ಟ್ರೇಲರ್ ಹಾಗೂ ತನ್ನ ಸ್ಟಾರ್ ತಾರಾಬಳಗದಿಂದ ಟಾಕ್ ಕ್ರಿಯೇಟ್ ಮಾಡಿರುವ ಸ್ಯಾಂಡಲ್ ವುಡ್ ಅಂಗಳದ ಬಹು ನಿರೀಕ್ಷಿತ ಸಿನಿಮಾ ‘ತ್ರಿಕೋನ’. ಹಾಡು ಹಾಗೂ ಟ್ರೇಲರ್ ಮೂಲಕ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ ಏಪ್ರಿಲ್ 8ರಂದು ಬಿಡುಗಡೆಯಾಗುತ್ತಿದೆ. ಶಕ್ತಿ, ಅಹಂ, ತಾಳ್ಮೆ ಈ ಮೂರರಲ್ಲಿ ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋ ಮೆಸೇಜ್ ಇಟ್ಟುಕೊಂಡು ಸಿನಿಮ್ಯಾಟಿಕ್ ರೂಪದಲ್ಲಿ ಅದನ್ನು ಪ್ರೇಕ್ಷಕರಿಗೆ ಹೇಳ ಹೊರಟಿದೆ ‘ತ್ರಿಕೋನ’ ಚಿತ್ರತಂಡ.
ತ್ರಿಕೋನ ಸಿನಿಮಾದ ಕಥೆ ಎಷ್ಟು ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ತಾರಬಳಗವೂ ಅಷ್ಟೇ ಪರ್ಫೆಕ್ಟ್ ಆಗಿದೆ. ಬಹುತೇಕ ಸ್ಟಾರ್ ಪೋಷಕ ನಟರೇ ಅಭಿನಯಿಸಿರೋ ಈ ಚಿತ್ರದಲ್ಲಿ ಮೂರು ಜನರೇಷನ್ ಕಥೆ ಹೇಳ ಹೊರಟಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಇಂಟ್ರಸ್ಟಿಂಗ್ ಫ್ಯಾಕ್ಟರ್ ಏನಪ್ಪ ಅಂದ್ರೆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ ಹಾಗೂ ಹಿರಿಯ ನಟ ಸುರೇಶ್ ಹೆಬ್ಳಿಕರ್ ಜೋಡಿಯಾಗಿ ಕಾಣಿಸಿಕೊಂಡಿರೋದು. ಸ್ಯಾಂಡಲ್ ವುಡ್ ಎವರ್ ಗ್ರೀನ್ ಸಿನಿಮಾ ಪಲ್ಲವಿ ಅನುಪಲ್ಲವಿಯಲ್ಲಿ ನಟಿಸಿದ್ದ ಇವರು ಮೂರು ದಶಕದ ನಂತರ ಅದರಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿದು.
ತಾಳ್ಮೆ ಮಹತ್ವ ಸಾರುವ ಈ ಚಿತ್ರದಲ್ಲಿ ಲಕ್ಷಿ, ಸುರೇಶ್ ಹೆಬ್ಳಿಕರ್ ಒಳಗೊಂಡಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಮಾರುತೇಶ್, ರಾಜ್ ವೀರ್, ಸಾಧುಕೋಕಿಲ ಮುಖ್ಯ ತಾರಾಬಳಗದಲ್ಲಿದ್ದಾರೆ. ಆಕ್ಷನ್ ಥ್ರಿಲ್ಲರ್, ಸಸ್ಪೆನ್ಸ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಕಥೆಯಷ್ಟೇ ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿ ಬಂದಿದೆ. ಪೊಲೀಸ್ ಪ್ರಕಿ ಪ್ರೊಡಕ್ಷನ್ ಬ್ಯಾನರ್ ನಡಿ ರಾಜಶೇಖರ್ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದು, ಚಂದ್ರಕಾಂತ್ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀನಿವಾಸ್ ವಿನ್ನಕೋಟ ಕ್ಯಾಮೆರಾ ವರ್ಕ್, ಸುರೇಂದ್ರನಾಥ್ ಬಿ ಆರ್ ಸಂಗೀತ ನಿರ್ದೇಶನ, ಜೀವನ್ ಪ್ರಕಾಶ್ ಎನ್ ಸಂಕಲನ ತ್ರಿಕೋನ ಚಿತ್ರಕ್ಕಿದೆ. ಟೈಟಲ್, ತಾರಾಗಣ, ಸಬ್ಜೆಕ್ಟ್ ಮುಖಾಂತರ ಸುದ್ದಿಯಲ್ಲಿರುವ ಈ ಚಿತ್ರ ಏಪ್ರಿಲ್ 8ಕ್ಕೆ ಥಿಯೇಟರ್ ಅಂಗಳಕ್ಕೆ ಕಾಲಿಡಲಿದೆ.
ಇದನ್ನೂ ಓದಿ: ತಲೆಕೂದಲು ದಾನ ಮಾಡಿದ ಸಂಜನಾ ಗಲ್ರಾನಿ; ಹೊಸ ಲುಕ್ ನೋಡಿ ಅಚ್ಚರಿ ಹೊರಹಾಕಿದ ಫ್ಯಾನ್ಸ್
ಏಪ್ರಿಲ್ 1ರ ಬದಲು ಏಪ್ರಿಲ್ 8ಕ್ಕೆ ‘ತ್ರಿಕೋನ’ ಸಿನಿಮಾ; ಚಿತ್ರದ ಬಗ್ಗೆ ಸುಚೇಂದ್ರ ಪ್ರಸಾದ್ ಮಾತು