ಯಶ್ ಯೋಚನೆ ಆಗಲೇ ಎಷ್ಟು ವಿಶಾಲವಾಗಿತ್ತು: ವಿವರಿಸಿದ ತಮಿಳು ನಿರ್ಮಾಪಕ

|

Updated on: Jul 17, 2024 | 5:33 PM

ಯಶ್ ಪ್ರಸ್ತುತ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಸಿನಿಮಾವನ್ನೇ ಧ್ಯಾನಿಸುವ ಯಶ್​ ಸಿನಿಮಾ ಬಗ್ಗೆ ಕಂಡಿರುವ ಕನಸುಗಳು ಅದೆಷ್ಟು ದೊಡ್ಡವು ಎಂಬುದನ್ನು ತಮಿಳಿನ ಜನಪ್ರಿಯ ನಿರ್ಮಾಪಕರೊಬ್ಬರು ವಿವರಿಸಿದ್ದಾರೆ.

ಯಶ್ ಯೋಚನೆ ಆಗಲೇ ಎಷ್ಟು ವಿಶಾಲವಾಗಿತ್ತು: ವಿವರಿಸಿದ ತಮಿಳು ನಿರ್ಮಾಪಕ
Follow us on

ಯಶ್, ‘ನಾವಲ್ಲ ಬದಲಿಗೆ ನಮ್ಮ ಕೆಲಸ ಮಾತನಾಡಬೇಕು’ ಎಂದು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ‘ಕೆಜಿಎಫ್ 2’ ಹಲವು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದರೂ ಸಹ, ಈ ಬಿಡುವಿನ ಸಮಯದಲ್ಲಿಯೂ ಸಹ ಅವರು ಸಿನಿಮಾ ಕುರಿತ ಕೆಲಸಗಳಲ್ಲಿಯೇ ಬ್ಯುಸಿಯಾಗಿದ್ದಾರೆ. ಯಶ್​ಗೆ ಕತೆ ಹೇಳುವ ನಿರ್ದೇಶಕರು, ಸಿನಿಮಾ ಮಾಡಲು ಬರುವ ನಿರ್ಮಾಪಕರ ಸಂಖ್ಯೆ ಕಡಿಮೆಯಿಲ್ಲ. ಆದರೆ ಯಶ್ ನೀಡಿದರೆ ಅತ್ಯುತ್ತಮವಾದುದನ್ನೇ ನೀಡಬೇಕೆಂದು ಕಾದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಕನಸು, ತಾಧಿಸಬೇಕೆಂಬ ತಪನ. ಯಶ್​ರ ವಿಷನ್ ಹೇಗಿತ್ತು ಎಂಬುದನ್ನು ತಮಿಳಿನ ಜನಪ್ರಿಯ ನಿರ್ಮಾಪಕರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕನಗುವ’ ಸಿನಿಮಾಕ್ಕೆ ಬಂಡವಾಳ ಹಾಕಿರುವ ಕೆಇ ಜ್ಞಾನವೇಲು ರಾಜ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ತಾವು ಜೀವನದಲ್ಲಿ ಹೊಸ ಪ್ರಯತ್ನಗಳಿಗೆ ಕೈ ಹಾಕಲು, ಹೊಸ ಅವಕಾಶಗಳಿಗೆ ಹುಡುಕಾಡಲು, ದೊಡ್ಡದಾಗಿ ಯೋಚಿಸಲು ಸ್ಪೂರ್ತಿಯಾದವರಲ್ಲಿ ನಟ ಯಶ್ ಸಹ ಒಬ್ಬರು ಎಂದಿದ್ದಾರೆ. ಯಶ್ ಹೇಗೆ ಕೇವಲ ಮೂರು ಗಂಟೆಯಲ್ಲಿ ತಮ್ಮ ಯೋಚನಾ ಲಹರಿಯನ್ನೇ ಬದಲಿಸಿದರು ಎಂದು ಸಹ ಹೇಳಿದ್ದಾರೆ.

ಕೆಇ ಜ್ಞಾನವೇಲು, ತಮಿಳಿನಲ್ಲಿ ಸಿನಿಮಾ ವಿತರಣೆ ಮಾಡುತ್ತಿದ್ದಾಗ ಒಮ್ಮೆ ಅವರ ಗೆಳೆಯರೊಬ್ಬರ ಸಲಹೆ ಮೇರೆಗೆ ಬೆಂಗಳೂರಿಗೆ ಬಂದು ತಾಜ್ ಹೋಟೆಲ್​ನಲ್ಲಿ ಯಶ್​ರನ್ನು ಭೇಟಿಯಾದರಂತೆ. ಆಗಿನ್ನೂ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿರಲಿಲ್ಲ ಆದರೆ ‘ಕೆಜಿಎಫ್’ ಸಿನಿಮಾ ಬಿಡುಗಡೆ ಆಗಿತ್ತಂತೆ. ಯಶ್​ ಅಂದು ಮಾತನಾಡಿದ ರೀತಿ, ಆಗಲೇ ಅವರು ಯೋಚಿಸುತ್ತಿದ್ದ ರೀತಿ ನನಗೆ ಆಶ್ಚರ್ಯ ತಂದುಬಿಟ್ಟಿತು. ಇದೆಲ್ಲ ಸಾಧ್ಯವಾ ಎಂಬ ಅನುಮಾನವನ್ನೂ ಮೂಡಿಸಿತ್ತು’ ಎಂದಿದ್ದಾರೆ ಜ್ಞಾನವೇಲು.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ, ರಣ್​ಬೀರ್ ಕಪೂರ್ ಅಲ್ಲ, ಯಶ್ ‘ನಾಯಕ’

ಆಗ ಇನ್ನೂ ಪ್ಯಾನ್ ಇಂಡಿಯಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿರಲಿಲ್ಲ ಆಗಲೇ ಅವರು ತಮ್ಮ ಸಿನಿಮಾದ ಮಾರುಕಟ್ಟೆ ಬಗ್ಗೆ ಅತೀವ ವಿಶ್ವಾಸದಿಂದ ಇದ್ದರಂತೆ ಮಾತ್ರವಲ್ಲ ಹಲವು ಯೋಚನೆಗಳನ್ನು, ಯೋಜನೆಗಳನ್ನು ಮಾಡಿಬಿಟ್ಟಿದ್ದರಂತೆ. ‘ಅಂದು ತಾಜ್ ಹೋಟೆಲ್​ನಲ್ಲಿ ‘ಕೆಜಿಎಫ್ 2’ ಸಿನಿಮಾದ ಕೆಲವು ದೃಶ್ಯಗಳನ್ನು ನನಗೆ ತೋರಿಸಿದರು. ನಮ್ಮ ಸಿನಿಮಾ ಹಿಂದಿಯಲ್ಲಿ ಅಷ್ಟು ಕಲೆಕ್ಷನ್ ಮಾಡಲಿದೆ, ವಿದೇಶಗಳಲ್ಲಿ ಇಷ್ಟು ಕಲೆಕ್ಷನ್ ಮಾಡಲಿದೆ ಎಂದೆಲ್ಲ ಹೇಳಿದರು. ಮಾತ್ರವಲ್ಲ ಸಿನಿಮಾ ಕುರಿತು ಅವರಿಗಿರುವ ವಿಷನ್ ಅಂದು ಅವರು ನನಗೆ ಹೇಳಿದರು. ಮೂರು ಗಂಟೆಗಳ ಕಾಲ ಅವರೊಟ್ಟಿಗೆ ನಾನಿದ್ದೆ, ಅವರ ವಿಷನ್ ನನಗೆ ಆಶ್ಚರ್ಯ ತರಿಸಿತು’ ಎಂದಿದ್ದಾರೆ ಜ್ಞಾನವೇಲು.

ಜ್ಞಾನವೇಲು ಈಗ ತಮ್ಮ ಕಚೇರಿಯನ್ನು ಮುಂಬೈಗೆ ಬದಲಾಯಿಸಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಈಗ ‘ಕನಗುವ’ ಸಿನಿಮಾಕ್ಕೆ ಸುಮಾರು 300 ಕೋಟಿ ಬಂಡವಾಳ ಹೂಡಿದ್ದಾರೆ. ಭಾರಿ ದೊಡ್ಡದಾಗಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾದಲ್ಲಿ ಸೂರ್ಯ ಜೊತೆಗೆ ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿದ್ದಾರೆ.