ನೀಲಿ ಕಣ್ಗಳ ಚೆಲುವೆ ಅಕ್ಷರ ಹಾಸನ್ ಹೆಲ್ತ್ ಫಿಟ್ನೆಸ್!
ಅಕ್ಷರ ಹಾಸನ್ ಸಿನಿರಂಗದಲ್ಲಿ ಭರವಸೆ ಮೂಡಿಸಿದ ನಟಿ. ಚಿತ್ರರಂಗಕ್ಕೆ ಹೊಸ ಎಂಟ್ರಿಯಾದರೂ ಮೊದಲ ನೋಟದಲ್ಲೇ ಮನಗೆದ್ದ ತಾರೆ. ನೀಲಿ ಕಣ್ಗಳ ಚೆಲುವೆ ಅಕ್ಷರ ಹಾಸನ್ ನಟನೆ ಮಾತ್ರವಲ್ಲದೆ, ಫಿಟ್ನೆಸ್ನಲ್ಲೂ ಫರ್ಪೆಕ್ಟ್ ಆಗಿದ್ದಾರೆ. ಅಕ್ಷರ ಅವರ ಫಿಟ್ನೆಸ್ ಗುಟ್ಟು ಡಯಟ್ ಚಾರ್ಟ್ ಮತ್ತು ನಿತ್ಯದ ವರ್ಕೌಟ್ ಅಂತೆ. ಇಂಟ್ರೆಸ್ಟಿಂಗ್ ಅಂದ್ರೆ ಇವರು ಸ್ಟ್ರಿಕ್ಟಾಗಿ ಡಯಟ್ ಚಾರ್ಟ್ ಫಾಲೋ ಮಾಡಲ್ವಂತೆ. ಇವರಿಗೆ ಯಾವ ಆಹಾರ ಇಷ್ಟ ಅನಿಸುತ್ತೋ ಆ ಆಹಾರವನ್ನೇ ತಿಂತಾರಂತೆ. ಆದ್ರೆ ಹೆಲ್ತಿ ಫಿಟ್ನೆಸ್ ಮೇಂಟೇನ್ ಮಾಡ್ಬೇಕಾದ್ರೆ ಕೆಲವೊಂದು […]
ಅಕ್ಷರ ಹಾಸನ್ ಸಿನಿರಂಗದಲ್ಲಿ ಭರವಸೆ ಮೂಡಿಸಿದ ನಟಿ. ಚಿತ್ರರಂಗಕ್ಕೆ ಹೊಸ ಎಂಟ್ರಿಯಾದರೂ ಮೊದಲ ನೋಟದಲ್ಲೇ ಮನಗೆದ್ದ ತಾರೆ. ನೀಲಿ ಕಣ್ಗಳ ಚೆಲುವೆ ಅಕ್ಷರ ಹಾಸನ್ ನಟನೆ ಮಾತ್ರವಲ್ಲದೆ, ಫಿಟ್ನೆಸ್ನಲ್ಲೂ ಫರ್ಪೆಕ್ಟ್ ಆಗಿದ್ದಾರೆ.
ಅಕ್ಷರ ಅವರ ಫಿಟ್ನೆಸ್ ಗುಟ್ಟು ಡಯಟ್ ಚಾರ್ಟ್ ಮತ್ತು ನಿತ್ಯದ ವರ್ಕೌಟ್ ಅಂತೆ. ಇಂಟ್ರೆಸ್ಟಿಂಗ್ ಅಂದ್ರೆ ಇವರು ಸ್ಟ್ರಿಕ್ಟಾಗಿ ಡಯಟ್ ಚಾರ್ಟ್ ಫಾಲೋ ಮಾಡಲ್ವಂತೆ. ಇವರಿಗೆ ಯಾವ ಆಹಾರ ಇಷ್ಟ ಅನಿಸುತ್ತೋ ಆ ಆಹಾರವನ್ನೇ ತಿಂತಾರಂತೆ. ಆದ್ರೆ ಹೆಲ್ತಿ ಫಿಟ್ನೆಸ್ ಮೇಂಟೇನ್ ಮಾಡ್ಬೇಕಾದ್ರೆ ಕೆಲವೊಂದು ರುಟಿನ್ ಪಾಲಿಸ್ಬೇಕಾಗುತ್ತೆ ಅನ್ನೋದು ಇವರ ಅಭಿಪ್ರಾಯ.
ಡಯಟ್ ಚಾರ್ಟ್ನಲ್ಲಿ ಸಲಾಡ್ ಮತ್ತು ಸೂಪ್ಸ್ ಇವರಿಗೆ ಫೇವರೇಟ್. ಫಿಟ್ನೆಸ್ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮ ಬೀರದಂತಿರಲು ಜಂಕ್ ಫುಡ್ಗಳಿಂದ ದೂರ ಇರ್ತಾರಂತೆ ಈ ಚೆಲುವೆ. ಇನ್ನು ಇವರ ಫುಡ್ ಮೆನುವಿನಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತೆ. ಇದು ಇವರನ್ನು ಹೆಲ್ತಿಯಾಗಿರಿಸಲು ಸಹಕಾರಿಯಾಗಿದೆಯಂತೆ.
ನ್ಯಾಚುರಲ್ ಬ್ಯೂಟಿ ಅಕ್ಷರ ಅವರಿಗೆ ಜಿಮ್ ವರ್ಕೌಟ್ ಮಾಡಲು ಅಕ್ಕ ಮತ್ತು ಅಪ್ಪನೇ ಪ್ರೇರಣೆಯಂತೆ. ಹಾಗಾಗಿ ಇತ್ತೀಚಿಗೆ ಜಿಮ್ ವರ್ಕೌಟ್ ಕಡೆ ಹೆಚ್ಚಿನ ಗಮನ ಹರಿಸ್ತಾರೆ. ವಾರದಲ್ಲಿ ಐದು ದಿನ ಜಿಮ್ ವರ್ಕೌಟ್ ಮಾಡಿ ಬೆವರಿಳಿಸ್ತಾರೆ ಈ ಬೆಡಗಿ. ಇನ್ನು ಇವರ ಜಿಮ್ ವರ್ಕೌಟ್ನಲ್ಲಿ ಕಾರ್ಡಿಯೋ ಮತ್ತು ಸ್ಟ್ರೆಂಥ್ ಟ್ರೇನಿಂಗ್ಗಳ ಕಡೆ ಹೆಚ್ಚು ಫೋಕಸ್ ಮಾಡ್ತಾರೆ. ಯಾಕಂದ್ರೆ ಈ ಎರಡು ವ್ಯಾಯಾಮ ಅಭ್ಯಾಸಗಳು ಇವರನ್ನು ಫಿಸಿಕಲೀ ಸ್ಟ್ರಾಂಗ್ ಮಾಡಿ ಫಿಟ್ ಆಗೀರೋಕೆ ಸಹಾಯ ಮಾಡಿದೆ ಅಂತಾರೆ ಅಕ್ಷರ.
Published On - 8:01 pm, Thu, 10 October 19