AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೋ ಯಾರೋ ಗೀಚಿ ಹೋದ ಹಾಡನ್ನು ಸುದೀಪ್​ ಹೇಳಿದಾಗ; ಇಲ್ಲಿದೆ ಹಳೆಯ ವಿಡಿಯೋ

ಕಿಚ್ಚ ಸುದೀಪ್ ಅವರ ಬಹುಮುಖ ಪ್ರತಿಭೆ ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ. ನಟನೆ, ಹಾಡುಗಾರಿಕೆ ಎರಡರಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ. 2001ರ ಸೂಪರ್‌ಹಿಟ್ ‘ಹುಚ್ಚ’ ಚಿತ್ರದ ಅವರ ವೈರಲ್ ಹಾಡು ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಸಿನಿಮಾ ಸುದೀಪ್‌ಗೆ 'ಕಿಚ್ಚ' ಎಂಬ ಹೆಸರು ತಂದುಕೊಟ್ಟಿತು.

ಯಾರೋ ಯಾರೋ ಗೀಚಿ ಹೋದ ಹಾಡನ್ನು ಸುದೀಪ್​ ಹೇಳಿದಾಗ; ಇಲ್ಲಿದೆ ಹಳೆಯ ವಿಡಿಯೋ
ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 30, 2025 | 7:45 AM

Share

ಕಿಚ್ಚ ಸುದೀಪ್ (Sudeep) ಅವರು ನಟನೆಯಿಂದ ಎಲ್ಲರ ಮನ ಗೆದ್ದವರು. ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ವಿಲನ್ ಪಾತ್ರ ಮಾಡಿ ಪರಭಾಷೆಯಲ್ಲೂ ಗಮನ ಸೆಳೆದವರು ಸುದೀಪ್. ಕಿಚ್ಚ ಸುದೀಪ್ ಅವರು ಅದ್ಭುತವಾಗಿ ಹಾಡು ಹೇಳುತ್ತಾರೆ. ಅವರ ಕಂಠಕ್ಕೆ ಅನೇಕರು ಮನ ಸೋತಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಹಳೆಯ ಹಾಡೊಂದು ಈಗ ವೈರಲ್ ಆಗಿದೆ. ಇದು ‘ಹುಚ್ಚ’ ಸಿನಿಮಾ ಸಮಯದಲ್ಲಿ ಹಾಡಿದ್ದು ಎನ್ನಲಾಗುತ್ತಿದೆ.

‘ಹುಚ್ಚ’ ಸಿನಿಮಾ 2001ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರ ಸುದೀಪ್ ಅವರಿಗೆ ಬೇರೆಯದೇ ರೀತಿಯ ಯಶಸ್ಸನ್ನು ನೀಡಿತು. ಈ ಚಿತ್ರದಲ್ಲಿ ಬರೋ ಯೇಸು ದಾಸ್ ಹಾಡಿದ ‘ಯಾರೋ ಯಾರೋ ಗೀಚಿ ಹೋದ..’ ಹಾಡು ಕೂಡ ಜನ ಮನ ಗೆದ್ದಿತು. ಈ ಹಾಡುನ್ನು ಜನರು ಸಾಕಷ್ಟು ಇಷ್ಟಪಟ್ಟರು. ಕಿಚ್ಚ ಸುದೀಪ್ ಅವರು ಈ ಹಾಡನ್ನು ಮನಸ್ಫೂರ್ತಿಯಾಗಿ ಹಾಡಿದ್ದರು.

ಸುದೀಪ್ ಅವರಿಗೆ ಅಂದಿನಿಂದಲೂ ಹಾಡಿನ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಅವರು ವೇದಿಕೆ ಮೇಲೆ ಅವಕಾಶ ಸಿಕ್ಕರೆ ಹಾಡಿಯೇ ಹಾಡುತ್ತಾರೆ. ಅದೇ ರೀತಿ ‘ಹುಚ್ಚ’ ಸಿನಿಮಾದ ‘ಯಾರೋ ಯಾರೋ..’ ಹಾಡನ್ನು ಅದ್ಭುತವಾಗಿ ಹಾಡಿದ್ದರು. ಆ ಸಮಯದಲ್ಲಿ ಸುದೀಪ್ ಅವರಿಗೆ ‘ಹುಚ್ಚ’ ಸಿನಿಮಾದ ಗೆಟಪ್​ನಲ್ಲಿಯೇ ಬಂದು ಗುಲಾಬಿ ಹೂ ನೀಡಿದ್ದರು ಮತ್ತು ಸುದೀಪ್ ಅವರು ಇದನ್ನು ಖುಷಿಯಿಂದ ಸ್ವೀಕರಿಸಿದ್ದರು.

ಇದನ್ನೂ ಓದಿ
Image
‘ನನ್ನ ಮತ್ತು ಅವರ ಮಧ್ಯೆ ಯಾರೂ ಬರಬೇಡಿ’; ಅಶ್ವಿನಿಗೆ ಎಚ್ಚರಿಸಿದ ರಕ್ಷಿತಾ
Image
ಸೇಡು ತೀರಿಸಿಕೊಳ್ಳಲು ತಮ್ಮದೇ ತಂಡದ ರಾಶಿಕಾಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
Image
ಸಾಯುವುದಕ್ಕೂ ಸರಿಯಾಗಿ ಒಂದು ವರ್ಷ ಮೊದಲು ಅಪ್ಪು ಮಾಡಿದ ಒಳ್ಳೆಯ ಕೆಲಸ ನೋಡಿ
Image
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ

ಸುದೀಪ್ ಹೇಳಿದ ಹಳೆಯ ಹಾಡು

‘ಹುಚ್ಚ’ ಸಿನಿಮಾದಲ್ಲಿ ಸುದೀಪ್ ಅವರು ಸಚ್ಚಿದಾನಂದ/ ಕಿಚ್ಚ ಹೆಸರಿನ ಪಾತ್ರ ಮಾಡಿದ್ದರು. ಅಂದಿನಿಂದ ಸುದೀಪ್ ಅವರು ಕಿಚ್ಚ ಎಂದೇ ಫೇಮಸ್ ಆದರು. ಇದರಲ್ಲಿ ಸುದೀಪ್ ಅವರು ಹುಚ್ಚನ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದರು. ಇದು 1999ರಲ್ಲಿ ತಮಿಳಿನಲ್ಲಿ ಬಂದ ‘ಸೇತು’ ಚಿತ್ರದ ರಿಮೇಕ್ ಆಗಿದೆ.

ಇದನ್ನೂ ಓದಿ: ಪುನೀತ್ ಹಾಗೂ ಸುದೀಪ್ ಗೆಳೆತನ ಹೇಗಿತ್ತು? ಇಲ್ಲಿದೆ ಅಪರೂಪದ ವಿಚಾರ

ಸುದೀಪ್ ಅವರು ಸದ್ಯ ‘ಮಾರ್ಕ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ‘ಬಿಲ್ಲ ರಂಗ ಭಾಷ’ ಸಿನಿಮಾ ಕೆಲಸಗಳು ಬಾಕಿ ಇವೆ. ಅವರು ಬಿಗ್ ಬಾಸ್ ಕೂಡ ನಡೆಸಿಕೊಡುತ್ತಿದ್ದಾರೆ. ‘ಮಾರ್ಕ್’ ಸಿನಿಮಾ ಡಿಸೆಂಬರ್​ನಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ