ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾಗೆ ಜಾಮೀನು ನೀಡಿದರೆ ಎಸ್ಕೇಪ್ ಆಗ್ತಾರಾ ಪ್ರಭಾವಿಗಳು?

|

Updated on: Mar 06, 2025 | 4:22 PM

ಜಾಮೀನು ಪಡೆಯಲು ನಟಿ ರನ್ಯಾ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಡಿಆರ್​ಐ ಅಧಿಕಾರಿಗಳು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಚಿನ್ನ ಕಳ್ಳ ಸಾಗಣೆ ದಂಧೆಯಲ್ಲಿ ರನ್ಯಾ ಜೊತೆ ಇನ್ನೂ ಯಾರೆಲ್ಲ ಭಾಗಿ ಆಗಿದ್ದಾರೆ ಎಂಬುದು ಪತ್ತೆ ಆಗಬೇಕಿದೆ. ಪ್ರಕರಣದ ತನಿಖೆ ಚುರುಕುಗೊಂಡಿದೆ.

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾಗೆ ಜಾಮೀನು ನೀಡಿದರೆ ಎಸ್ಕೇಪ್ ಆಗ್ತಾರಾ ಪ್ರಭಾವಿಗಳು?
Ranya Rao
Follow us on

ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳ ಸಾಗಾಣಿಕೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಇರುವ ಅವರು ಈಗ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ನಡುವೆ ಡಿಆರ್​ಐ ಅಧಿಕಾರಿಗಳು ನಟಿಯನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಧಿಕಾರಿಗಳ ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಒಂದು ವೇಳೆ ರನ್ಯಾ ರಾವ್ (Ranya Rao) ಅವರಿಗೆ ಜಾಮೀನು ನೀಡಿದರೆ ಇನ್ನುಳಿದ ಪ್ರಭಾವಿ ಆರೋಪಿಗಳು ಬಚಾವ್ ಆಗುವ ಸಾಧ್ಯತೆ ಇದೆ ಎಂದು ವಕೀಲರು ವಾದಿಸಿದ್ದಾರೆ. ಈ ವಿಚಾರಣೆ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ..

‘ದುಬೈನಿಂದ ಬೆಂಗಳೂರಿನವರೆಗೆ ಆಕೆಗೆ ಸಾಕಷ್ಟು ಜನರ ಸಂಪರ್ಕ ಇದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ರನ್ಯಾ ರಾವ್ ಕಸ್ಟಡಿಗೆ ನೀಡಬೇಕು. ಜಾಮೀನು ನೀಡಿದರೆ ಉಳಿದ ಆರೋಪಿಗಳಿಗೆ ಎಲ್ಲಾ ವಿಚಾರ ಗೊತ್ತಾಗುತ್ತೆ. ಉಳಿದ ಎಲ್ಲಾ ಆರೋಪಿಗಳು ಪ್ರಕರಣದಿಂದ ಬಚಾವಾಗುತ್ತಾರೆ. ಈ ಕೇಸ್‌ನಲ್ಲಿ 40 ದಿನ ಕಸ್ಟಡಿಗೆ ತೆಗೆದುಕೊಳ್ಳಲು ಅವಕಾಶವಿದೆ’ ಎಂದು ಡಿಆರ್‌ಐ ಪರ ವಕೀಲರಿಂದ ವಾದ ಮಂಡನೆ ಮಾಡಿದ್ದಾರೆ.

ಡಿಆರ್‌ಐ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ. ರನ್ಯಾ ರಾವ್‌ ಅವರನ್ನು 3 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ‘ರನ್ಯಾ ರಾವ್ ಬಳಿ ಮೊಬೈಲ್, ಲ್ಯಾಪ್‌ ಟಾಪ್‌ ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರೋಟೋಕಾಲ್‌ ಮಿಸ್ ಯೂಸ್ ಮಾಡಿಕೊಂಡಿದ್ದಾಳೆ. ಜೈಲಾಧಿಕಾರಿಗಳ ಮುಂದೆ ಆಕೆಯನ್ನು ವಿಚಾರಣೆ ಮಾಡಲು ಹೇಗೆ ಸಾಧ್ಯ? ರನ್ಯಾ ರಾವ್ ಸುತ್ತ ದೊಡ್ಡ ಸಿಂಡಿಕೇಟ್‌ ಇದೆ. ಸಿಂಡಿಕೇಟ್ ಬ್ರೇಕ್ ಮಾಡಲು ರನ್ಯಾ ರಾವ್ ಕಸ್ಟಡಿಗೆ ನೀಡಬೇಕು. ದುಬೈಗೆ ಎಷ್ಟು ಸಲ ಹೋಗಿದ್ದಾರೆ, ಏಕೆ ಹೋಗಿದ್ದಾರೆಂದು ಆಕೆಯೇ ಉತ್ತರಿಸಬೇಕು’ ಎಂದು ಅಧಿಕಾರಿಗಳ ಪರ ವಕೀಲರು ವಾದ ಮಾಡಿದ್ದಾರೆ.

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ಇದನ್ನೂ ಓದಿ: ಮಗಳ ಸ್ಮಗ್ಲಿಂಗ್ ದಂಧೆ ಬಗ್ಗೆ ನನಗೆ ಗೊತ್ತಿರಲಿಲ್ಲ: ರನ್ಯಾ ತಂದೆ, ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ

DRI ಕಸ್ಟಡಿ ಅರ್ಜಿ ಆದೇಶ ಬರುವವರೆಗೂ ರನ್ಯಾ ಅವರ ಜಾಮೀನು ಅರ್ಜಿ ಪೆಂಡಿಂಗ್ ಇರಲಿದೆ. ದುಬೈನಿಂದ 14 ಕೆಜಿ ಚಿನ್ನವನ್ನು ಅಕ್ರಮವಾಗಿ ತಂದ ಆರೋಪ ರನ್ಯಾ ಮೇಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯಲ್ಲಿ ಕೂಡ ಶೋಧಕಾರ್ಯ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಪಟಾಕಿ, ಮಾಣಿಕ್ಯ ಮುಂತಾದ ಸಿನಿಮಾಗಳಲ್ಲಿ ರನ್ಯಾ ನಟಿಸಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರು ದೊಡ್ಡ ಹೆಸರು ಮಾಡಿಲ್ಲ. ಸ್ಮಗ್ಲಿಂಗ್ ದಂಧೆಯಲ್ಲಿ ಅವರ ಜೊತೆ ಇನ್ನೂ ಯಾರೆಲ್ಲ ಶಾಮೀಲು ಆಗಿದ್ದಾರೆ ಎಂಬುದು ತನಿಖೆ ಬಳಿಕ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.