ಹೇಗಿದ್ದ ರನ್ಯಾ ರಾವ್ ಹೇಗಾದ್ರು ನೋಡಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ನಟಿ
ಚಿನ್ನ ಕಳ್ಳ ಸಾಗಾಣಿಕೆ ಕೇಸ್ನಲ್ಲಿ ಸಿಕ್ಕಿ ಬಿದ್ದಿರುವ ರನ್ಯಾ ರಾವ್ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಜೈಲು ಸೇರಿದ ಬಳಿಕ ಅವರು ಸೊರಗಿದ್ದಾರೆ. ಸರಿಯಾಗಿ ಊಟ, ನಿದ್ರೆ ಮಾಡುತ್ತಿಲ್ಲ. ಹಾಗಾಗಿ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಜಾಸ್ತಿ ಆಗಿದೆ. ಜೈಲಿನಿಂದ ರನ್ಯಾ ಅವರ ಫೋಟೋ ವೈರಲ್ ಆಗಿದೆ.

ಸೆಲೆಬ್ರಿಟಿಗಳ ಜೀವನ ಶೈಲಿ ಐಷಾರಾಮಿ ಆಗಿರುತ್ತದೆ. ಆದರೆ ಅಂಥವರು ತಪ್ಪು ಮಾಡಿ ಜೈಲು ಸೇರಿಕೊಂಡರೆ ಅಲ್ಲಿನ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗುತ್ತದೆ. ಕನ್ನಡದ ನಟಿ ರನ್ಯಾ ರಾವ್ (Ranya Rao) ಅವರ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ರನ್ಯಾ ಅವರದ್ದು ಹೈಪ್ರೊಫೈಲ್ ಕುಟುಂಬ. ಆಗಾಗ ಅವರು ವಿದೇಶಕ್ಕೆ ಹೋಗಿಬರುತ್ತಿದ್ದರು. ಬಿಂದಾಸ್ ಆಗಿ ಜೀವನ ನಡೆಸುತ್ತಿದ್ದರು. ಆದರೆ ಈಗ ಅವರು ಚಿನ್ನ ಕಳ್ಳ ಸಾಗಾಣಿಕೆ (Gold Smuggling) ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ನಟಿಯಾಗಿದ್ದಾಗ ಪಳಪಳ ಹೊಳೆಯುತ್ತಿದ್ದ ರನ್ಯಾ ಅವರು ಈಗ ಮಂಕಾಗಿದ್ದಾರೆ. ಜೈಲಿನಲ್ಲಿರುವ ಅವರ ಫೋಟೋ ಲಭ್ಯವಾಗಿದೆ. ಇದು ನಿಜಕ್ಕೂ ರನ್ಯಾ ಅವರೇನಾ ಎಂದು ಅನುಮಾನ ಮೂಡುವ ರೀತಿಯಲ್ಲಿ ಅವರ ಮುಖ ಬದಲಾಗಿದೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿರುವ ರಮ್ಯಾ ಅವರಿಗೆ ಜೈಲಿನ ಊಟ ಅಡ್ಜೆಸ್ಟ್ ಆಗುತ್ತಿಲ್ಲವಂತೆ. ಈ ಮೊದಲು ಮಿಲ್ಕಿ ಬ್ಯೂಟಿ ರೀತಿ ಇದ್ದ ಅವರು ಈಗ ಕೇವಲ ಎರಡು ದಿನಗಳ ಜೈಲುವಾಸಕ್ಕೆ ಸುಸ್ತಾಗಿದ್ದಾರೆ. ಎರಡೇ ದಿನಕ್ಕೆ ಅವರು ಸೊರಗಿದ್ದಾರೆ. ಡಿಆರ್ಐ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಾಗಿನಿಂದ ರನ್ಯಾ ಅವರು ಸರಿಯಾಗಿ ಊಟ ಮತ್ತು ನಿದ್ದೆ ಮಾಡಿಲ್ಲ.
ಊಟ, ನಿದ್ರೆ ಸರಿಯಾಗಿ ಮಾಡದೇ ಇರುವ ಕಾರಣದಿಂದ ರನ್ಯಾ ಅವರು ಸೊರಗಿದ್ದಾರೆ. ಜೈಲಿನ ವಾತಾವರಣ ಅವರಿಗೆ ಹಿಡಿಸುತ್ತಿಲ್ಲ. ಅಲ್ಲಿ ನಿದ್ದೆಯಿಲ್ಲದೇ ರನ್ಯಾ ಅವರ ಕಣ್ಣುಗಳು ಕೆಂಪಾಗಿ ಊದಿಕೊಂಡಿವೆ. ಕಣ್ಣುಗಳ ಸುತ್ತ ರಕ್ತ ಹೆಪ್ಪುಗಟ್ಟಿ ಡಾರ್ಕ್ ಸರ್ಕಲ್ ಹೆಚ್ಚಾಗಿದೆ. ರನ್ಯಾ ಅರೆಸ್ಟ್ ಆದ ಬಳಿಕ ಜೈಲನಲ್ಲಿರುವ ಅವರ ಫೋಟೋ ವೈರಲ್ ಆಗಿದೆ.
ಈ ನಡುವೆ ರನ್ಯಾ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಬೇಲ್ ನೀಡಬಾರದು ಎಂದು ಡಿಆರ್ಐ ಅಧಿಕಾರಿಗಳ ಪರ ವಕೀಲರು ವಾದ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ದಂಧೆಯಲ್ಲಿ ರನ್ಯಾ ರಾವ್ ಜೊತೆ ಅನೇಕರು ಭಾಗಿಯಾಗಿರುವ ಶಂಕೆ ಇದೆ. ಆ ಕುರಿತು ತನಿಖೆ ಮಾಡುವುದು ಬಾಕಿ ಇದೆ. ಹಾಗಾಗಿ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಡಿಆರ್ಐ ಅಧಿಕಾರಿಗಳು ಕೋರ್ಟ್ಗೆ ಕೇಳಿದ್ದಾರೆ.
ಇದನ್ನೂ ಓದಿ: ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾಗೆ ಜಾಮೀನು ನೀಡಿದರೆ ಎಸ್ಕೇಪ್ ಆಗ್ತಾರಾ ಪ್ರಭಾವಿಗಳು?
ಐಪಿಎಸ್ ಅಧಿಕಾರಿ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ಅವರು ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಮೊದಲು ರನ್ಯಾ ದುಬೈಗೆ ಹೋಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಬಾಯಿ ಬಿಡಿಸಲಾಗುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಅವರು ಹಲವು ಬಾರಿ ದುಬೈಗೆ ಹೋಗಿ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.