AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಲ್ಲಿರೋ ದರ್ಶನ್ ಎರಡೂವರೆ ತಿಂಗಳಲ್ಲಿ ಕಳೆದುಕೊಂಡ ದೇಹದ ತೂಕ ಎಷ್ಟು?

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ದರ್ಶನ್ ಬರೋಬ್ಬರಿ 13 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ದಿನಚರಿ, ಜೈಲು ಪರಿಸ್ಥಿತಿ, ಸೆಲ್‌ನಲ್ಲಿ ಇರುವ ವ್ಯವಸ್ಥೆ, ಸಿಬ್ಬಂದಿಯ ಭದ್ರತಾ ನಿಯಮಗಳು ಹಾಗೂ ಓದುವ ಆಸಕ್ತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೈಲಿನಲ್ಲಿರೋ ದರ್ಶನ್ ಎರಡೂವರೆ ತಿಂಗಳಲ್ಲಿ ಕಳೆದುಕೊಂಡ ದೇಹದ ತೂಕ ಎಷ್ಟು?
ದರ್ಶನ್
Kiran HV
| Updated By: ರಾಜೇಶ್ ದುಗ್ಗುಮನೆ|

Updated on: Oct 30, 2025 | 1:33 PM

Share

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎರಡನೇ ಬಾರಿಗೆ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಆಗಸ್ಟ್ 14ರಂದು ದರ್ಶನ್ ಜೈಲು ಸೇರಿದರು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರು ಎರಡೂವರೆ ತಿಂಗಳಲ್ಲಿ ಬರೋಬ್ಬರಿ 13 ಕೆಜಿ ದೇಹದ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

ದರ್ಶನ್ ಅವರು ತಮಗೆ ಬೆಡ್​​ಶೀಟ್ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ತಿಂಗಳಿಗೆ ಒಮ್ಮೆ ಬೆಡ್​ಶೀಟ್ ಹಾಗೂ ಬಟ್ಟೆ ನೀಡಲು ಕೋರ್ಟ್ ಅನುಮತಿ ಕೊಟ್ಟಿದೆ. ದರ್ಶನ್ ಈಗ ಹೇಗೆ ವಾಸ ಮಾಡುತ್ತಿದ್ದಾರೆ, ಜೈಲಿನಲ್ಲಿ ಅವರ ಪರಿಸ್ಥಿತಿ ಹೇಗಿದೆ ಎಂಬುದರ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ದರ್ಶನ್‌ ಅವರು ಸದ್ಯ ಕ್ವಾರಂಟೈನ್ ಸೆಲ್‌ನಲ್ಲಿ ಇದ್ದಾರೆ. ಸದ್ಯ ದರ್ಶನ್ ಜೊತೆ ಇದೇ ಪ್ರಕರಣದ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಹಾಗೂ ಲಕ್ಷ್ಮಣ್ ಇದ್ದಾರೆ. ಈ ಸೆಲ್​ನಲ್ಲಿ ಯಾವುದೇ ಟಿವಿ ಇಲ್ಲ. ಸೆಲ್​ಗೆ ಭದ್ರತಾ ದೃಷ್ಟಿಯಿಂದ ಎರಡು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ
Image
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ
Image
‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ
Image
ಸೇಡು ತೀರಿಸಿಕೊಳ್ಳಲು ತಮ್ಮದೇ ತಂಡದ ರಾಶಿಕಾಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
Image
ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ

ದರ್ಶನ್ ಮುಂಜಾನೆ 4.30ಕ್ಕೆ ಎದ್ದೇಳುತ್ತಾರೆ. ಬೆಳಗ್ಗೆ 6.30ಕ್ಕೆ ಸೆಲ್‌ಗೆ ಬಂದು ಸಿಬ್ಬಂದಿ ತಪಾಸಣೆ ಮಾಡುತ್ತಾರೆ. 7.30ಕ್ಕೆ ಬ್ರೇಕ್‌ ಫಾಸ್ಟ್‌ ಪೂರೈಕೆ ಆಗುತ್ತದೆ. 11.30ಕ್ಕೆ ಸೆಲ್‌ ಓಪನ್ ಆದರೆ, ಒಂದು ಗಂಟೆ ತೆರೆದೇ ಇರುತ್ತದೆ. ಮತ್ತೆ 4.30ರಿಂದ5.30ರವರೆಗೆ ಸೆಲ್‌ ಓಪನ್‌ ಆಗಿರುತ್ತದೆ.

ದರ್ಶನ್ ಅವರು 13 ಕೆಜಿ ದೇಹದ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೊರಗೆ ಇರುವಾಗ ಅವರು ಸರಿಯಾದ ರೀತಿಯಲ್ಲಿ ಡಯಟ್ ಫಾಲೋ ಮಾಡುತ್ತಿದ್ದರು. ಆದರೆ, ಜೈಲಿನಲ್ಲಿ ಈ ಯಾವ ವ್ಯವಸ್ಥೆಯೂ ಸಿಗುತ್ತಿಲ್ಲ. ಹೀಗಾಗಿ ಅವರು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಅವರ ದೇಹದ ತೂಕದಲ್ಲಿ ಇಳಿಕೆ ಕಂಡಿದೆ.

ಇದನ್ನೂ ಓದಿ: ದರ್ಶನ್​​ಗೆ ಹರಿದ ಚಾದರ: ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ

ಬ್ಯಾರಕ್‌ನಲ್ಲಿ ಕೆಲಸ ಮಾಡುವ ನಾಲ್ವರಿಗೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಸಿಬ್ಬಂದಿ ಶಿಫ್ಟ್​ ವೈಸ್​ನಲ್ಲಿ ಭದ್ರತೆ ಕೆಲಸ ನಿರ್ವಹಿಸುತ್ತಿದ್ದಾರೆ. ಶಿಫ್ಟ್​ ಮುಗಿಯುವವರೆಗೂ ಬಾಡಿಕ್ಯಾಮೆರಾ ಕಾರ್ಯ ನಿರ್ವಹಿಸಬೇಕು. ಶಿಫ್ಟ್​ ಮುಗಿದ ಬಳಿಕ ರೆಕಾರ್ಡ್‌ ಆದ ವಿಡಿಯೋ ಅಪ್ಲೋಡ್​ ಮಾಡಬೇಕು ಎಂಬ ಕಠಿಣ ನಿಯಮ ಇದೆ. ಓದಿನ ಬಗ್ಗೆ ದರ್ಶನ್​ಗೆ ಆಸಕ್ತಿ ಮೂಡಿದೆ. ದಿನಪತ್ರಿಕೆ ಹಾಗೂ ಶಿವನ ಪುಸ್ತಕವನ್ನು ದರ್ಶನ್ ಓದುತ್ತಿದ್ದಾರೆ. ರವಿ ಬೆಳಗೆರೆ ಬರೆದ ‘ಅಮ್ಮ ಸಿಕ್ಕಿದ್ಲು’ ಪುಸ್ತಕವನ್ನೂ ಅವರು ಓದುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.