ಕರ್ನಾಟಕದ ಹಿನ್ನೆಲೆ ಇಟ್ಟುಕೊಂಡು ಪರಭಾಷೆಯಲ್ಲಿ ಮಿಂಚುತ್ತಿರುವ ನಾಯಕಿಯರು ಇವರೇ..

| Updated By: ರಾಜೇಶ್ ದುಗ್ಗುಮನೆ

Updated on: Aug 18, 2023 | 9:47 AM

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕನ್ನಡ ಸಿನಿಮಾಗಳನ್ನು ಮೆಚ್ಚುತ್ತಿದ್ದಾರೆ. ‘ಕೆಜಿಎಫ್ 2’, ‘ಕಾಂತಾರ’ ಚಿತ್ರಗಳಿಂದ ಕನ್ನಡ ಚಿತ್ರರಂಗದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಅದೇ ರೀತಿ ಕನ್ನಡ ನಾಡಲ್ಲಿ ಜನಿಸಿ, ಕರ್ನಾಟಕದ ಹಿನ್ನೆಲೆ ಹೊಂದಿ ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರಿದ್ದಾರೆ.

ಕರ್ನಾಟಕದ ಹಿನ್ನೆಲೆ ಇಟ್ಟುಕೊಂಡು ಪರಭಾಷೆಯಲ್ಲಿ ಮಿಂಚುತ್ತಿರುವ ನಾಯಕಿಯರು ಇವರೇ..
ಪರಭಾಷೆಯಲ್ಲಿ ಫೇಮಸ್ ಆದ ನಾಯಕಿಯರು
Follow us on

ಚಿತ್ರರಂಗದ ವ್ಯಾಪ್ತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಸದ್ಯ ಯಾವುದೇ ಕಟ್ಟಳೆಗಳು ಉಳಿದುಕೊಂಡಿಲ್ಲ. ಪರಭಾಷೆಯ ಕಲಾವಿದರು ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಹಲವು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕನ್ನಡ ಸಿನಿಮಾಗಳನ್ನು ಮೆಚ್ಚುತ್ತಿದ್ದಾರೆ. ‘ಕೆಜಿಎಫ್ 2’, ‘ಕಾಂತಾರ’ (Kantara) ಚಿತ್ರಗಳಿಂದ ಕನ್ನಡ ಚಿತ್ರರಂಗದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಅದೇ ರೀತಿ ಕನ್ನಡ ನಾಡಲ್ಲಿ ಜನಿಸಿ, ಕರ್ನಾಟಕದ ಹಿನ್ನೆಲೆ ಹೊಂದಿ ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರಿದ್ದಾರೆ. ಅವರು ಯಾರ್ಯಾರು? ಈಗ ಅವರಿಗೆ ಸಿಕ್ಕಿರುವ ಸ್ಥಾನ ಯಾವುದು ಎನ್ನುವ ಬಗ್ಗೆ ಇಲ್ಲಿದೆ ವಿವರ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಸದ್ಯ ಪರಭಾಷೆಯಲ್ಲಿ ಅವರು ಮಿಂಚುತ್ತಿದ್ದಾರೆ. 2016ರಲ್ಲಿ ರಿಲೀಸ್ ಆದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ಬಳಿಕ ತೆಲುಗಿನಲ್ಲಿ ಗಮನ ಸೆಳೆದರು. ಸದ್ಯ ತೆಲುಗು, ತಮಿಳು ಹಾಗೂ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಅವರು ಕನ್ನಡಕ್ಕೆ ಮರಳೋದು ಅನುಮಾನವೇ.

ಐಶ್ವರ್ಯಾ ರೈ

ಐಶ್ವರ್ಯಾ ರೈಗೂ ಕರ್ನಾಟಕಕ್ಕೂ ನಂಟಿದೆ. ಐಶ್ವರ್ಯಾ ರೈ ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ನಂತರ ಮುಂಬೈಗೆ ಶಿಫ್ಟ್ ಆದರು. ಬಾಲಿವುಡ್​ನಲ್ಲಿ ಐಶ್ವರ್ಯಾ ನೆಲೆ ಕಂಡುಕೊಂಡರು. ಈಗ ಅವರು ಬಚ್ಚನ್ ಕುಟುಂಬದ ಸೊಸೆ ಆಗಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ಅವರು ನಟಿಸಿ ಗಮನ ಸೆಳೆದರು.

ಶಿಲ್ಪಾ ಶೆಟ್ಟಿ

1993ರಲ್ಲಿ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಬಾಜಿಗರ್’ ಸಿನಿಮಾ ಮೂಲಕ ಶಿಲ್ಪಾ ಶೆಟ್ಟಿ ನಾಯಕಿ ಆದರು. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಬಾಲಿವುಡ್​ನಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರು ಯೋಗಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಹುಟ್ಟಿದ್ದು ಕರ್ನಾಟಕದಲ್ಲಿ. 2006ರಲ್ಲಿ ರಿಲೀಸ್ ಆದ ಕನ್ನಡದ ‘ಐಶ್ವರ್ಯಾ’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ‘ಓಂ ಶಾಂತಿ ಓಂ’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ಹಿಂದಿಯಲ್ಲಿ ನಟಿಸಿದ ಮೊದಲ ಸಿನಿಮಾದಲ್ಲೇ ಶಾರುಖ್ ಖಾನ್ ಜೊತೆ ಮಿಂಚಿದರು. ಈಗ ಬಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಇದೆ.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಕರ್ನಾಟಕದಲ್ಲಿ ಹುಟ್ಟಿದವರಲ್ಲ. ಇವರು ಜನಿಸಿದ್ದು ಉತ್ತರ ಪ್ರದೇಶದಲ್ಲಿ. ಆದರೆ, ಇವರು ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ಹಿಂದಿಯ ‘ರಬ್​ ನೇ ಬನಾದಿ ಜೋಡಿ’ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಮಂಗಳೂರಿನವರು. ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಈ ಮೊದಲು ಅವರು ಅನೇಕ ಬಾರಿ ಕನ್ನಡದಲ್ಲಿ ಟ್ವೀಟ್ ಮಾಡಿದ ಉದಾಹರಣೆ ಇದೆ. ‘ಬಾಹುಬಲಿ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಫೇಮಸ್ ಆದರು. ತೆಲುಗಿನಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇತ್ತು. ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ.

ಪ್ರಣೀತಾ ಸುಭಾಷ್

ಪ್ರಣೀತಾ ಸುಭಾಷ್ ಕರ್ನಾಟಕದವರು. ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಅತ್ತಾರಿಂಟಿಕಿ ದಾರಿದಿ’ ಸಿನಿಮಾದಲ್ಲಿ ನಟಿಸಿ ಪರಭಾಷೆಯಲ್ಲೂ ಹೆಸರು ಮಾಡಿದರು.

ಮೇಘನಾ ರಾಜ್

ನಟಿ ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಹೆಸರು ಮಲಯಾಳಂ ಚಿತ್ರರಂಗದಲ್ಲೂ ಚಾಲ್ತಿಯಲ್ಲಿದೆ. ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕೃತಿ ಕರಬಂಧ

ನಟಿ ಕೃತಿ ಕರಬಂಧ ಅವರಿಗೆ ಕರ್ನಾಟಕದ ಜೊತೆ ನಂಟಿದೆ. ಅವರು ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಕನ್ನಡದ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

ನಿತ್ಯಾ ಮೆನನ್

ನಿತ್ಯಾ ಮೆನನ್​ ಬೆಳೆದಿದ್ದು ಬೆಂಗಳೂರಿನಲ್ಲಿ. ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಅವರು ಮಲಯಾಳಂ ನಟಿ. ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎಷ್ಟು ಭಾಷೆಗಳಲ್ಲಿ ರಿಲೀಸ್? ರಕ್ಷಿತ್ ನೀಡಿದ್ರು ಮಾಹಿತಿ

ನಿಕ್ಕಿ ಗಲ್ರಾನಿ

ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಬೆಂಗಳೂರಿನವರು. ಅವರು ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ