‘ಬ್ಯಾಂಕ್​ ಸ್ಟೇಟ್​​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’; ‘ಟಾಕ್ಸಿಕ್’ 120 ಕೋಟಿ ಡೀಲ್ ಬಗ್ಗೆ ದಿಲ್ ರಾಜು ಉತ್ತರ

‘ಟಾಕ್ಸಿಕ್’ ಚಿತ್ರದ ಆಂಧ್ರ-ತೆಲಂಗಾಣ ವಿತರಣಾ ಹಕ್ಕನ್ನು ದಿಲ್ ರಾಜು 120 ಕೋಟಿ ರೂಪಾಯಿಗೆ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೊಡ್ಡ ಡೀಲ್ ಬಗ್ಗೆ ಅನುಮಾನಗಳು ಮೂಡಿದ್ದವು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದಿಲ್ ರಾಜು, ‘ಹಣ ವರ್ಗಾವಣೆ ಆದ ಮೇಲೆ ಬ್ಯಾಂಕ್ ಸ್ಟೇಟ್​ಮೆಂಟ್ ತೋರಿಸಿ ನಂಬಿಕೆ ಮೂಡಿಸುತ್ತೇನೆ’ ಎಂದು ಖಡಕ್ ಉತ್ತರ ನೀಡಿದ್ದಾರೆ. ಇದು ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.

‘ಬ್ಯಾಂಕ್​ ಸ್ಟೇಟ್​​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’; ‘ಟಾಕ್ಸಿಕ್’ 120 ಕೋಟಿ ಡೀಲ್ ಬಗ್ಗೆ ದಿಲ್ ರಾಜು ಉತ್ತರ
ಯಶ್-ದಿಲ್ ರಾಜು

Updated on: Feb 13, 2026 | 7:09 AM

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಈಗಾಗಲೇ ಸಿನಿಮಾದ ಡೀಲ್​​​ಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡೋ ಜವಾಬ್ದಾರಿಯನ್ನು ದಿಲ್ ರಾಜು ಪಡೆದುಕೊಂಡಿದ್ದಾರೆ. ಅದೂ ಬರೋಬ್ಬರಿ 120 ಕೋಟಿ ರೂಪಾಯಿಗೆ. ಇಷ್ಟು ದೊಡ್ಡ ಮಟ್ಟದಲ್ಲಿ ಡೀಲ್ ನಿಜಕ್ಕೂ ಆಗಿದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

‘ಟಾಕ್ಸಿಕ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾನ ನೋಡೋಕೆ ಫ್ಯಾನ್ಸ್ ಕಾದಿದ್ದಾರೆ. ಈಗಾಗೇ ದೊಡ್ಡ ದೊಡ್ಡ ಹಂಚಿಕೆದಾರರು ಸಿನಿಮಾಗೆ ಬೇಡಿಕೆ ಇಡುತ್ತಿದ್ದಾರೆ. ದಿಲ್ ರಾಜು ಅವರು ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಸಿನಿಮಾನ ಹಂಚಿಕೆ ಮಾಡಲು ಬರೋಬ್ಬರಿ 120 ಕೋಟಿ ರೂಪಾಯಿ ಕೊಟ್ಟಿದ್ದಾರೆ.

ಎರಡು ರಾಜ್ಯಗಳಲ್ಲಿ ಹಂಚಿಕೆ ಮಾಡಲು ಇಷ್ಟು ದೊಡ್ಡ ಮಟ್ಟದಲ್ಲಿ ಹಣ ನೀಡಿದ್ದು ನಿಜವೇ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಈ ವಿಷಯದಲ್ಲಿ ಸ್ವತಃ ದಿಲ್ ರಾಜು ಅವರೇ ಉತ್ತರ ನೀಡಿದ್ದಾರೆ. ‘ಮಾರ್ಕಂಡೆ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ. ‘ಇದು ಪಬ್ಲಿಸಿಟಿ ಸ್ಟಂಟ್ ಅಥವಾ ನಿಜಕ್ಕೂ ಈ ಡೀಲ್ ನಡೆದಿದೆಯೇ’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ದಿಲ್ ರಾಜು ಅವರು, ‘ಯಾರ್ಯಾರು ಈ ಬಗ್ಗೆ ಅನುಮಾನ ಪಡ್ತಾ ಇದೀರೋ ಅವರಿಗೆ ಈ ಉತ್ತರ. ನಾನು ಬ್ಯಾಂಕ್​​ಗೆ ತೆರಳಿ ಹಣ ಟ್ರಾನ್ಸ್ಫರ್ ಮಾಡಿದ ಬಳಿಕ ಅವರಿಗೆ ನನ್ನ ಬ್ಯಾಂಕ್​ ಸ್ಟೇಟ್​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us