ಯಶ್ ಅವರ ಈ ಆಲೋಚನೆಯೇ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ..

ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ 'ಟಾಕ್ಸಿಕ್' ಚಿತ್ರ ಮಾರ್ಚ್ 19ರಂದು ತೆರೆ ಕಾಣಲಿದ್ದು, ಟ್ರೇಲರ್ ಮಾರ್ಚ್ 8ರಂದು ಬಿಡುಗಡೆಯಾಗಲಿದೆ. ಪ್ರತಿ ಸಿನಿಮಾ ಹಿಂದಿನದಕ್ಕಿಂತ ಉತ್ತಮವಾಗಿರಬೇಕು ಎಂಬ ಯಶ್ ಅವರ ಯಶಸ್ಸಿನ ತಂತ್ರ ಈ ಚಿತ್ರದಲ್ಲೂ ಮುಂದುವರಿದಿದೆ. ಮಲೆಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ 'ಕೆಜಿಎಫ್' ಮೀರಿದ ಯಶಸ್ಸು ಕಾಣುವ ನಿರೀಕ್ಷೆ ಇದೆ.

ಯಶ್ ಅವರ ಈ ಆಲೋಚನೆಯೇ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ..
ಯಶ್
Edited By:

Updated on: Mar 04, 2026 | 8:09 AM

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಚಿತ್ರದ (Toxic Movie) ಮೂಲಕ ಮಿಂಚಲು ರೆಡಿ ಆಗಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಅಂದರೆ ಮಾರ್ಚ್ 8ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಮಾಹತಿಯು ಲಭ್ಯವಾಗಿದೆ. ಯಶ್ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಆಲೋಚನೆಯೇ ಕಾರಣ ಎಂದರೂ ತಪ್ಪಾಗಲಾರದು. ಅವರು ಈ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರು. ಈ ವಿಡಿಯೋನ ಈಗ ರೀಶೇರ್​​ ಮಾಡಲಾಗುತ್ತಿದೆ.

ಯಶ್ ಅವರು ಒಂದು ಸಿನಿಮಾಗಿಂತ ಒಂದು ಸಿನಿಮಾನ ಉತ್ತಮ ನೀಡುತ್ತಾ ಬಂದರು. ಪ್ರತಿ ಬಾರಿಯೂ ಇದೇ ತಂತ್ರವನ್ನು ಅವರು ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಯಶ್ ಅವರು ಈ ಬಾರಿಯೂ ಅದೇ ತಂತ್ರವನ್ನು ಅನುಸರಿಸಿಕೊಂಡು ಹೋಗಿದ್ದಾರೆ. ಇದು ಅವರ ಜೀವನದ ಮುಖ್ಯ ಗುರಿ ಕೂಡ ಹೌದು.

ಈ ಮೊದಲು ಮಾತನಾಡಿದ್ದ ಯಶ್ ಅವರು, ‘ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾ ಉತ್ತಮವಾಗಿರಬೇಕು. ಹಳೆಯ ಸಿನಿಮಾಗಳನ್ನು ಅವು ಮರೆಸಬೇಕು’ ಎಂದು ಯಶ್ ಈ ಮೊದಲು ಮಾತನಾಡಿದ್ದರು. ‘ಕಿರಾತಕ’ ಚಿತ್ರವನ್ನು ಗೂಗ್ಲಿ, ರಾಜಾ ಹುಲಿ ಮರೆಸಿದವು’ ಎಂದೆಲ್ಲ ಅವರು ಹೇಳಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರ ಮರೆಸುವ ರೀತಿಯಲ್ಲಿ ಅವರು ಟಾಕ್ಸಿಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ

‘ಟಾಕ್ಸಿಕ್’ ಚಿತ್ರಕ್ಕೆ ಮಲಾಳಂ ನಿರ್ದೇಶಕಿ ಗಿತು ಮೋಹನ್​ ದಾಸ್ ಅವರ ನಿರ್ದೇಶನ ಇದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಅಭಿಮಾನಿಗಳಿಗೆ ಸಿಕ್ಕಿದೆ. ಗೀತು ಮೋಹನ್​ ದಾಸ್ ಅವರು ಇನ್ನೂ ಕೆಲವೇ ಸಿನಿಮಾ ಮಾಡಿದ್ದಾರೆ. ಆದರೂ ಅವರನ್ನು ಯಶ್ ಏಕೆ ಆಯ್ಕೆ ಮಾಡಿದರು ಎಂಬುದು ಜನರ ಪ್ರಶ್ನೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us