ಸಿನಿಮಾಗೆ ಹೈಪ್ ಹೆಚ್ಚಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಲ್ಚಲ್ ಸೃಷ್ಟಿ ಆಗುತ್ತದೆ. ‘ಯಶ್ 19’ (Yash 19 Movie) ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ಅಷ್ಟಿಷ್ಟಲ್ಲ. ಇಂದು (ಡಿಸೆಂಬರ್ 8) ಈ ಚಿತ್ರದ ಟೈಟಲ್ ಅನಾವರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟೈಟಲ್ ಸಾಕಷ್ಟು ಸದ್ದು ಮಾಡುತ್ತಿದೆ. ‘ಟಾಕ್ಸಿಕ್’ ಎಂಬ ಟೈಟಲ್ನ ಯಾಕೆ ಇಡಲಾಗಿದೆ ಎನ್ನುವುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಿನಿಮಾದ ಟೈಟಲ್ ನೋಡಿದ ಫ್ಯಾನ್ಸ್ ವಿಮರ್ಶೆ ತಿಳಿಸುತ್ತಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಟೈಟಲ್ ಸಾಕಷ್ಟು ಭಿನ್ನವಾಗಿದೆ. ಯಶ್ ಅವರ ಲುಕ್ ಹೇಗಿರಬಹುದು ಎಂಬುದನ್ನು ಕೂಡ ತೋರಿಸಲಾಗಿದೆ. ಸಿನಿಮಾದ ಕಥೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ‘ಟಾಕ್ಸಿಕ್’ ಸಿನಿಮಾಗೆ ಯಶ್ ಹೀರೋ, ಗೀತು ಮೋಹನ್ದಾಸ್ ನಿರ್ದೇಶಕಿ, ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ ಎಂಬ ಮಾಹಿತಿಯನ್ನು ಮಾತ್ರ ಸದ್ಯಕ್ಕೆ ರಿವೀಲ್ ಮಾಡಲಾಗಿದೆ. ಟೈಟಲ್ ನೋಡಿ ಅಭಿಮಾನಿಗಳ ವಲಯದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
This Character will make you Forget RockyBhai for sure 😌#Toxic #YashBOSS𓃵 #Yash19 https://t.co/URvWWYdpjw
— Sidಅರ್ಥ (@SidNeregal) December 8, 2023
TOXIC-Looks like a gambling movie!
Surprisingly even the release date has been announced🔥 – 10/4/25#Yash19 #ToxiC
What can we expect on Jan 8th then?👀 pic.twitter.com/L2pKWIQhJs
— Vinod 𝕏 (@Rocky23697) December 8, 2023
ಇದನ್ನೂ ಓದಿ: Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗೋದು ಯಾವಾಗ? ಇಲ್ಲಿದೆ ವಿವರ
ಎಲ್ಲರ ಮನದಲ್ಲೂ ಯಶ್ ಎಂದಾಗ ನೆನಪಾಗೋದು ‘ಕೆಜಿಎಫ್’ ಸರಣಿಯ ‘ರಾಕಿ ಭಾಯ್’ ಪಾತ್ರ. ಈ ಪಾತ್ರವನ್ನು ‘ಟಾಕ್ಸಿಕ್’ ಮರೆಸಲಿದೆ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ‘ಟಾಕ್ಸಿಕ್ ಸಿನಿಮಾ ಗ್ಯಾಂಬ್ಲಿಂಗ್ ಕುರಿತು ಇದೆ ಅನ್ನಿಸುತ್ತಿದೆ. ಸಿನಿಮಾದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. ಜನವರಿ 8ರಂದು ನಾವು ಏನನ್ನು ನಿರೀಕ್ಷಿಸಬಹುದು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Toxic: ಯಶ್ ಹೊಸ ಚಿತ್ರದ ನಿರ್ದೇಶಕಿ ಗೀತು ಮೋಹನ್ದಾಸ್ ಯಾರು? ಇಲ್ಲಿದೆ ಪರಿಚಯ
ಗೀತು ಮೋಹನ್ದಾಸ್ ಅವರು ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗ ಮೂರನೇ ಸಿನಿಮಾಗೆ ಅವರಿಗೆ ಯಶ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ‘ರಾಜಮೌಳಿ, ಪ್ರಶಾಂತ್ ನೀಲ್ ಅವರಂತೆ ಇಂಡಸ್ಟ್ರಿಯಲ್ಲಿ ಹೊಸ ಹೆಸರು ಗೀತು ಮೋಹನ್ದಾಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಶೀರ್ಷಿಕೆಯಲ್ಲಿ ಬಳಕೆಯಾದ ಬಿಜಿಎಂ ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ