AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Geetu Mohandas: ಯಶ್​ ಹೊಸ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ ಯಾರು? ಇಲ್ಲಿದೆ ಪರಿಚಯ

Toxic: ಯಶ್​ ಅಭಿನಯದ ‘ಟಾಕ್ಸಿಕ್​’ ಸಿನಿಮಾಗೆ ನಿರ್ದೇಶನ ಮಾಡೋದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ಯಶ್​ಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಸಿನಿಪ್ರಿಯರು ಆಸಕ್ತಿ ತೋರಿಸಿದ್ದಾರೆ. ಗೀತು ಮೋಹನ್​ದಾಸ್​ ಅವರ ಮೂಲ ಹೆಸರು ಗಾಯತ್ರಿ ದಾಸ್​.

Geetu Mohandas: ಯಶ್​ ಹೊಸ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ ಯಾರು? ಇಲ್ಲಿದೆ ಪರಿಚಯ
ಗೀತು ಮೋಹನ್​ದಾಸ್​, ಯಶ್​
ಮದನ್​ ಕುಮಾರ್​
| Edited By: |

Updated on:Dec 08, 2023 | 12:04 PM

Share

ಅಂತೂ ಇಂತೂ ಯಶ್​ (Yash) ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಅನೌನ್ಸ್​ ಆಗಿದೆ. ಯಶ್​ ಅವರ 19ನೇ ಸಿನಿಮಾಗೆ ‘ಟಾಕ್ಸಿಕ್​’ (Toxic Movie) ಎಂದು ಟೈಟಲ್​ ಇಡಲಾಗಿದೆ. ಇಷ್ಟು ದಿನಗಳ ಕಾಲ ಕಾದಿದ್ದರೂ ಅಭಿಮಾನಿಗಳಿಗೆ ಖುಷಿ ಆಗಿದೆ. ತುಂಬ ಡಿಫರೆಂಟ್​ ಆಗಿ ಈ ಟೈಟಲ್​ ಡಿಸೈನ್​ ಮಾಡಲಾಗಿದೆ. ಇದರ ಜೊತೆಗೆ ಕೆಲವೇ ಕೆಲವು ಮಾಹಿತಿ ಬಿಟ್ಟುಕೊಡಲಾಗಿದೆ. ‘ಕೆವಿಎನ್​’ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಲಿರುವ ‘ಟಾಕ್ಸಿಕ್​’ ಸಿನಿಮಾಗೆ ನಿರ್ದೇಶನ ಮಾಡೋದು ಯಾರು ಎಂಬುದು ಕೂಡ ಈಗ ಬಹಿರಂಗ ಆಗಿದೆ. ನಿರ್ದೇಶಕಿ ಗೀತು ಮೋಹನ್​ದಾಸ್​ (Geetu Mohandas) ಅವರು ಯಶ್​ಗೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಸಿನಿಪ್ರಿಯರು ಆಸಕ್ತಿ ತೋರಿಸಿದ್ದಾರೆ. ಗೀತು ಮೋಹನ್​ದಾಸ್​ ಹಿನ್ನೆಲೆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಗೀತು ಮೋಹನ್​ದಾಸ್​ ಅವರ ಮೂಲ ಹೆಸರು ಗಾಯತ್ರಿ ದಾಸ್​. ಅವರು ಜನಿಸಿದ್ದು 1981ರಲ್ಲಿ. ಮನೆಯಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ಗೀತು ಎಂದು ಕರೆಯುತ್ತಿದ್ದರು. ಚಿತ್ರರಂಗದಲ್ಲಿ ಅದೇ ಹೆಸರು ಮುಂದುವರಿಯಿತು. ಈಗ ಅವರಿಗೆ 42 ವರ್ಷ ವಯಸ್ಸು. ಮಲಯಾಳಂ ಚಿತ್ರರಂಗದಲ್ಲಿ ಅವರು ಪ್ರಮುಖ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.

ಗೀತು ಮೋಹನ್​ದಾಸ್​ ಅವರು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿದ್ದಾರೆ. ನಿರ್ದೇಶಕಿಯಾಗಿ ಮಾತ್ರವಲ್ಲದೇ ನಟಿಯಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ಬಾಲನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1986ರಲ್ಲಿ ತೆರೆಕಂಡ ‘ಒನ್ನು ಮುತ್ತಲ್ ಪೂಜಯಂ ವರೆ’ ಸಿನಿಮಾದಲ್ಲಿ ನಟಿಸಿ ಅವರು ‘ಅತ್ಯುತ್ತಮ ಬಾಲನಟಿ’ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಮಲಯಾಂ ಮಾತ್ರವಲ್ಲದೇ ತಮಿಳು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ನಂತರ ಅವರಿಗೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಯಿತು.

View this post on Instagram

A post shared by Yash (@thenameisyash)

ನಿರ್ದೇಶಕಿಯಾಗಿ ಗೀತು ಮೋಹನ್​ ದಾಸ್​ ಅವರು ಮಾಡಿರುವುದು ಎರಡು ಸಿನಿಮಾ ಮಾತ್ರ. ಮೊದಲ ಸಿನಿಮಾ ‘ಲೈಯರ್ಸ್​ ಡೈಸ್​’. ಎರಡನೇ ಸಿನಿಮಾ ‘ಮೂತೊನ್​’. ಈ ಎರಡೂ ಚಿತ್ರಗಳು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿವೆ. 87ನೇ ಆಸ್ಕರ್​ ಪ್ರಶಸ್ತಿಗೆ ಭಾರತದಿಂದ ‘ಲೈಯರ್ಸ್​ ಡೈಸ್​’ ಸಿನಿಮಾವನ್ನು ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ನಾಮಿನೇಟ್​ ಆಗಿರಲಿಲ್ಲ. ಈ ಚಿತ್ರಕ್ಕೆ ‘ಅತ್ಯುತ್ತಮ ನಟಿ’, ‘ಅತ್ಯುತ್ತಮ ಛಾಯಾಗ್ರಹಣ’ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ ಮೂರನೇ ಸಿನಿಮಾದಲ್ಲಿ ಅವರು ಯಶ್​ಗೆ ನಿರ್ದೇಶನ ಮಾಡುವ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ: ಯಶ್ ಹೊಸ ಚಿತ್ರಕ್ಕೆ ‘Toxic’ ಟೈಟಲ್; ಕ್ರೇಜಿಯಾಗಿದೆ ‘Yash19’ ಶೀರ್ಷಿಕೆ

ಅದ್ದೂರಿ ಬಜೆಟ್​ನಲ್ಲಿ ‘ಟಾಕ್ಸಿಕ್​’ ಸಿನಿಮಾ ಮೂಡಿಬರಲಿದೆ. ಮಹಿಳಾ ಡೈರೆಕ್ಟರ್​ ಜೊತೆ ಯಶ್​ ಅವರು ಕೈ ಜೋಡಿಸಿರುವುದು ವಿಶೇಷ. ಈ ಸಿನಿಮಾ ಮಾಸ್​ ಆಗಿ ಮೂಡಿಬರಲಿದೆ ಎಂಬುದಕ್ಕೆ ಶೀರ್ಷಿಕೆಯೇ ಸಾಕ್ಷಿ ಒದಗಿಸುತ್ತಿದೆ. 2025ರ ಏಪ್ರಿಲ್​ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:17 am, Fri, 8 December 23