AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೆಕ್ಸ್ಟ್ ಲೆವೆಲ್’ ಸಿನಿಮಾ ಘೋಷಿಸಿದ ಉಪೇಂದ್ರ

Next Level movie: ಉಪೇಂದ್ರ ನಟನೆಯ ‘45’ ಮತ್ತು ‘ಕೂಲಿ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಎರಡೂ ಸಿನಿಮಾಗಳ ಚಿತ್ರೀಕರಣ ಮುಗಿದಿದೆ. ಇದೀಗ ಉಪೇಂದ್ರ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರ ಸಿನಿಮಾಗಳ ಹೆಸರುಗಳು ಸಾಮಾನ್ಯವಾಗಿ ಭಿನ್ನವಾಗಿರುತ್ತವೆ. ಈ ಸಿನಿಮಾದ ಹೆಸರೂ ಸಹ ಭಿನ್ನವಾಗಿದೆ.

‘ನೆಕ್ಸ್ಟ್ ಲೆವೆಲ್’ ಸಿನಿಮಾ ಘೋಷಿಸಿದ ಉಪೇಂದ್ರ
Upendra
ಮಂಜುನಾಥ ಸಿ.
|

Updated on: Jul 22, 2025 | 11:26 AM

Share

ಉಪೇಂದ್ರ (Upendra) ಭಿನ್ನತೆಗೆ ಹೆಸರುವಾಸಿ. ಅವರ ಸಿನಿಮಾಗಳು, ಸಿನಿಮಾ ಟೈಟಲ್​ಗಳು ಸದಾ ಭಿನ್ನವಾಗಿರುತ್ತವೆ. ಈಗಾಗಲೇ ‘45’, ತಮಿಳಿನ ‘ಕೂಲಿ’ ಸಿನಿಮಾಗಳನ್ನು ಮುಗಿಸಿದ್ದು, ಈ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿರುವುದು ವಿಶೇಷ. ಇದೀಗ ಉಪೇಂದ್ರ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಸಿನಿಮಾದ ಹೆಸರನ್ನು ಭಿನ್ನವಾಗಿರಿಸಲಾಗಿದೆ.

ಸಿನಿಮಾಗಳ ಪ್ರಚಾರದ ವೇಳೆ ಚಿತ್ರತಂಡ ಸಾಮಾನ್ಯವಾಗಿ ಹೇಳುವ ಮಾತೆಂದರೆ ನಮ್ಮದು ‘ನೆಕ್ಸ್ಟ್ ಲೆವೆಲ್’ ಸಿನಿಮಾ ಎಂದು. ಉಪೇಂದ್ರ ಅವರ ಮುಂದಿನ ಸಿನಿಮಾಕ್ಕೆ ಇದನ್ನೇ ಹೆಸರನ್ನಾಗಿ ಇಡಲಾಗಿದೆ. ಸಿನಿಮಾದ ಹೆಸರೇ ‘ನೆಕ್ಸ್ಟ್ ಲೆವೆಲ್’. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಅರವಿಂದ್‌ ಕೌಶಿಕ್‌ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ತರುಣ್‌ ಶಿವಪ್ಪ, ಈ ಸಿನಿಮಾದ ನಿರ್ಮಾಣ ಮಾಡಲಿದ್ದಾರೆ.

ನಿರ್ಮಾಪಕ ತರುಣ್‌ ಶಿವಪ್ಪ ಅವರ ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮದಲ್ಲಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆಯಂತೆ.

ಇದನ್ನೂ ಓದಿ:ಉಪೇಂದ್ರಗೆ ಉಪೇಂದ್ರ ಇಂದಲೇ ಪೈಪೊಟಿ, ಒಂದೇ ದಿನ ಎರಡು ಸಿನಿಮಾ

ನೆಕ್ಸ್ಟ್‌ ಲೆವೆಲ್‌ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್‌ ಶಿವಪ್ಪ, “ತರುಣ್‌ ಸ್ಟುಡಿಯೋಸ್‌ ಬ್ಯಾನರ್‌ ನಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್‌ ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ‘ಎ’, ‘ಉಪೇಂದ್ರ’ ಸ್ಟೈಲ್‌ನಲ್ಲಿ ನೆಕ್ಸ್ಟ್‌ ಲೆವೆಲ್‌ ಸಿನಿಮಾ ಇರಲಿದೆ. ಸದ್ಯ ಪ್ರೀ ಪ್ರೊಡಕ್ಷನ್‌ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯಲಿದೆ” ಎಂದು ತಿಳಿಸಿದ್ದಾರೆ.

‘ರೋಸ್’, ‘ಮಾಸ್ ಲೀಡರ್’, ‘ವಿಕ್ಟರಿ2’, ‘ಖಾಕಿ’, ‘ಛೂ ಮಂತರ್‌’ ಸಿನಿಮಾಗಳನ್ನು ತರುಣ್‌ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ‘ನಮ್ ಏರಿಯಾಲ್ ಒಂದಿನ’, ‘ತುಗ್ಲಕ್’, ‘ಹುಲಿರಾಯ’ ಹಾಗೂ ‘ಶಾರ್ದೂಲʼ ಚಿತ್ರಗಳನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವ ಬುದ್ಧಿವಂತ ನಿರ್ದೇಶಕ ಉಪೇಂದ್ರ ಜೊತೆ ಅರವಿಂದ್‌ ಕೌಶಿಕ್‌ ಹಾಗೂ ತರುಣ್‌ ಶಿವಪ್ಪ ಕೈ ಜೋಡಿಸಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಇನ್ನು ಉಪೇಂದ್ರ ನಟನೆಯ ‘45’ ಮತ್ತು ‘ಕೂಲಿ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ‘ಬುದ್ಧಿವಂತ 2’, ‘ಕಬ್ಜ 2’ ಸಿನಿಮಾಗಳಲ್ಲಿ ಸಹ ಉಪೇಂದ್ರ ನಟಿಸಲಿದ್ದಾರೆ. ಆದರೆ ಈ ಸಿನಿಮಾಗಳು ಇನ್ನೂ ಸೆಟ್ಟೇರಿಲ್ಲ. ಇದರ ಜೊತೆಗೆ ಈಗ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ