AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್​ಚಲ್​ ಎಬ್ಬಿಸಿದ ದೇವಸೇನಾ ಮ್ಯಾರೇಜ್ ಸ್ಟೋರಿ: ಇವರನ್ನ ಕೈ ಹಿಡಿಯಲಿದ್ದಾರಾ ಸ್ವೀಟಿ?

ಸೌಥ್ ಸಿನಿಲೋಕದ ಚೆಲುವೆ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಅನೇಕ ವರ್ಷಗಳಿಂದ ಸದ್ದು ಮಾಡುತ್ತಲೇ ಇದೆ. ಈಗ ಅನುಷ್ಕಾ ಶೆಟ್ಟಿ ಮದುವೆ ವಿಚಾರವಾಗಿ ಹೊಸ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಈ ಬಾರಿ ಅನುಷ್ಕಾ ಮದುವೆ ಪಕ್ಕಾ ಅನ್ನೋ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡ್ತಾ ಇದೆ. ಅನುಷ್ಕಾ ಶೆಟ್ಟಿ… ಕರಾವಳಿ ಬೆಡಗಿ… ಟಾಲಿವುಡ್​ನಲ್ಲಿ ಮೋಡಿ ಮಾಡಿರೋ ಕನ್ನಡತಿ… ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರೋ ಅನುಷ್ಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಮ್ಯಾರೇಜ್ ವಿಚಾರಕ್ಕೇ ಹೆಚ್ಚು ಸುದ್ದಿಯಾಗ್ತಾರೆ. ಅನುಷ್ಕಾ ಅವ್ರನ್ನ […]

ಹಲ್​ಚಲ್​ ಎಬ್ಬಿಸಿದ ದೇವಸೇನಾ ಮ್ಯಾರೇಜ್ ಸ್ಟೋರಿ: ಇವರನ್ನ ಕೈ ಹಿಡಿಯಲಿದ್ದಾರಾ ಸ್ವೀಟಿ?
ಸಾಧು ಶ್ರೀನಾಥ್​
|

Updated on:Mar 01, 2020 | 12:36 PM

Share

ಸೌಥ್ ಸಿನಿಲೋಕದ ಚೆಲುವೆ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಅನೇಕ ವರ್ಷಗಳಿಂದ ಸದ್ದು ಮಾಡುತ್ತಲೇ ಇದೆ. ಈಗ ಅನುಷ್ಕಾ ಶೆಟ್ಟಿ ಮದುವೆ ವಿಚಾರವಾಗಿ ಹೊಸ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಈ ಬಾರಿ ಅನುಷ್ಕಾ ಮದುವೆ ಪಕ್ಕಾ ಅನ್ನೋ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡ್ತಾ ಇದೆ.

ಅನುಷ್ಕಾ ಶೆಟ್ಟಿ… ಕರಾವಳಿ ಬೆಡಗಿ… ಟಾಲಿವುಡ್​ನಲ್ಲಿ ಮೋಡಿ ಮಾಡಿರೋ ಕನ್ನಡತಿ… ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರೋ ಅನುಷ್ಕಾ ಸಿನಿಮಾಗಳಿಗಿಂತ ಹೆಚ್ಚಾಗಿ ಮ್ಯಾರೇಜ್ ವಿಚಾರಕ್ಕೇ ಹೆಚ್ಚು ಸುದ್ದಿಯಾಗ್ತಾರೆ. ಅನುಷ್ಕಾ ಅವ್ರನ್ನ ವರಿಸ್ತಾರೆ… ಇವ್ರನ್ನ ಮದುವೆ ಆಗ್ತಾರೆ ಅನ್ನೋ ಗಾಸಿಪ್ ಕಳೆದ ಐದಾರು ವರ್ಷಗಳಿಂದ ಹರಿದಾಡ್ತಾನೆ ಇದೆ. ಇದೀಗ ಮತ್ತೆ ಸ್ವೀಟಿ ಕೈ ಹಿಡಿಯೋ ವರ ಯಾರು ಅನ್ನೋ ವಿಚಾರ ಚರ್ಚೆಯಾಗ್ತಿದೆ.

ಅನುಷ್ಕಾ ಮದ್ವೆ ವಿಚಾರ ಚರ್ಚೆಗೆ ಬಂದಾಗಲೆಲ್ಲಾ ಡಾರ್ಲಿಂಗ್ ಪ್ರಭಾಸ್ ಹೆಸ್ರು ಮುಂದೆ ಬರ್ತಿತ್ತು. ಸ್ವೀಟಿ ಅನುಷ್ಕಾ ಬಾಹುಬಲಿಗೆ ಡಾರ್ಲಿಂಗ್​ ಆಗೋದು ಪಕ್ಕಾ ಅನ್ನೋ ಸುದ್ದಿ ಎಲ್ಲೆಡೆ ಕೇಳಿ ಬಂದಿದ್ವು. ಆದ್ರೀಗ, ಅನುಷ್ಕಾ ಜೊತೆಗೆ ಬೇರೆಯದ್ದೇ ಹೆಸ್ರು ಕೇಳಿ ಬರ್ತಿದೆ.

ಟಾಲಿವುಡ್ ಸ್ವೀಟಿ ಹೆಸ್ರು ಖ್ಯಾತ ನಿರ್ದೇಶಕರೊಬ್ಬರ ಮಗನೊಂದಿಗೆ ಮದ್ವೆ ಆಗ್ತಾರೆ ಅನ್ನೋ ವಿಚಾರ ಸಂಚಲನ ಮೂಡಿಸಿದೆ.. ಅದು ಮತ್ಯಾರೂ ಅಲ್ಲಾ, ಟಾಲಿವುಡ್ ಲೆಜೆಂಡರಿ ನಿರ್ದೇಶಕ ರಾಘವೇಂದ್ರರಾವ್ ಪುತ್ರ ಪ್ರಕಾಶ್ ಕೊವೆಲಮುಡಿ. ಇವ್ರೊಂದಿಗೆ ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ಗಾಸಿಪ್​ ಹರಿದಾಡುತ್ತಿವೆ.

ಇನ್ನು ಪ್ರಕಾಶ್ ಕೂಡಾ ನಿರ್ದೇಶಕರು.. ಜೊತೆಗೆ ಪ್ರಕಾಶ್ 2014 ರಲ್ಲೇ ಕನ್ನಿಕಾ ಧಿಲ್ಲಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ವಿಚ್ಛೇಧನ ಪಡೆದಿದ್ದರು. ಇದಾದ ಬಳಿಕ ಅನುಷ್ಕಾ ಮತ್ತು ಪ್ರಕಾಶ್ ನಡುವೆ ಲವ್ವಿ ಡವ್ವಿ ಶುರುವಾಗಿದೆ ಎಂದು ಹೇಳಾಲಾಗ್ತಿದೆ. ಇದಿಷ್ಟೇ ಅಲ್ಲಾ ಕೊವೆಲಮುಡಿ ಪ್ರಕಾಶ್ ಅನುಷ್ಕಾ ಸೈಜ್ ಜೀರೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಇದೇ ಸಿನಿಮಾ ವೇಳೆ ಇಬ್ಬರ ನಡುವೆ ಪ್ರೇಮಾಂಕುರ ಆಗಿದೆ. ಈಗ ಮದುವೆಯಂತೆ.

ಅನುಷ್ಕಾ ಪ್ರಕಾಶ್​ ಕೈ ಹಿಡಿಯೋ ವಿಚಾರ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಆದ್ರೆ, ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಇದು ಕೂಡಾ ಗಾಳಿ ಸುದ್ದಿಯೋ ಅಥವಾ ಸ್ವೀಟಿ ನಿಜವಾಗ್ಲೂ ಹಸೆಮಣೆ ಏರ್ತಾರಾ ನೋಡಬೇಕಿದೆ.

Published On - 12:33 pm, Sun, 1 March 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?