ಯಶ್ ನಟನೆಯ ‘ಟಾಕ್ಸಿಕ್’ ಬಗ್ಗೆ ಹರಿದಾಡಿದ ವದಂತಿಗೆ ನಿರ್ಮಾಪಕರಿಂದಲೇ ಸಿಕ್ತು ಸ್ಪಷ್ಟನೆ

ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಗ್ಗೆ ಹರಿದಾಡಿದ ಸುಳ್ಳು ಸುದ್ದಿಗೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡದ ಅತೃಪ್ತಿ, ಬಿಡುಗಡೆ ವಿಳಂಬದ ವದಂತಿಗಳನ್ನು ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ಸ್ ಸ್ಪಷ್ಟಪಡಿಸಿದೆ. ತರುಣ್ ಆದರ್ಶ್ ಟ್ವೀಟ್ ಮೂಲಕ ಮಾರ್ಚ್ 19ರಂದು ಚಿತ್ರ ನಿಗದಿತ ದಿನಾಂಕದಂದೇ ಬರಲಿದೆ ಎಂದು ಖಚಿತಪಡಿಸಲಾಗಿದೆ.

ಯಶ್ ನಟನೆಯ ‘ಟಾಕ್ಸಿಕ್’ ಬಗ್ಗೆ ಹರಿದಾಡಿದ ವದಂತಿಗೆ ನಿರ್ಮಾಪಕರಿಂದಲೇ ಸಿಕ್ತು ಸ್ಪಷ್ಟನೆ
ಯಶ್

Updated on: Oct 30, 2025 | 3:01 PM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಕೆಲವರು ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋ ಪ್ರಯತ್ನ ಮಾಡಿದ್ದರು. ಹೌದು, ‘ಟಾಕ್ಸಿಕ್’ ಸಿನಿಮಾ ಬಗ್ಗೆ ಯಶ್​ಗೆ ತೃಪ್ತಿ ಇಲ್ಲ, ಸಿನಿಮಾ ರಿಲೀಸ್ ವಿಳಂಬ ಆಗುತ್ತದೆ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹೇಳಿದ್ದರು. ಆದರೆ, ಇದು ನಕಲಿ ಸುದ್ದಿ ಅನ್ನೋದು ಸ್ಪಷ್ಟವಾಗಿದೆ. ಈ ಚಿತ್ರ ನಿರ್ಮಾಣ ಮಾಡ್ತಿರೋ ಕೆವಿಎನ್ ಪ್ರೊಡಕ್ಷನ್​​ನ ವೆಂಕಟ್ ನಾರಾಯಣ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಾವುದೇ ದೊಡ್ಡ ಸಿನಿಮಾ ಸಿದ್ಧವಾಗುತ್ತಿದೆ ಎಂದಾಗ ಅಭಿಮಾನಿಗಳು ಆಗಾಗ ಅಪ್​ಡೇಟ್ ಕೇಳುತ್ತಾರೆ. ಒಂದೊಮ್ಮೆ ಯಾವುದೇ ಅಪ್​ಡೇಟ್ ಸಿಗದೇ ಇದ್ದರೆ ಅವರು ಅಸಮಾಧಾನ ಹೊರಹಾಕುತ್ತಾರೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸೋ ಪ್ರಯತ್ನವನ್ನೂ ಮಾಡುತ್ತಾರೆ. ‘ಟಾಕ್ಸಿಕ್’ ವಿಚಾರದಲ್ಲೂ ಈಗಾ ಆಗಿದ್ದೂ ಅದೇ.

ಈ ವರ್ಷದ ಆರಂಭದಲ್ಲಿ ‘ಟಾಕ್ಸಿಕ್’ ಸಿನಿಮಾ ಕಡೆಯಿಂದ ಒಂದು ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿತ್ತು. ಇದಾದ ಬಳಿಕ ಚಿತ್ರದ ಕಡೆಯಿಂದ ಯಾವುದೇ ಅಪ್​​ಡೇಟ್ ಸಿಕ್ಕಿಲ್ಲ. ಇದನ್ನೇ ಇಟ್ಟುಕೊಂಡು ಕೆಲವರು ಫೇಕ್ ನ್ಯೂಸ್ ಹರಿಬಿಟ್ಟಿದ್ದಾರೆ. ‘ಗೀತು ಮೋಹನ್​ದಾಸ್ ನಿರ್ದೇಶನದ ಬಗ್ಗೆ ಯಶ್​ಗೆ ಖುಷಿ ಇಲ್ಲ, ಈ ಸಿನಿಮಾ ವಿಳಂಬ ಆಗೋದು ಪಕ್ಕಾ’ ಎಂದೆಲ್ಲ ಹೇಳಲಾಗುತ್ತು. ಆದರೆ, ಇದು ಶುದ್ಧ ಸುಳ್ಳು ಎನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’, ರೀಶೂಟ್ ರಿಲೀಸ್ ವಿಳಂಬ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸಾಕ್ಷಿ ಸಮೇತ ಸಿಕ್ತು ಉತ್ತರ

ಈ ಬಗ್ಗೆ ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತ ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ನಿರ್ಮಾಪಕರ ಬಳಿ ಮಾತುಕತೆ ನಡೆಸಿದ ಬಳಿಕವೇ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಅಂದುಕೊಂಡಂತೆ ಮುಂದಿನ ಮಾರ್ಚ್ 19ರಂದು ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಯಶ್ ಸದ್ಯ ‘ರಾಮಾಯಣ’ ಕೆಲಸದಲ್ಲಿ ಬ್ಯುಸಿ ಇದ್ದಾರಂತೆ. ಸದ್ಯ, ‘ಟಾಕ್ಸಿಕ್’ ತಂಡ ಕೊನೆಯ ಹಂತದ ಶೂಟ್​ನಲ್ಲಿ ಬ್ಯುಸಿ ಇದ್ದು, ಜನವರಿ ವೇಳೆಗೆ ಅದ್ದೂರಿಯಾಗಿ ಪ್ರಚಾರ ಆರಂಭಿಸೋ ಆಲೋಚನೆ ತಂಡದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.