ರಾಷ್ಟ್ರೀಯ ಪಕ್ಷ ಆಮ್ ಆದ್ಮಿ ಪಾರ್ಟಿಯ ಹಿಂದಿಕ್ಕಿದ ಪ್ರಜಾಕೀಯ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಗಳಿಸಿದ ಮತಗಳೆಷ್ಟು?

|

Updated on: May 14, 2023 | 7:16 PM

Prajakeeya: ಉಪೇಂದ್ರ ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷ ಈ ಬಾರಿ 110 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಯಾವ ಕ್ಷೇತ್ರದಲ್ಲಿಯೂ ಗೆದ್ದಿಲ್ಲವಾದರೂ ಅಭ್ಯರ್ಥಿಗಳ ಸಾಧನೆ ಗಮನಾರ್ಹವಾಗಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಪ್ರಜಾಕೀಯ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಎಷ್ಟು ಮತ ಪಡೆದಿದ್ದಾರೆ? ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಪಕ್ಷ ಆಮ್ ಆದ್ಮಿ ಪಾರ್ಟಿಯ ಹಿಂದಿಕ್ಕಿದ ಪ್ರಜಾಕೀಯ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಗಳಿಸಿದ ಮತಗಳೆಷ್ಟು?
ಉತ್ತಮ ಪ್ರಜಾಕೀಯ ಪಾರ್ಟಿ-ಉಪೇಂದ್ರ
Follow us on

ನಟ ಉಪೇಂದ್ರ (Upendra) ತಮ್ಮನ್ನು ತಾವು ಪ್ರಜಾಕೀಯವಾದಿ ಎಂದು ಕರೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ನಿಜ ಅರ್ಥದಲ್ಲಿ ಆಚರಣೆಗೆ ಬರಬೇಕೆಂಬ ಉಮೇದಿನಿಂದ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿ ಅಭ್ಯರ್ಥಿಗಳಣ್ನು ಈ ಬಾರಿ ಚುನಾವಣೆಗೆ ಇಳಿದಿದ್ದರು. ಕರ್ನಾಟಕದಲ್ಲಿ ಪ್ರಸ್ತುತ ಇರುವ ರಾಜಕೀಯ ಪಕ್ಷಗಳಿಗಿಂತಲೂ ಎಲ್ಲ ರೀತಿಯಲ್ಲಿಯೂ ಭಿನ್ನವಾಗಿರುವ ಉಪೇಂದ್ರ ಅವರ ಪಕ್ಷದಿಂದ ಈ ಬಾರಿ 110 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದರು. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅವರನ್ನು ಸಂದರ್ಶಿಸಿ ಚುನಾವಣಾ ಟಿಕೆಟ್ ನೀಡಲಾಗಿದ್ದಿದ್ದು ವಿಶೇಷ. ಗೆದ್ದರೆ ತಾವು ಮಾಡುವ ಕಾರ್ಯ ಹಾಗೂ ಕೆಲಸ ಮಾಡದಿದ್ದರೆ ರಾಜೀನಾಮೆ ನೀಡುವ ಬಗ್ಗೆ ಬಾಂಡ್ ಸಹ ಬರೆದುಕೊಟ್ಟಿದ್ದರು ಪ್ರಜಾಕೀಯ ಅಭ್ಯರ್ಥಿಗಳು.

ಉಪೇಂದ್ರ ಸಹ ಈ ಬಾರಿ ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಭರವಸೆ ಇರಿಸಿಕೊಂಡಿದ್ದರು. ಪ್ರಜ್ಞಾವಂತ ಮತದಾರರು ಪ್ರಜ್ಞಾವಂತ ಅಭ್ಯರ್ಥಿಗೆ ಮತನೀಡುತ್ತಾರೆಂಬ ವಿಶ್ವಾಸದಲ್ಲಿದ್ದರು. ಇದೀಗ ಚುನಾವಣೆ ಫಲಿತಾಂಶ ಬಂದಿದ್ದು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಯಾವೊಂದು ಕ್ಷೇತ್ರದಲ್ಲಿಯೂ ಗೆದ್ದಿಲ್ಲ. ಹಾಗೆಂದು ಅವರ ಸಾಧನೆ ನಿರಾಶದಾಯಕ ಎಂದೇನೂ ಅಲ್ಲ. ಬದಲಿಗೆ ಆಶಾದಾಯಕ ಎಂದೇ ಹೇಳಬಹುದು.

ಬೆಂಗಳೂರಿನಲ್ಲಿನ 28 ಕ್ಷೇತ್ರಗಳನ್ನು ಪರಗಣಿಸುವುದಾದರೆ ಇಲ್ಲಿ ಪ್ರಜಾಕೀಯ ಅಭ್ಯರ್ಥಿಗಳ ಸಾಧನೆ ತೀರ ನಿರ್ಲಕ್ಷಿಸುವಂತೇನೂ ಇಲ್ಲ. ವಿಶೇಷವೆಂದರೆ ಬೆಂಗಳೂರಿನ ಬಹುತೇಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷವಾದ ಎಎಪಿ ಅಭ್ಯರ್ಥಿಗಳನ್ನು ಪ್ರಜಾಕೀಯ ಅಭ್ಯರ್ಥಿಗಳು ಹಿಂದಿಕ್ಕಿದ್ದಾರೆ. ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ಪ್ರಜಾಕೀಯ ಅಭ್ಯರ್ಥಿಗಳಿದ್ದಾರೆ.

ಇದನ್ನೂ ಓದಿ:‘ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ನಟ ಉಪೇಂದ್ರ

ಅಭ್ಯರ್ಥಿಗಳ ಈ ಪ್ರದರ್ಶನ ನೋಡಿದರೆ ಬಿಬಿಎಂಪಿ ಚುನಾವಣೆಯಲ್ಲಿ ಖಂಡಿತವಾಗಿಯೂ ಪ್ರಜಾಕೀಯ ಪಕ್ಷ ಹಲವು ವಾರ್ಡ್​ಗಳಲ್ಲಿ ನಿರ್ಣಾಯಕ ಸ್ಥಾನವಹಿಬಹುದಾದ ಸಾಧ್ಯತೆ ಇದೆ. ಬಿಬಿಎಂಪಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಎಎಪಿ ಪಕ್ಷಕ್ಕೆ ಪ್ರಜಾಕೀಯ ಕಂಟಕವಾಗುವುದು ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಖಾತ್ರಿಯಾಗಿದೆ. ಮಾತ್ರವಲ್ಲ ಬಿಬಿಎಂಪಿ ಚುನಾವಣೆಯಲ್ಲಿ ಕೆಲವು ವಾರ್ಡ್​ಗಳಿಗೆ ದೊಡ್ಡ ಪಕ್ಷಗಳಿಗೆ ಶಾಕ್ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಎಷ್ಟು ಮತಗಳನ್ನು ಪ್ರಜಾಕೀಯ ಅಭ್ಯರ್ಥಿಗಳು ಪಡೆದಿದ್ದಾರೆಂಬ ಮಾಹಿತಿ ಇಲ್ಲಿದೆ.

 

ಕ್ಷೇತ್ರ -ಅಭ್ಯರ್ಥಿ-ಪಡೆದ ಮತ

ಯಲಹಂಕ- ಅಶ್ವತ್ಥ್ ಎಚ್​ಎಂ   2944

ಕೃಷ್ಣರಾಜಪುರಂ- ಮಾದೇಶ ಎನ್   2215

ಬ್ಯಾಟರಾಯನಪುರ- ರಹೀಮ್  1490

ಯಶವಂತಪುರ – ಉದಯ್ ಕುಮಾರ್  4298

ರಾಜರಾಜೇಶ್ವರಿ ನಗರ- ಮಂಜುನಾಥ ಎಂ  4118

ದಾಸರಹಳ್ಳಿ- ಅಶ್ವತ್ಥ್ ಕುಮಾರ್  3365

ಮಹಾಲಕ್ಷ್ಮಿ ಲೇಔಟ್- ಲಕ್ಷ್ಮಿನಾರಾಯಣ ಎಂ  2863

ಮಲ್ಲೇಶ್ವರಂ- ಸ್ಪರ್ಧೆ ಇಲ್ಲ

ಹೆಬ್ಬಾಳ – ಕುಮಾರ ಎಸ್  711

ಪುಲಿಕೇಶಿ ನಗರ- ಸ್ಪರ್ಧೆ ಇಲ್ಲ

ಸರ್ವಜ್ಞ ನಗರ- ಶಿವಕುಮಾರ್  612

ಸಿ.ವಿ.ರಾಮನ್ ನಗರ- ಚೈತ್ರಾ ಜಿ  892

ಶಿವಾಜಿ ನಗರ- ಸ್ಪರ್ಧೆ ಇಲ್ಲ

ಶಾಂತಿ ನಗರ- ಸ್ಪರ್ಧೆ ಇಲ್ಲ
ಗಾಂಧಿ ನಗರ- ಬಸವರಾಜ ಎಂಡಿ  746

ರಾಜಾಜಿನಗರ- ಮೋಹನ್​ಕುಮಾರ್ ಕೆ  1213

ಗೋವಿಂದರಾಜ ನಗರ ಬಾಲಕೃಷ್ಣ ಎಂ  2148

ವಿಜಯ ನಗರ- ಎನ್ ಮಂಜುನಾಥ  1706

ಚಾಮರಾಜಪೇಟೆ- ವಿ ಸೋಮಶೇಖರ  779

ಚಿಕ್ಕಪೇಟೆ- ಎಂವಿ ವಿಷ್ಣು  757

ಬಸವನಗುಡಿ- ಡಾ ರಜನಿ ಜೆ  2192

ಪದ್ಮನಾಭ ನಗರ- ರಕ್ಷಿತ್ ಆರ್  2789

ಬಿ. ಟಿ. ಎಂ. ಲೇಔಟ್- ನಾಗೇಂದ್ರ ರಾವ್  976

ಜಯನಗರ- ಸಂತೋಶ್ ಬಿ  652

ಮಹದೇವಪುರ- ನಾಗರಾಜು ಆರ್  2627

ಬೊಮ್ಮನಹಳ್ಳಿ- ಮಮತಾ ಆರ್  1819

ಬೆಂಗಳೂರು ದಕ್ಷಿಣ- ಮನು ಎಂಎಂ  4360

ಆನೇಕಲ್- ಸ್ಪರ್ಧೆ ಇಲ್ಲ

Published On - 7:02 pm, Sun, 14 May 23