ಸುದೀಪ್​ಗೆ ವಿಜಯಲಕ್ಷ್ಮಿ ಕೌಂಟರ್ ಕೊಡೋದಕ್ಕೂ ಇದೆ ಕಾರಣ?

ಕಿಚ್ಚ ಸುದೀಪ್ ಮತ್ತು ವಿಜಯಲಕ್ಷ್ಮೀ ನಡುವಿನ ವಿವಾದ ತಾರಕಕ್ಕೇರಿದೆ. ದರ್ಶನ್ ಅಭಿಮಾನಿಗಳನ್ನು ಗುರಿಯಾಗಿಸಿ ಸುದೀಪ್ ಹೇಳಿಕೆ ನೀಡಿದ್ದಾರೆಂದು ಭಾವಿಸಿದ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದರು. ದರ್ಶನ್ ಜೈಲಿನಲ್ಲಿರುವಾಗ ಅವರ ಪರ ವಿಜಯಲಕ್ಷ್ಮೀ ಧ್ವನಿ ಎತ್ತಿದ್ದಾರೆ. ಸುದೀಪ್ ಅವರ ಹಿಂದಿನ ಮಾತುಗಳು ವಿವಾದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಸುದೀಪ್​ಗೆ ವಿಜಯಲಕ್ಷ್ಮಿ ಕೌಂಟರ್ ಕೊಡೋದಕ್ಕೂ ಇದೆ ಕಾರಣ?
ಸುದೀಪ್-ದರ್ಶನ್
Edited By:

Updated on: Dec 23, 2025 | 1:20 PM

ಕಿಚ್ಚ ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರು ಪರಸ್ಪರ ಕಿತ್ತಾಡಿಕೊಂಡಿದ್ದು ಗೊತ್ತೇ ಇದೆ. ಸುದೀಪ್ ನೀಡಿದ ಹೇಳಿಕೆಗೆ ವಿಜಯಲಕ್ಷ್ಮೀ ಸಿಟ್ಟಾದರು. ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಭಾವಿಸಿದ ಅವರು ಪರೋಕ್ಷವಾಗಿ ಕೌಂಟರ್ ಕೊಟ್ಟರು. ಈ ಎಲ್ಲಾ ಬೆಳವಣಿಗೆ ಬಗ್ಗೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮಧ್ಯೆ ವಿಜಯಲಕ್ಷ್ಮೀ ಈ ರೀತಿ ಹೇಳಿಕೆ ಕೊಡಲು ಒಂದು ಕಾರಣ ಇದೆ ಎನ್ನಲಾಗುತ್ತಾ ಇದೆ.

ವಿಜಯಲಕ್ಷ್ಮೀ ಅವರು ಎಂದಿಗೂ ಯಾರ ಬಗ್ಗೆಯೂ ಮಾತನಾಡಿದವರಲ್ಲ. ಅವರು ದರ್ಶನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕೂಡ ಕಡಿಮೆಯೇ. ಆದರೆ, ದರ್ಶನ್ ಜೈಲಿನಲ್ಲಿರೋ ಈ ಸಂದರ್ಭದಲ್ಲಿ ಅವರು ‘ಡೆವಿಲ್’ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಸಾರ್ವಜನಿಕವಾಗಿ ಸುದೀಪ್​​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅವರು ಈ ರೀತಿ ಹೇಳೋದಕ್ಕೆ ಕಾರಣ ಕೂಡ ಎನ್ನಲಾಗುತ್ತಿದೆ.

ವಿಜಯಲಕ್ಷ್ಮಿ ತಾಳ್ಮೆ ಕಟ್ಟೆ ಒಡೆದು ಸುದೀಪ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಗಂಡ ಹೆಂಡತಿ ಜಗಳ ಆಡಿಕೊಂಡು, ಮದ್ಯಸ್ಥಿಕೆ ವಹಿಸಬೇಕು ಅಂತ ಒಬ್ಬರ ನನ್ನ ಬಳಿ ಬಂದರು. ನಾನು ಮಧ್ಯಸ್ಥಿಕೆ ವಹಿಸಿದೆ. ಅವರಿಬ್ಬರು ಒಂದಾದರು. ಮಧ್ಯಸ್ಥಿಕೆ ವಹಿಸಿದವರು ಗೂಬೆ ಆದರು’ ಎಂದಿದ್ದರು ಸುದೀಪ್. ಇದು ವಿಜುಲಕ್ಷ್ಮೀ ಕಿವಿಗೆ ಬಿದ್ದಿತ್ತು ಎನ್ನಲಾಗಿದೆ.

ಸುದೀಪ್ ಬರ್ತ್ಡೇ ಹಿಂದಿನ ದಿನ ಮಧ್ಯ ರಾತ್ರಿ ದರ್ಶನ್ ಫ್ಯಾನ್ಸ್​ಗೆ ಸುದೀಪ್ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದರು ಸುದೀಪ್. ಹೀಗೆ ಸುದೀಪ್ ಪದೇ ಪದೇ ದರ್ಶನ್ ಹಾಗೂ ಅವ್ರ ಫ್ಯಾನ್ಸ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿಜಯಲಕ್ಷ್ಮೀ ಅವರಿಗೆ ಅನಿಸಿದೆ. ಹೀಗಾಗಿ, ಸುದೀಪ್ ಅವರು ದರ್ಶನ್ ಬಗ್ಗೆ ಮಾತನಾಡದಂತೆ ಸೂಚಿಸುವಂತೆ ಹಿರಿಯ ನಿರ್ಮಾಪಕರ ಬಳಿಕ ವಿಜಯಲಕ್ಷ್ಮೀ ಕೇಳಿಕೊಂಡಿದ್ದರಂತೆ. ಈ ವಿಚಾರವಾಗಿ ಸುದೀಪ್ ಜೊತೆ ನಿರ್ಮಾಪಕರು ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ‘ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ’; ವಿಜಯಲಕ್ಷ್ಮೀ ಬಗ್ಗೆ ಕಿಚ್ಚನ ಮಾತು

ಆದರೂ ಸುದೀಪ್ ಅವರು ಮಾಧ್ಯಮದ ಜೊತೆ ಮಾತನಾಡುವಾಗ ದರ್ಶನ್ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಅವರು ‘ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ’ ಎಂಬುದು ದರ್ಶನ್ ಫ್ಯಾನ್ಸ್ ಬಗ್ಗೆ ನೀಡಿದ ಹೇಳಿಕೆ ಎಂದು ಭಾವಿಸಿದ ಅವರು ತಿರುಗೇಟು ಕೊಟ್ಟಿದದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:58 pm, Tue, 23 December 25