
2025ನೇ ಸಾಲಿನ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಟಿಮ್ ಡೇವಿಡ್ ಆಡುತ್ತಿದ್ದಾರೆ. ಅವರು ಸ್ಟ್ರಾಂಗ್ ಹಿಟ್ಟರ್ ಎನಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಬಂದು ತಂಡದ ಮೊತ್ತ ಹೆಚ್ಚಿಸಲು ಅವರು ಕಾರಣ ಆಗುತ್ತಾರೆ. ಅವರು ದಾನಿಶ್ ಸೇಠ್ (Danish Sait) ಜೊತೆ ನೀಡಿದ ಸಂದರ್ಶನದಲ್ಲಿ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಅದೇನೆಂದರೆ ಟಿಮ್ ಡೇವಿಡ್ ಅವರು ವಿಷ್ಣುವರ್ಧನ್ ನಟನೆಯ ಸಿನಿಮಾ ಒಂದನ್ನು ನೋಡಿದ್ದಾರಂತೆ! ಈ ಫನ್ ಟಾಕ್ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಆರ್‌ಸಿಬಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ.
ನಟ, ಆ್ಯಂಕರ್ ದಾನಿಶ್ ಸೇಠ್ ಅವರು ಪ್ರತಿ ಬಾರಿ ಆರ್‌ಸಿಬಿ ಇನ್ಸೈಡರ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ಅವರು ಆಟಗಾರರ ಜೊತೆ ಮಾತುಕತೆ ನಡೆಸುತ್ತಾರೆ. ದಾನಿಶ್ ಅವರು ಈ ಬಾರಿ ಟಿಮ್ ಡೇವಿಡ್ ಜೊತೆ ಒಂದಷ್ಟು ಹರಟೆ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಒಂದು ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.
ಟಿಮ್ ಡೇವಿಡ್ ಆಸ್ಟ್ರೇಲಿಯಾ ಆಟಗಾರ. ಆದರೆ, ಅವರು ಹುಟ್ಟಿದ್ದು ಸಿಂಗಾಪುರದಲ್ಲಿ. ಈ ವಿಚಾರವನ್ನು ಟಿಮ್ ರಿವೀಲ್ ಮಾಡಿದರು. ಆಗ, ದಾನಿಶ್ ಸೇಠ್ ಅವರು ‘ನಾನು ಮೊದಲ ಬಾರಿ ಸಿಂಗಾಪುರ ನೋಡಿದ್ದು ಕನ್ನಡದ ‘ಸಿಂಗಾಪೂರ್ನಲ್ಲಿ ರಾಜ ಕುಳ್ಳ’ ಚಿತ್ರದಲ್ಲಿ. ಆ ಸಿನಿಮಾ ನೋಡಿದ್ದೀರಾ’ ಎಂದು ದಾನಿಶ್ ಕೇಳಿದ್ದಾರೆ. ಇದಕ್ಕೆ ಹೌದು ಎಂದಿದ್ದಾರೆ ಟಿಮ್.
‘ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಟಿಸಿದ್ದಾರೆ’ ಎಂದು ಟಿಮ್ ವಿವರಿಸಿದರು. ಆ ಬಳಿಕ ಈ ಚಿತ್ರದ ‘ಕುಳ್ಳರ ರಾಜ ಬಾರೋ..’ ಹಾಡಿಗೆ ಟಿಮ್ ಧ್ವನಿಗೂಡಿಸಿದ್ದಾರೆ. ಟಿಮ್ ಡೇವಿಡ್ ಅವರು ನಿಜಕ್ಕೂ ಈ ಸಿನಿಮಾನ ನೋಡಿದ್ದು ಅನುಮಾನವೇ. ಫನ್ಗಾಗಿ ಅವರು ಈ ರೀತಿ ಹೇಳಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಈ ನಟಿಗೆ 54 ವರ್ಷ; ಇವರು ಮದುವೆಯನ್ನೇ ಆಗಿಲ್ಲವೇಕೆ?
1978ರಲ್ಲಿ ಬಂದ ‘ಸಿಂಗಾಪೂರ್ನಲ್ಲಿ ರಾಜ ಕುಳ್ಳ’ ಸಿನಿಮಾನ ಸಿವಿ ರಾಜೇಂದ್ರ ಅವರು ನಿರ್ದೇಶನ ಮಾಡಿದರು. ದ್ವಾರಕೀಶ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದರು. ವಿಷ್ಣುವರ್ಧನ್, ದ್ವಾರಕೀಶ್, ಮಂಜುಳಾ ಈ ಚಿತ್ರದಲ್ಲಿ ನಟಿಸಿದ್ದರು. ಆಗಿ ಕಾಲದಲ್ಲಿ ಸಿಂಗಾಪುರಕ್ಕೆ ತೆರಳಿ ಶೂಟ್ ಮಾಡಿ ಸಿನಿಮಾ ಸದ್ದು ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:01 pm, Mon, 5 May 25