ್ಟ್ ಲುಕ್​ನಷ್ಟೇ ಚೆನ್ನಾಗಿ ಇರುತ್ತಾ..? ಅಸುರನ್ ಇದ್ರ ಎದುರು ಸೋಲುತ್ತಾ ಅನ್ನೋದು ನಾರಪ್ಪ ತೆರೆಗಪ್ಪಳಿಸಿದ್ಮೇಲೆ ಗೊತ್ತಾಗಲಿದೆ.

Published On - 2:21 pm, Thu, 23 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us